ಟೋಕಿಯೋ :ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಂದು ನಡೆದ ಮಹಿಳೆಯರ ಬಾಕ್ಸಿಂಗ್​ ವೆಲ್ಟರ್​​ವೇಯ್ಟ್ ಕ್ಯಾಟಗರಿ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ.
ಬಾಕ್ಸಿಂಗ್​ ವೆಲ್ಟರ್​ (64-69 ಕೆಜಿ) ವಿಭಾಗದಲ್ಲಿ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಅಸ್ಸಾಂನ ಲವ್ಲೀನಾ, ಜುಲೈ 30 ರಂದು ನಡೆದ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಚೀನಾದ ಚೆನ್ ನೈನ್-ಚಿನ್ ಅವರನ್ನು 4:1 ಸ್ಕೋರ್​ನಿಂದ ಮಣಿಸಿ, ಸೆಮಿಫೈನಲ್ಸ್​ ತಲುಪಿದ್ದರು.
ಇದನ್ನೂ ಓದಿ:ಅವಳಿ ಪದಕದ ಒಡತಿ ಪಿವಿ ಸಿಂಧುಗೆ ಅದ್ಧೂರಿ ಸ್ವಾಗತ
ಇಂದು ಟೋಕಿಯೋದ ಕೋಕುಗಿಕಾನ್ ಅರೆನಾದಲ್ಲಿ ನಡೆದ ಸೆಮಿಫೈನಲ್ಸ್​ನಲ್ಲಿ ವರ್ಲ್ಡ್​ ಚ್ಯಾಂಪಿಯನ್ ಆದ ಟರ್ಕಿಯ ಬುಸೆನಾಜ್ ಸೂರ್ಮೆನೆಲಿ ಅವರನ್ನು ಎದುರಿಸಿದ ಲವ್ಲೀನಾ, 0:5 ಸ್ಕೋರ್​ನೊಂದಿಗೆ ಸೋಲನುಭವಿಸಿದರು. ಮೂರು ಸುತ್ತುಗಳ ಪಂದ್ಯದಲ್ಲಿ ತೀರ್ಪುಗಾರರ ಸರ್ವಾನುಮತದ ನಿರ್ಣಯದೊಂದಿಗೆ ಬೂಸೆನಾಜ್​ ಗೆಲುವು ಸಾಧಿಸಿದ್ದು, ಒಲಿಂಪಿಕ್ಸ್​ ಫೈನಲ್ಸ್​ ತಲುಪಿದ್ದಾರೆ.(ಏಜೆನ್ಸೀಸ್)
ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

“ನಿನ್ನ ಜೊತೆ ನಾನಿದ್ದೇನೆ” – ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − one =
Remember me
