ನವದೆಹಲಿ:ಕೊರೊನಾ ಭೀತಿಯಲ್ಲಿ ನಡುಗುತ್ತಿರುವ ಚೀನಾ ದೇಶದಲ್ಲಿರುವ ಭಾರತೀಯರನ್ನು ಈಗಾಗಲೇ ಎರಡು ವಿಶೇಷ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತರಲಾಗಿದೆ. ಮುಂದಿನ ವಾರದಲ್ಲಿ ವಿಶೇಷ ವಿಮಾನವೊಂದು ಚೀನೀಯರ ನೆರವಿಗೆಂದು ಭಾರತದಿಂದ ವೈದ್ಯಕೀಯ ಸಾಮಾಗ್ರಿಗಳು ಹೊತ್ತೊಯ್ಯಲಿದ್ದು ಭಾರತಕ್ಕೆ ಬರಲಿಚ್ಛಿಸುವ ಭಾರತೀಯರನ್ನು ಆ ವಿಮಾನದಲ್ಲಿ ವಾಪಸು ಕರೆತರಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಮುಂದಿನ ವಾರದಲ್ಲಿ ಒಂದು ವಿಶೇಷ ವಿಮಾನದಲ್ಲಿ ಭಾರತವು ಅನೇಕ ವೈದ್ಯಕೀಯ ಸಾಮಗ್ರಿಗಳನ್ನು ಚೀನಾದ ವುಹಾನ್​ಗೆ ಕಳುಹಿಸಲಿದೆ. ಈಗಾಗಲೇ ಎರಡು ವಿಶೇಷ ವಿಮಾನಗಳಲ್ಲಿ 647 ಭಾರತೀಯರು ವುಹಾನ್​ನಿಂದ ಸ್ವದೇಶಕ್ಕೆ ಬಂದಿಳಿದಿದ್ದು ಇನ್ನೂ ಅನೇಕರು ಬರಲಿಚ್ಛಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಅದೇ ಕಾರಣದಿಂದಾಗಿ ಇದೀಗ ಭಾರತಕ್ಕೆ ಬರಲಿಚ್ಛಿಸುವ ದೇಶಿಯರಿಗೆ ಈ ಕೂಡಲೇ ಅಲ್ಲಿರುವ ರಾಯಭಾರಿ ಕಚೇರಿಯನ್ನು ಭೇಟಿ ಮಾಡುವಂತೆ ತಿಳಿಸಲಾಗಿದೆ.
ಈ ಕುರಿತಾಗಿ ಟ್ವೀಟ್​ ಮಾಡಿರುವ ಚೀನಾದ ಭಾರತೀಯ ರಾಯಭಾರಿ ಕಚೇರಿಯು, ಭಾರತಕ್ಕೆ ತೆರಳಿಚ್ಛಿಸುವವರು ಕೂಡಲೇ ನಮ್ಮ ನಂಬರ್​ಗೆ ಕರೆ ಮಾಡಿ ಅಥವಾ ಮೇಲ್​ ಮಾಡಿ ಎಂದು ಫೋನ್​ ನಂಬರ್​ ಮತ್ತು ಮೇಲ್​ ಐಡಿಯನ್ನು ನೀಡಿದೆ. ಈ ದಿನ ಸಂಜೆ 7 ಗಂಟೆಯೊಳಗಾಗಿ ಸಂಪರ್ಕಿಸಿ ಎಂದು ಕೇಳಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್​ನ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಸಾವಿನ ಸಂಖ್ಯೆ 1665ಕ್ಕೂ ಹೆಚ್ಚಿದೆ.(ಏಜೆನ್ಸೀಸ್​)
We urge all Indian nationals from Wuhan/Hubei who intend to avail this flight and have not yet contacted us, to urgently call our hotlines +8618610952903 and +8618612083629 or send email to[email protected]before 1900 hours today (17 February 2020) (3/3)@MEAIndia
— India in China (@EOIBeijing)February 17, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
