ಜಿನೀವಾ(ಸ್ವಿಜರ್ಲೆಂಡ್):ಲಡಾಖ್ ಗಡಿಯಲ್ಲಿ ಕ್ಯಾತೆ ತೆಗೆದಿರುವ ಚೀನಾಕ್ಕೆ ಭಾರತ ಜಾಗತಿಕ ವೇದಿಕೆಯಲ್ಲಿ ತಿರುಗೇಟು ನೀಡಿದೆ. ಹಾಂಕಾಂಗ್​ಗೆ ಸಂಬಂಧಿಸಿ ಚೀನಾ ರೂಪಿಸಿರುವ ವಿಶೇಷ ಕಾನೂನಿನ ಕುರಿತು ಭಾರತ ವಿಶ್ವಸಂಸ್ಥೆಯಲ್ಲಿ ವಿರೋಧ ವ್ಯಕ್ತಪಡಿಸಿದೆ. ವಿಶ್ವ ಸಮುದಾಯದಲ್ಲಿ ಚೀನಾ ಬಗ್ಗೆ ಹೆಚ್ಚುತ್ತಿರುವ ಅತೃಪ್ತಿಗೆ ಹೆಚ್ಚಿನ ಬೆಂಬಲ ಕ್ರೋಡೀಕರಿಸಲು ಇದು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಿನ್ನಮತೀಯರನ್ನು ಬಗ್ಗು ಬಡಿಯಲೆಂದೇ ಚೀನಾ ರೂಪಿಸಿರುವ ರಾಷ್ಟ್ರೀಯ ಭದ್ರತಾ ಕಾನೂನಿನ ಬಗ್ಗೆ ಹಾಂಕಾಂಗ್​ನ ಕಳವಳಕ್ಕೆ ವಿಶ್ವ ಸಮುದಾಯ ಸೂಕ್ತವಾಗಿ ಸ್ಪಂದಿಸಬೇಕು ಎಂಬುದು ಭಾರತದ ಮನವಿಯಾಗಿದೆ. ‘ಹಾಂಕಾಂಗ್​ನಲ್ಲಿ ಭಾರತೀಯರೂ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿರುವುದರಿಂದ ಅಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ಭಾರತ ಗಮನಿಸುತ್ತಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಹಾಗೂ ಕಾಯಂ ಪ್ರತಿನಿಧಿಯಾಗಿರುವ ರಾಜೀವ್ ಕೆ. ಚಂದರ್ ಹೇಳಿದ್ದಾರೆ.
ಹಾಂಕಾಂಗ್​ನಲ್ಲಿ ಸುಮಾರು 38,000 ಭಾರತೀಯರು ನೆಲೆಸಿದ್ದಾರೆ. ಮಕಾವು ಸಮೀಪ ಭಾರತೀಯ ಸಮುದಾಯದ ಸಾಕಷ್ಟು ಜನರು ವಾಸಿಸುತ್ತಿದ್ದಾರೆ. ವಿವಾದಾತ್ಮಕ ಕಾನೂನನ್ನು ಚೀನಾದ ಸಂಸತ್ತು ಮಂಗಳವಾರ ಅನುಮೋದಿಸಿದ ನಂತರ ಹಾಂಕಾಂಗ್​ನಲ್ಲಿ ಪ್ರತಿಭಟನೆ ಇನ್ನಷ್ಟು ವ್ಯಾಪಕವಾಗಿದೆ.
ಚೀನಾ, ಪಾಕ್ ಕುತಂತ್ರ ವಿಫಲ
ಪಾಕಿಸ್ತಾನದ ಕರಾಚಿ ಷೇರು ಮಾರುಕಟ್ಟೆ ಕಟ್ಟಡದ ಮೇಲೆ ನಡೆದ ಉಗ್ರ ದಾಳಿಗೆ ಭಾರತವನ್ನು ಹೊಣೆ ಮಾಡಿ ಖಂಡನಾ ಹೇಳಿಕೆ ಹೊರಡಿಸಲು ಮುಂದಾಗಿದ್ದ ಚೀನಾ ಹಾಗೂ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಮೆರಿಕ ಮತ್ತು ಜರ್ಮನಿ ಇದಕ್ಕೆ ತಡೆ ಹಾಕಿವೆ. ಈ ಮೂಲಕ ಚೀನಾಕ್ಕೆ ಮತ್ತೊಂದು ಮುಖಭಂಗವಾಗಿದ್ದು, ಭಾರತ ಮೇಲುಗೈ ಸಾಧಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಭಯೋತ್ಪಾದನೆ ಕೃತ್ಯಗಳನ್ನು ಖಂಡಿಸುವುದು ಸಹಜ ಪ್ರಕ್ರಿಯೆ. ಮಂಡನೆಯಾದ ಹೇಳಿಕೆಯನ್ನು ನಿಯಮದಂತೆ ನಾಲ್ಕು ಗಂಟೆವರೆಗೆ ‘ಮೌನ’ ಅವಧಿಗೆ ಒಳಪಡಿಸಲಾಗಿತ್ತು. ಯಾರೂ ಅದಕ್ಕೆ ಆಕ್ಷೇಪಣೆ ಎತ್ತದಿದ್ದರೆ ಅದು ಯಥಾವತ್ತಾಗಿ ಅಂಗೀಕಾರವಾಗುತ್ತದೆ. ಆದರೆ ಇದಕ್ಕೆ ಜರ್ಮನಿ, ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದವು.
ಅಮೆರಿಕಕ್ಕೂ ರಫ್ತಾಗಿದೆ ಜಾತಿ ವ್ಯವಸ್ಥೆಯ ಕರಾಳ ಮುಖ; ದಲಿತನ ವಿರುದ್ಧದ ದೌರ್ಜನ್ಯಕ್ಕೆ ಕಂಪನಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
