ನವದೆಹಲಿ:ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವೈದ್ಯರು ಗಡಿ ಕಾಯುವ ಯೋಧರಂತೆಯೇ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಈವರೆಗೆ ಅನೇಕರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ನೀಡಿರುವ ಮಾಹಿತಿ ಪ್ರಕಾರ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಈವರೆಗೆ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಜನರಲ್​ ಪ್ರಾಕ್ಟಿಷನರ್​ ಆಗಿದ್ದಾರೆ.
ಇದನ್ನೂ ಓದಿ;ಕರೊನಾ ನಿಗ್ರಹಕ್ಕೆ ಅಡ್ಡಿಯಾದ ಜಲಕ್ಷಾಮ; ಇವರಿಗೆ ಲಸಿಕೆಗೂ ಮುನ್ನ ಬೇಕಿದೆ ನೀರು…!
ಕೋವಿಡ್​ ರೋಗಿಗಳಲ್ಲಿ ಹೆಚ್ಚಿನವರು ಜ್ವರ ಹಾಗೂ ಅದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಇಂಥವರಿಗೆ ಜನರಲ್​ ಪ್ರಾಕ್ಟಿಷನರ್​ಗಳೇ ಚಿಕಿತ್ಸೆ ನೀಡುತ್ತಾರೆ. ಜತೆಗೆ, ಕೋವಿಡ್​ ಸಂಪರ್ಕದ ಮೊದಲ ಬಲಿಪಶು ಇವರೇ ಆಗಿರುತ್ತಾರೆ ಎಂದು ಮಂಡಳಿ ಹೇಳಿದೆ.
ಈವರೆಗೆ ಪ್ರಾಣ ತೆತ್ತಿರುವ ವೈದ್ಯರ ಮಾಹಿತಿಯನ್ನು ಬಿಡುಗಡೆ ಮಾಡಿರುವ ಐಎಂಎ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಮೃತ ವೈದ್ಯರಲ್ಲಿ 50ಕ್ಕೂ ಹೆಚ್ಚು ವಯಸ್ಸಿನವರ ಸಂಖ್ಯೆ 170. ಶೇ.40 ಜನರು ಜನರಲ್​ ಪ್ರಾಕ್ಟಿಷನರ್​ ಆಗಿದ್ದಾರೆ. ಹೀಗಾಗಿ ವೈದ್ಯರ ಸುರಕ್ಷತೆ ಬಗ್ಗೆ ಐಎಂಎ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ;ಇಂದಿನ ಕೋವಿಡ್​ ಸೋಂಕಿತರು 7,178; ಒಂದೇ ದಿನದಲ್ಲಿ ಅತ್ಯಧಿಕ; ಜಿಲ್ಲಾ ಕೇಂದ್ರಗಳಲ್ಲಿ ಬಿಗಡಾಯಿಸುತ್ತಿದೆ ಸ್ಥಿತಿ
ತಮಿಳುನಾಡಿನಲ್ಲಿ ಅತಿ ಹೆಚ್ಚು ವೈದ್ಯರು ಬಲಿಯಾಗಿದ್ದಾರೆ. ಮಹಾರಾಷ್ಟ್ರ, ಗುಜರಾತ್​ನಲ್ಲಿ ತಲಾ 23, ಬಿಹಾರ್​-19, ಪಶ್ಚಿಮ ಬಂಗಾಳ-16, ದೆಹಲಿಯಲ್ಲಿ ಕೋವಿಡ್​ನಿಂದಾಗಿ ಮೃತಪಟ್ಟ ವೈದ್ಯರ ಸಂಖ್ಯೆ 12 ಆಗಿದೆ. ಕೋವಿಡ್​ನಿಂದಾಗಿ ಮೃತಪಡುತ್ತಿರುವ ವೈದ್ಯರ ಸಂಖ್ಯೆ ಗಮನಿಸಿದರೆ ನಿಜಕ್ಕೂ ಅಪಾಯಕಾರಿ ಎನಿಸಿದೆ ಎಂದು ಐಎಂಎ ಹೇಳಿದೆ.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
