| ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ಭಾರತದ ಅಧ್ಯಕ್ಷತೆಯ ಜಿ-20 ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ಹೆಮ್ಮೆಯ ಭಾವನೆ ತುಂಬಿದೆ. “ಅಮೃತಕಾಲ”ವನ್ನು ಪ್ರವೇಶಿಸಿರುವ ಭಾರತವು ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರಿವರ್ತನೆಯತ್ತ ಪ್ರಯಾಣವನ್ನು ಪ್ರಾರಂಭಿಸಿದೆ. ಕೃಷಿ ಕ್ಷೇತ್ರವು ಯಾವಾಗಲೂ ಮಾನವನ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ, ಜೀವನಾಧಾರ, ಜೀವನೋಪಾಯ ಮತ್ತು ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತಿದೆ. ಡಿಜಿಟಲೀಕರಣ ಮತ್ತು ವಿನೂತನ ತಂತ್ರಜ್ಞಾನಗಳ ಆಗಮನದೊಂದಿಗೆ, ಕೃಷಿ ಕ್ಷೇತ್ರವು ಪರಿವರ್ತನೆಯ ಹೊಸ ಅಲೆಗೆ ಸಾಕ್ಷಿಯಾಗಿದೆ. ಈ ಡಿಜಿಟಲ್ ಕ್ರಾಂತಿಯು ಕೃಷಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಹಾರ ಭದ್ರತೆ, ಪರಿಸರ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸಲು ಸರ್ಕಾರಗಳು ಮತ್ತು ಭಾಗೀದಾರರಿಗೆ ಸಹಾಯ ಮಾಡುತ್ತದೆ.
ಈ ಪರಿವರ್ತನೆಯ ಹೃದಯಭಾಗದಲ್ಲಿ ಮುಕ್ತ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದ ಪರಿಕಲ್ಪನೆ ಇದೆ. ಇದು ಕೃಷಿಯಲ್ಲಿ ಪರಿಣಾಮಕಾರಿ, ಸಮನ್ವಯಕಾರಿ ಮತ್ತು ಪ್ರಮಾಣಕಾರಿಯಾದ ಡಿಜಿಟಲ್ ಪರಿಹಾರಗಳಿಗೆ ನಿರ್ಣಾಯಕವಾಗಿದೆ. ಮುಕ್ತ ಮಾನದಂಡಗಳು ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಅಳವಡಿಸಿಕೊಳ್ಳುವುದು, ಡಿಜಿಟಲ್ ಸಾರ್ವಜನಿಕ ಸರಕುಗಳ ಅಂತರ್ಗತ ಬೆಳವಣಿಗೆಯನ್ನು ಹೆಚ್ಚಿಸುವುದು, ಸಹಕಾರವನ್ನು ಉತ್ತೇಜಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಅಳವಡಿಕೆಯನ್ನು ತ್ವರಿತಗೊಳಿಸುವ ಮೂಲಕ ಅಂತರರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರೀಯ ಗುರುತು ಮತ್ತು ಡಿಜಿಟಲ್ ಪಾತಿ ಮೂಲಸೌಕರ್ಯ (ಇಂಡಿಯಾ ಸ್ಟಾಕ್) ಮತ್ತು ಆಧಾರ್ ವ್ಯವಸ್ಥೆ, ಏಕೀಕೃತ ಪಾವತಿಗಳ ಇಂಟರ್ ಫೇಸ್ (ಯುಪಿಐ) ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸೇರಿದಂತೆ ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ನವೀನ ಉಪಕ್ರಮಗಳಲ್ಲಿ ಡಿಜಿಟಲ್ ಸಾರ್ವಜನಿಕ ಸರಕುಗಳ ಉದಾಹರಣೆಯನ್ನು ಕಾಣಬಹುದು.
