ನವದೆಹಲಿ:ವಾರ್ಷಿಕ ಆಧಾರದ ಮೇಲೆ ಮಾಹಿತಿ ವಿನಿಮಯದ ವ್ಯವಸ್ಥೆ ಅಡಿಯಲ್ಲಿ ಭಾರತವು ತನ್ನ ನಾಗರಿಕರು ಮತ್ತು ಸಂಸ್ಥೆಗಳ, ಸ್ವಿಸ್​ ಬ್ಯಾಂಕ್​ ಖಾತೆಗಳ ಹೊಸ ವಿವರಗಳನ್ನು ಸ್ವಿಟ್ಜರ್ಲೆಂಡ್​ನಿಂದ ಸ್ವೀಕರಿಸಿದೆ. ಸ್ವಿಟ್ಜರ್ಲೆಂಡ್​ 104 ದೇಶಗಳೊಂದಿಗೆ ಅಂದಾಜು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ಇದು ಸ್ವಿಟ್ಜರ್ಲೆಂಡ್​ ಮತ್ತು ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ದತ್ತಾಂಶವು ವ್ಯಕ್ತಿಗಳು, ಕಾರ್ಪೊರೇಟ್​ಗಳು ಮತ್ತು ಟ್ರಸ್ಟ್​ಗಳಿಗೆ ಸಂಬಂಧಿಸಿದ ನೂರಾರು ಹಣಕಾಸು ಖಾತೆಗಳ ಮಾಹಿತಿ ಒಳಗೊಂಡಿದೆ. ಇವುಗಳಲ್ಲಿ ಹೆಸರು, ವಿಳಾಸ, ವಾಸಿಸುವ ದೇಶ ಮತ್ತು ತೆರಿಗೆ ಗುರುತಿನ ಸಂಖ್ಯೆ ಸೇರಿದಂತೆ ಗುರುತು, ಖಾತೆ ಮತ್ತು ಹಣಕಾಸಿನ ಮಾಹಿತಿ ಇದೆ. ಕಳೆದ ತಿಂಗಳು ಈ ವಿನಿಮಯ ನಡೆದಿದ್ದು, ಮುಂದಿನ ಮಾಹಿತಿಯನ್ನು ಸ್ವಿಟ್ಜರ್ಲೆಂಡ್​ ಸೆ. 2024ರಲ್ಲಿ ಹಂಚಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಿಸ್​ ರಾಜಧಾನಿ ರ್ಬನ್​ನಲ್ಲಿ ಫೆಡರಲ್​ ಟ್ಯಾಕ್ಸ್​ ಅಡ್ಮಿನಿಸ್ಟ್ರೆಷನ್​ (ಎಫ್​ಟಿಐ) ಸೋಮವಾರ ನೀಡಿದ ಹೇಳಿಕೆಯ ಪ್ರಕಾರ, ಸ್ವಯಂಚಾಲಿತ ಮಾಹಿತಿ ವಿನಿಮಯದ ಜಾಗತಿಕ ಮಾನದಂಡದ ಚೌಕಟ್ಟಿನೊಳಗೆ ಹಣಕಾಸು ಖಾತೆಗಳ ವಿವರಗಳನ್ನು 104 ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ವರ್ಷ ಕರಕಿಸ್ತಾನ್​, ಮಾಲ್ಡೀವ್ಸ್​ ಮತ್ತು ಓಮನ್​ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಣಕಾಸು ಖಾತೆಗಳ ಸಂಖ್ಯೆ ಅಂದಾಜು ಎರಡು ಲದಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
ಈ ಮಾಹಿತಿಯಲ್ಲಿನ ವಿವರಗಳನ್ನು ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ ಇತರ ತಪ್ಪು ಕೃತ್ಯಗಳ ತನಿಖೆಗೆ ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 4 =
Remember me
