ನವದೆಹಲಿ:ಭಾರತದ ಸಾರ್ವಭೌಮತ್ವ ಹಾಗೂ ಐಕ್ಯತೆಗೆ ಧಕ್ಕೆ ತರುವಂಥ ಯಾವುದೇ ಕೆಲಸ ಮಾಡುವುದು ಖಂಡಿತ ಸ್ವೀಕಾರಾರ್ಹವಲ್ಲ ಎಂದಿರುವ ಕೇಂದ್ರ ಸರ್ಕಾರ, ಟ್ವಿಟರ್ ಕಂಪನಿಗೆ ಖಡಕ್ ಎಚ್ಚರಿಕೆಯನ್ನೇ ನೀಡಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟರ್​ ಸಿಇಒ ಜಾಕ್​ ಡಾರ್ಸೆ ಅವರಿಗೆ ಪತ್ರ ಬರೆದಿದೆ.
ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟ್ವಿಟರ್​ಗೆ ಈ ಸೂಚನೆ ನೀಡಿದೆ. ಜಮ್ಮು-ಕಾಶ್ಮೀರದಲ್ಲಿನ ಲೇಹ್​ಅನ್ನು ಟ್ವಿಟರ್​ ಜಿಯೊ ಟ್ಯಾಗ್ ರಿಪಬ್ಲಿಕ್​ ಆಫ್​ ಚೈನಾ ಎಂದು ತೋರಿಸಿತ್ತು. ಇಂಥ ಪ್ರಯತ್ನಗಳು ಟ್ವಿಟರ್ ಗೌರವಕ್ಕೆ ಧಕ್ಕೆ ತರುತ್ತದೆ ಎಂದಿರುವ ಐಟಿ ಸೆಕ್ರೆಟರಿ ಅಜಯ್​ ಸ್ವಾನೆ, ಪತ್ರ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಲೇಹ್​ ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಹೆಡ್​ ಕ್ವಾರ್ಟರ್​. ಹಾಗೇ ಲಡಾಖ್​ ಹಾಗೂ ಜಮ್ಮು-ಕಾಶ್ಮೀರ ಎರಡೂ ಭಾರತದ ಅವಿಭಾಜ್ಯ ಅಂಗಗಳು ಎಂದು ಅವರು ಟ್ವಿಟರ್​ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)
Cheap essay writing servicebyu/Dutehoffinessayscammers

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 5 =
Remember me