ಕೃಷಿಯಲ್ಲಿ ಇದೇ ರೀತಿಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಅನ್ವಯವು ಕೃಷಿ ಪದ್ಧತಿಗಳಲ್ಲಿ ಕ್ರಾಂತಿಕಾರಿ ಮತ್ತು ಸಮರ್ಥನೀಯ ವಿಧಾನಗಳ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಭರವಸೆ ನೀಡುತ್ತದೆ. ನೈಜ ಸಮಯದ ಮಾರ್ಗದರ್ಶನ, ಇಂಟರ್ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ ಮತ್ತು ರಿಮೋಟ್ ಸೆನ್ಸಿಂಗ್ ನಂತಹ ಸೇವೆಗಳು ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ಕೃಷಿ ವಲಯದಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುತ್ತವೆ. ಹಣಕಾಸು ಮತ್ತು ಇತರ ಸಂಪನ್ಮೂಲಗಳಿಗೆ ಸುಲಭ ಪ್ರವೇಶವು ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಮಾನ ಅವಕಾಶವನ್ನು ಕಲ್ಪಿಸುತ್ತದೆ. ಇದು ಅವರಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಲು, ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಮತ್ತು ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ಕೃಷಿಯಲ್ಲಿ ಡಿಜಿಟಲೀಕರಣದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು, ದತ್ತಾಂಶ ಹಂಚಿಕೆ ಮತ್ತು ಕೃಷಿ ವಲಯದಲ್ಲಿ ಮುಕ್ತತೆಯನ್ನು ಉತ್ತೇಜಿಸುವ ನೀತಿಗಳನ್ನು ಪ್ರೋತ್ಸಾಹಿಸಬೇಕು. ಈ ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ಇಬ್ಬರೂ ಪಾಲುದಾರರನ್ನು ಜಮೀನಿನಿಂದ ಊಟದ ತಟ್ಟೆಯವರೆಗೆ ತೊಡಗಿಸಿಕೊಳ್ಳುವ ಡೇಟಾ-ಚಾಲಿತವಾದ, ಬುದ್ಧಿವಂತಿಕೆಯ, ಕ್ರಿಯಾತ್ಮಕ ಮತ್ತು ಅಂತರ್ ಸಂಪರ್ಕಿತ ವ್ಯವಸ್ಥೆಗಳ ಸುತ್ತ ಇರಬೇಕು. ಜಿ-20 ಸದಸ್ಯ ರಾಷ್ಟ್ರಗಳು ಎಲ್ಲಾ ಭಾಗೀದಾರರೊಂದಿಗೆ ಸಹಕರಿಸಲು ಮತ್ತು ಡಿಜಿಟಲ್ ಉಪಕರಣಗಳು ಮತ್ತು ತಂತ್ರಜ್ಞಾನದ ಪ್ರಸರಣ ಸೇರಿದಂತೆ ಸಾಮರ್ಥ್ಯ ವರ್ಧನೆಯ ಪ್ರಯತ್ನಗಳನ್ನು ಬಲಪಡಿಸಲು ಮತ್ತು ರೈತರು, ವಿಶೇಷವಾಗಿ ಸಣ್ಣ, ಅತಿಸಣ್ಣ ಹಿಡುವಳಿದಾರರು, ಮಹಿಳೆಯರು, ಯುವಕರು, ಸ್ಥಳೀಯರು, ವಯಸ್ಸಾದ ರೈತರು ಮತ್ತು ಇತರ ಕಡಿಮೆ ಪ್ರಾತಿನಿಧ್ಯದ ಗುಂಪುಗಳಲ್ಲಿ ಅದರ ಅಳವಡಿಕೆಯನ್ನು ಉತ್ತೇಜಿಸಲು ಬದ್ಧವಾಗಿವೆ.
ಗಡಿಯಾಚೆಗಿನ ಮತ್ತು ಅಂತರರಾಷ್ಟ್ರೀಯ ಅನುಭವಗಳ ವಿನಿಮಯವು ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆಗೆ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಆಹಾರ ವ್ಯವಸ್ಥೆಗಳನ್ನು ಸುಧಾರಿಸುತ್ತದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸ್​ಟಿಐ) ಉಪಕ್ರಮಗಳ ಮೂಲಕ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಒಳಗೊಳ್ಳುವಿಕೆಯು ತಾಂತ್ರಿಕ ಮತ್ತು ಡಿಜಿಟಲ್ ಬೆಂಬಲದ ಕೃಷಿ-ಆಹಾರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಮುಕ್ತ ಡಿಜಿಟಲ್ ನೆಟ್ವರ್ಕ್ ಗಳನ್ನು ಬಳಸಿಕೊಂಡು ಕೃಷಿ ಮೌಲ್ಯ ಸರಪಳಿಯಾದ್ಯಂತ ಸವಾಲುಗಳನ್ನು ಎದುರಿಸುವ ವಿನೂತನ ಮತ್ತು ಕೈಗೆಟುಕುವ ಪರಿಹಾರಗಳನ್ನು ಒದಗಿಸುವ ಮೂಲಕ ಅಗ್ರಿ-ಟೆಕ್ ಸ್ಟಾರ್ಟ್ ಅಪ್ ಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.
