ನವದೆಹಲಿ:ಸದ್ಯದ ಪರಿಸ್ಥಿತಿಯಲ್ಲಿ ಅಡುಗೆ ಎಣ್ಣೆ ಗಗನಕ್ಕೇರಿರುವ ಬೆನ್ನಲ್ಲೇ ಇನ್ನಷ್ಟು ಏರಿಕೆಯಾಗುವ ಭೀತಿ ಇತ್ತು. ಇದೀಗ ಕೇಂದ್ರ ಸರ್ಕಾರ ದೇಶದಲ್ಲಿ ಖಾದ್ಯ ತೈಲದ ಕೊರತೆ ಇಲ್ಲ ಎನ್ನುವ ಮೂಲಕ ಸ್ವಲ್ಪ ನಿರಾಳ ನೀಡಿದೆ.
ದೇಶದಲ್ಲಿ ಸಾಕಷ್ಟು ಅಡುಗೆ ಎಣ್ಣೆ ಸಂಗ್ರಹವಿದೆ. ಪ್ರಸ್ತುತ 21 ಲಕ್ಷ ಮೆಟ್ರಿಕ್​ ಟನ್​ ಇದ್ದು, ಮೇ ಅಂತ್ಯದೊಳಗೆ ಇನ್ನು 12 ಲಕ್ಷ ಮೆಟ್ರಿಕ್​ ಟನ್​ ಎಣ್ಣೆ ಆಮದಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕಳೆದ ವರ್ಷಕ್ಕಿಂತ ಸೋಯಾಬಿನ್​ ಉತ್ಪಾದನೆಯಲ್ಲಿ ಈ ವರ್ಷ ದುಪ್ಪಟ್ಟಾಗಿದ್ದು, 126.02 ಲಕ್ಷ ಮೆಟ್ರಿಕ್​ ಟನ್​ ಸಂಗ್ರಹವಾಗಿದ್ದು, ಸಾಸಿವೆ ಎಣ್ಣೆ ಸಹ ಶೇ.37ರಷ್ಟು ಅಧಿಕ ಉತ್ಪಾದನೆಯಾಗಿದೆ ಹಾಗಾಗಿ ಸದ್ಯ ಅಡುಗೆ ಎಣ್ಣೆಯ ಕೊರತೆ ಇಲ್ಲ ಎಂದು ಹೇಳಿದೆ.
ಇಂಡೋನೇಷ್ಯಾಗೆ ರಫ್ತಾಗುತ್ತಿದ್ದನ್ನು ಸದ್ಯ ಸ್ಥಗಿತಗೊಳಿಸಿರುವುದರಿಂದ ತಾಳೆ ಎಣ್ಣೆ ಸಹ ಸಾಕಷ್ಟಿದೆ. ಸದ್ಯಕ್ಕೆ ಯಾವುದೇ ಕೊರತೆ ಇಲ್ಲ ಎಂದಿದೆ.
ಹೆಗಲಮೇಲೆ ಹೆಬ್ಬಾವು ಹೊತ್ತು ಕುಣಿಸಿದ ಈ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 5 =
Remember me
