ನವದೆಹಲಿ:ಎಂಥದ್ದೇ ಪರಿಸ್ಥಿತಿಯಲ್ಲಿ ಭಾರತ ಯಾವುದೇ ಜಾಗತಿಕ ಶಕ್ತಿಯ ಎದುರು ತಲೆಬಾಗಿಲ್ಲ, ಮುಂದೆ ತಲೆಬಾಗಿಸುವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೇಹ್​ ಪ್ರವಾಸದಲ್ಲಿರುವ ಅವರು, ಜೂ.15ರಂದು ಚೀನಾ ಯೋಧರೊಂದಿಗಿನ ರಕ್ತಸಿಕ್ತ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧರನ್ನು ಲೇಹ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ನಿಮ್ಮಂಥ ಧೀರೋದಾತ್ತ ಯೋಧರಿಗೆ ಜನ್ಮ ನೀಡಿದ ನಿಮ್ಮೆಲ್ಲ ತಾಯಂದಿರು ಹಾಗೂ ಶೂರರೂ, ವೀರರೂ ಆದ ತಮಗೆ ತಲೆಬಾಗಿ ವಂದಿಸುವೆ ಎಂದರು.
ಇದನ್ನೂ ಓದಿ:ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ, ಇನ್ನೇನಿದ್ದರೂ ಅಭಿವೃದ್ಧಿ ಪರ್ವ
ನಮ್ಮ ಶೂರವೀರ ಯೋಧರು ಮೆರೆದ ಸಾಹಸಗಾಥೆ ಈಗಾಗಲೆ ಜಗತ್ತಿನಾದ್ಯಂತ ಭಾರಿ ಜನಪ್ರಿಯವಾಗಿದೆ. ಭಾರಿ ಬಲಪ್ರಯೋಗಕ್ಕೆ ಎದೆಗೊಟ್ಟು ನಿಂತ ಅವರ ಧೈರ್ಯವನ್ನು ಮೆಚ್ಚಲೇ ಬೇಕು. ಹಾಗಾಗಿಯೇ ಜಗತ್ತು ಈಗ ಅಂಥ ಸಾಹಸ ಮೆರೆದ ಶೂರರು, ವೀರರು ಯಾರು? ಅವರಿಗೆ ಕೊಟ್ಟ ತರಬೇತಿ ಏನು? ಅವರ ಬಲಿದಾನ ಏನು ಎಂಬೆಲ್ಲ ಪ್ರಶ್ನಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ನಮ್ಮನ್ನು ಅಗಲಿದ ಶೂರರು ಯಾರೂ ಸುಮ್ಮನೇ ಸದ್ಗತಿ ಪಡೆದುಕೊಳ್ಳಲಿಲ್ಲ. ಅವರೆಲ್ಲರೂ ಶತ್ರು ಪಾಳೆಯದವರಿಗೆ ದಿಟ್ಟತನದ ಪ್ರತಿರೋಧ ತೋರಿ, ಪಾಠ ಕಲಿಸಿಯೇ ಹೋಗಿದ್ದಾರೆ. ನಿಮ್ಮ ಸಾಹಸ, ನೀವು ಸುರಿಸುವ ರಕ್ತದ ಪ್ರತಿ ಕಣವೂ ನಮ್ಮ ಯುವಶಕ್ತಿ ಮತ್ತು ಜನರಿಗೆ ಪೀಳಿಗೆಗಳವರೆಗೆ ಸ್ಫೂರ್ತಿ ಉಕ್ಕಿಸುತ್ತವೆ ಎಂದು ಹೇಳಿದರು.
ಆ.15ಕ್ಕೆ ಬಿಡುಗಡೆ ಸಜ್ಜಾಗುತ್ತಿರುವ ಕೊವ್ಯಾಕ್ಸಿನ್​ ಬಗ್ಗೆ ಭಾರತ್​ ಬಯೋಟೆಕ್​ ಸಿಎಂಡಿ ಏನು ಹೇಳುತ್ತಾರೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × three =
Remember me