ಅತ್ಯಾಧುನಿಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ಮುಕ್ತ ಡಿಜಿಟಲ್ ನೆಟ್‌ವರ್ಕ್‌ಗಳ ಸಾಮರ್ಥ್ಯವು ನಮ್ಮನ್ನು ಆಹ್ವಾನಿಸುತ್ತದೆ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ನಮಗೆ ಕರೆ ನೀಡುತ್ತದೆ. ಇದು ಬಹು ಆಯಾಮದ, ಬಹು-ಪಾಲುದಾರರ ಮತ್ತು ಸಹಯೋಗದ ಅಗತ್ಯವಿರುವ ಕರೆಯಾಗಿದೆ. ಇಂತಹ ಸಾಮೂಹಿಕ ಪ್ರಯತ್ನಗಳ ಮೂಲಕ ಮಾತ್ರ ನಾವು ಕೃಷಿಯಲ್ಲಿ ಡಿಜಿಟಲೀಕರಣದ ಪರಿವರ್ತಕ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು. ರೈತರಿಗೆ ಮತ್ತು ವಿಶಾಲವಾದ ಕೃಷಿ ಪರಿಸರ ವ್ಯವಸ್ಥೆಗೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯವನ್ನು ಖಾತ್ರಿಪಡಿಸಿಕೊಳ್ಳಬಹುದಾದ ಕ್ರಮಗಳನ್ನು ಕೈಗೊಳ್ಳುವ ಸಮಯ ಇದೀಗ ಬಂದಿದೆ ಮತ್ತು ಇದು ಕೃಷಿ ಮತ್ತು ಜಾಗತಿಕ ಆಹಾರ ಭದ್ರತೆಯ ಸುಧಾರಣೆಗಾಗಿ ನಾವು ಗಮನಹರಿಸಬೇಕಾದ ಕರೆಯಾಗಿದೆ.
ಭಾರತವು ಡಿಜಿಟಲ್ ಕ್ರಾಂತಿಯ ಮೂಲಕ ಕೃಷಿಯನ್ನು ಪರಿವರ್ತಿಸುವತ್ತ ಗಮನಹರಿಸುತ್ತಿರುವುದು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಸವಾಲುಗಳನ್ನು ಪರಿಹರಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಸಭೆಗಳ ವಿಚಾರ ಮಂಥನವು ದೇಶ ಮತ್ತು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಜಿ-20 ರಲ್ಲಿ ಕೃಷಿ ಕಾರ್ಯಕಾರಿ ಗುಂಪು ಪ್ರಮುಖವಾದುದು. ಇದು ಕಳೆದ ತಿಂಗಳುಗಳಲ್ಲಿ ಸುಸ್ಥಿರ ಕೃಷಿಯ ಮೂಲಕ ಆಹಾರ ಭದ್ರತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸಲು ಒತ್ತು ನೀಡುವ ಉದ್ದೇಶದೊಂದಿಗೆ ಭಾರತದ ವಿವಿಧ ನಗರಗಳಲ್ಲಿ ಸಭೆಗಳನ್ನು ನಡೆಸಿದೆ. ಸಭೆಗಳಲ್ಲಿ ಇದು ಪ್ರಮುಖ ವಿಷಯವಾಗಿತ್ತು, ಇದು ಇಡೀ ಜಗತ್ತಿಗೆ ಸಂಬಂಧಿಸಿದ್ದಾಗಿದೆ.
