ನವದೆಹಲಿ: ಭಾರತ ಹಲವು ಸವಾಲುಗಳನ್ನು ಮೆಟ್ಟಿನಿಂತಿದೆ. ಕರೊನಾ ಸಂಕಷ್ಟವನ್ನೂ ಸಮರ್ಥವಾಗಿ ಎದುರಿಸುವುದರ ಜತೆಗೆ ಜಾಗತಿಕ ಆರ್ಥಿಕತೆ ಪುನಶ್ಚೇತನದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಾಗತಿಕವಾಗಿ ಮುಕ್ತ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೀಗಾಗಿ ಭಾರತ ಹೂಡಿಕೆ ಪ್ರಶಸ್ತ ಸ್ಥಳ ಎಂದು ಅವರು ಹೂಡಿಕೆದಾರರಿಗೆ ಆಹ್ವಾನ ನೀಡಿದರು. ಬ್ರಿಟನ್​ನಲ್ಲಿ ಗುರುವಾರ ಆರಂಭವಾದ ‘ಇಂಡಿಯಾ ಗ್ಲೋಬಲ್ ವೀಕ್-2020 ವರ್ಚುವಲ್ ಶೃಂಗಸಭೆಯ ಉದ್ಘಾಟನಾ ಭಾಷಣ ಮಾಡಿದ ಅವರು, ಭಾರತವು ಪ್ರತಿಭೆಯ ಆಗರವಾಗಿರುವುದರಿಂದ ಯಾವುದೇ ಸವಾಲನ್ನು ಎದುರಿಸುವ ಸಂಪನ್ಮೂಲ ಹೊಂದಿದೆ ಎಂದು ವಿವರಿಸಿದರು.
ಅಸಾಧ್ಯವಾದದ್ದನ್ನು ಸಾಧಿಸುವ ಛಲ ಭಾರತೀಯರಿಗೆ ಇದೆ. ಆದ್ದರಿಂದಲೇ ಆರ್ಥಿಕ ಪ್ರಗತಿಯ ಹಾದಿಯಲ್ಲಿ ನಾವು ಹಸಿರು ಚಿಗುರನ್ನು ಕಾಣಲು ಆರಂಭಿಸಿದ್ದೇವೆ.| ನರೇಂದ್ರ ಮೋದಿ,ಪ್ರಧಾನಿ
ಭಾರತದ ತಂತ್ರಜ್ಞಾನದ ಉದ್ದಿಮೆ ಮತ್ತು ತಂತ್ರಜ್ಞರು ದಶಕಗಳಿಂದ ತಮ್ಮ ಸಾಮರ್ಥ್ಯವನ್ನು ವಿಶ್ವಮಟ್ಟದಲ್ಲಿ ತೋರುತ್ತಿದ್ದಾರೆ. ಇವರನ್ನು ಯಾರೂ ಉಪೇಕ್ಷಿಸಲಾಗದು. ಹೀಗಾಗಿಯೇ ನಮ್ಮ ದೇಶದ ತಂತ್ರಜ್ಞರು ಜಾಗತಿಕವಾಗಿ ಕೊಡುಗೆ ನೀಡಲು ಉತ್ಸುಕರಾಗಿದಾರೆ. ಭಾರತೀಯರು ಸ್ವಾಭಾವಿಕವಾಗಿ ಸುಧಾರಣಾವಾದಿಗಳು. ಭಾರತ ಸಾಮಾಜಿಕ ಅಥವಾ ಆರ್ಥಿಕ ಸವಾಲುಗಳನ್ನು ಎದುರಿಸಿ ಬಲಿಷ್ಠವಾಗಿದೆ ಎಂದ ಪ್ರಧಾನಿ, ಈಗ ಒಂದುಕಡೆ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುವುದರ ಜತೆಗೆ ಜನರ ಆರೋಗ್ಯದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಿದೆ. ಇದೇ ವೇಳೆಗೆ ಆರ್ಥಿಕತೆಯನ್ನು ಸಬಲಗೊಳಿಸುವ ಪ್ರಯತ್ನ ಚುರುಕಾಗಿ ಮುಂದುವರಿಸಿದೆ ಎಂದರು.
ಥೀಮ್ ಏನು?:ಇಂಡಿಯಾ ಎ ಬೆಟರ್ ನ್ಯೂ ವರ್ಲ್ಡ್’ ಥೀಮ್ ಆಧಾರದಲ್ಲಿ ನಡೆಯತ್ತಿರುವ ಈ ವರ್ಚುವಲ್ ಶೃಂಗದಲ್ಲಿ 30 ದೇಶಗಳ 5 ಸಾವಿರ ಜನರು ಭಾಗಿಯಾಗಿದ್ದಾರೆ. 75 ಗೋಷ್ಠಿಗಳು ನಡೆಯಲಿದ್ದು, 250 ಮಂದಿ ಮಾತನಾಡಲಿದ್ದಾರೆ.
ಕೇಂದ್ರ ಸಚಿವರಾದ ಎಸ್. ಜೈಶಂಕರ್, ಪಿಯೂಷ್ ಗೋಯಲ್, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿ.ಸಿ. ಮುಮು, ಈಶಾ ಫೌಂಡೇಷನ್​ನ ಸದ್ಗುರು ವಾಸುದೇವ, ಆರ್ಟ್ ಆಫ್ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ್, ಬ್ರಿಟನ್​ನ ಸಚಿವರಾದ ಡಾಮಿನಿಕ್ ರಾಬ್, ಪ್ರೀತಿ ಪಟೇಲ್, ಭಾರತದಲ್ಲಿನ ಅಮೆರಿಕದ ರಾಯಭಾರಿ ಕೆನ್ ಜಸ್ಟರ್ ಮತ್ತಿತರರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ:VIDEO: ಕೂಲಿ ಕಾರ್ಮಿಕರ ಜಾಗ ತುಂಬೋದಕ್ಕೆ ಬರ್ತಿವೆ ರೊಬಾಟ್​​ಗಳು!
ಕರೊನಾ ಲಸಿಕೆ ಮುಂಚೂಣಿಯಲ್ಲಿ ಭಾರತ:ಕರೊನಾ ಸೋಂಕಿಗೆ ಔಷಧ ಅಭಿವೃದ್ಧಿಗೆ ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯದಲ್ಲಿ ಭಾರತ ಮುಂಚೂಣಿಯಲ್ಲಿ ಇರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಔಷಧ ತಯಾರಿಕಾ ವಲಯವು ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ದೊಡ್ಡ ಆಸ್ತಿಯಾಗಿದೆ. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಔಷಧ ಸಿದ್ಧ ಪಡಿಸುವುದರ ಜತೆಗೆ ಅದರ ಬೆಲೆಯನ್ನು ತಗ್ಗಿಸುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ಉಪಕಾರಿಯಾಗಿದೆ. ಆತ್ಮ ನಿರ್ಭರ ಭಾರತ ಆಂದೋಲನವು ವಿದೇಶಿಯರಿಗೆ ಭಾರತದ ಬಾಗಿಲನ್ನು ಮುಚ್ಚುವುದಿಲ್ಲ. ಇದು ಸ್ವಾವಲಂಬಿತದಲ್ಲಿ ಸುಸ್ಥಿರತೆ ಮತ್ತು ಸ್ವಯಂ ಉತ್ಪತ್ತಿ ಕಂಡುಕೊಳ್ಳುವ ಸಂಕಲ್ಪ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.
ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 18 =
Remember me