ಈ ಬೃಹತ್ ಕಾರ್ಯಕ್ರಮಗಳಲ್ಲಿ ನಡೆದ ಜಿ-20 ಕೃಷಿ ಕಾರ್ಯಕಾರಿ ಗುಂಪು ಸಭೆಗಳು ಐತಿಹಾಸಿಕವಾಗಿವೆ. ಕೃಷಿ ಕಾರ್ಯಕಾರಿ ಗುಂಪಿನ ಸಾಧನೆಗಳು ಭಾರತದ ಸ್ವಚ್ಛ ನಗರವಾದ ಇಂದೋರ್ ನಿಂದ, ಉತ್ತಮ ಯೋಜಿತ ನಗರವಾದ ಚಂಡೀಗಢ, ಪವಿತ್ರ ನಗರವಾದ ವಾರಣಾಸಿ ಮತ್ತು ಅಂತಿಮವಾಗಿ ಸಮ್ಮೋಹನಗೊಳಿಸುವ ಮುತ್ತಿನ ನಗರಿ ಹೈದರಾಬಾದ್ ವರೆಗೆ ಪ್ರಯಾಣಿಸಿದ 200 ಕ್ಕೂ ಹೆಚ್ಚು ಪ್ರತಿನಿಧಿಗಳ ಸಾಮೂಹಿಕ ಪ್ರಯತ್ನಗಳನ್ನು ಪ್ರತಿನಿಧಿಸುತ್ತವೆ.
16-17 ಜೂನ್ 2023 ರಂದು ಭಾರತದ ಹೈದರಾಬಾದ್ ನಲ್ಲಿ ನಡೆದ ಜಿ20 ಕೃಷಿ ಸಚಿವರ ಸಭೆಯು ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಕುರಿತು ಜಾಗತಿಕವಾಗಿ ಪ್ರಮುಖ ಮೈಲಿಗಲ್ಲಾಯಿತು. ಈ ಸಭೆಯು ಎಲ್ಲರನ್ನು ಒಳಗೊಂಡ ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಕೃಷಿ ವ್ಯವಸ್ಥೆಯನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಬದ್ಧತೆಗಳನ್ನು ಪುನರುಚ್ಚರಿಸಿತು.
ಸಭೆಯ ಫಲಿತಾಂಶದ ದಾಖಲೆಯು ಆಹಾರ ಮತ್ತು ರಸಗೊಬ್ಬರ ಬೆಲೆಯ ಏರಿಳಿತ, ಪೂರೈಕೆ ಸರಪಳಿ ಅಡ್ಡಿಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಬಗ್ಗೆ ಜಾಗತಿಕ ಸಮುದಾಯದ ಕಳವಳಗಳನ್ನು ಬಹಿರಂಗಪಡಿಸಿತು. ತಾಳಿಕೆಯ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳು ಜಾಗತಿಕ ಆಹಾರ ಭದ್ರತೆಗೆ ವಿಶೇಷವಾಗಿ ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಂತಹ ವಂಚಿತ ಗುಂಪುಗಳಿಗೆ ಅಗತ್ಯವೆಂದು ಒತ್ತಿಹೇಳಲಾಯಿತು.
ವೈವಿಧ್ಯಮಯ ಮತ್ತು ಸುಸ್ಥಿರ ಪೌಷ್ಟಿಕ ಆಹಾರದ ಪ್ರಾಮುಖ್ಯತೆಯ ಬಗ್ಗೆ ಕೇಂದ್ರೀಕರಿಸಿದ ವಿಶಿಷ್ಟ ವಿಭಾಗವು ಸಭೆಯಲ್ಲಿತ್ತು. ಬೆಳೆ ಅಭಿವೃದ್ಧಿಯಲ್ಲಿ ಆವಿಷ್ಕಾರದ ಉಪಕ್ರಮಗಳನ್ನು ಉತ್ತೇಜಿಸಲು ಹವಾಮಾನ-ತಾಳಿಕೆಯ, ಸ್ಥಳೀಯವಾಗಿ ಹೊಂದಿಕೊಳ್ಳುವ ಮತ್ತು ಕಡಿಮೆ ಬಳಕೆಯಾಗುವ ಧಾನ್ಯಗಳ ಅಗತ್ಯವನ್ನು ಸಚಿವರುಗಳು ಸೂಚಿಸಿದರು. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪಾತ್ರವನ್ನು ದಾಖಲೆಯು ಒತ್ತಿಹೇಳುತ್ತದೆ.
ಪೌಷ್ಟಿಕಾಂಶದ ಸಮರ್ಪಕತೆಯು ಪ್ರಾಥಮಿಕವಾಗಿ ವೈವಿಧ್ಯಮಯ ಆಹಾರದ ಮೂಲದಿಂದ ಬರಬೇಕು ಎಂದು ಒತ್ತಿಹೇಳುತ್ತಾ, ಪೌಷ್ಟಿಕಾಂಶಕ್ಕೆ ಪುರಾವೆ ಆಧಾರಿತ ವಿಧಾನವನ್ನು ಸಚಿವರುಗಳು ಅನುಮೋದಿಸಿದರು. ಬೆಳೆಗಳಲ್ಲಿನ ಪೌಷ್ಟಿಕಾಂಶದ ವಿಷಯವನ್ನು ಸುಧಾರಿಸುವಲ್ಲಿ ಜೈವಿಕ ಸತ್ವವರ್ಧನೆಯ ಸಾಮರ್ಥ್ಯವನ್ನು ಅವರು ಒಪ್ಪಿಕೊಂಡರು.
ಸುಸ್ಥಿರ ಕೃಷಿ, ಆಹಾರ ಉತ್ಪಾದನೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಎಸ್ ಡಿ ಜಿ ಗಳ ಸಾಧನೆ-ವಿಶೇಷವಾಗಿ ಶೂನ್ಯ-ಹಸಿವಿನ ಗುರಿ (ಎಸ್ಡಿಜಿ 2) ಗಳ ಪರಸ್ಪರ ಸಂಪರ್ಕವನ್ನು ಮಂತ್ರಿಗಳು ಗುರುತಿಸಿದರು. ಇತ್ತೀಚಿನ ಅಂದಾಜುಗಳ ಪ್ರಕಾರ, 2030 ರ ವೇಳೆಗೆ ಸುಮಾರು 600 ಮಿಲಿಯನ್ ಜನರು ಇನ್ನೂ ದೀರ್ಘಕಾಲದ ಅಪೌಷ್ಟಿಕತೆಗೆ ಒಳಗಾಗುತ್ತಾರೆ, ಇದು ಹಸಿವನ್ನು ನಿರ್ಮೂಲನೆ ಮಾಡುವ ಪ್ರಮುಖ ಸವಾಲನ್ನು ಒತ್ತಿಹೇಳುತ್ತದೆ. ಸುಸ್ಥಿರ ಆಹಾರ ಉತ್ಪಾದನೆ, ಸಂಗ್ರಹಣೆ, ಮಾರುಕಟ್ಟೆ ಮತ್ತು ನಷ್ಟ ಕಡಿತಕ್ಕಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು.
ಕೃಷಿ ಮಾರುಕಟ್ಟೆ ಮಾಹಿತಿ ವ್ಯವಸ್ಥೆ (ಎಎಂಐಎಸ್) ಮತ್ತು ಗ್ರೂಪ್ ಆನ್ ಅರ್ಥ್ ಅಬ್ಸರ್ವೇಶನ್ಸ್ ಗ್ಲೋಬಲ್ ಅಗ್ರಿಕಲ್ಚರಲ್ ಮಾನಿಟರಿಂಗ್ (GEOGLAM) ಕೃಷಿ ಮಾರುಕಟ್ಟೆ ಪಾರದರ್ಶಕತೆಯನ್ನು ಹೆಚ್ಚಿಸುವ ನಿರ್ಣಾಯಕ ಉಪಕ್ರಮಗಳೆಂದು ಅಂಗೀಕರಿಸಲಾಗಿದೆ. ಆಹಾರದ ಅಭದ್ರತೆಯು ಕೇವಲ ಲಭ್ಯತೆಯ ವಿಷಯವಲ್ಲ, ಬದಲಿಗೆ ಪ್ರವೇಶದ ವಿಷಯವಾಗಿದೆ.
ಭಾರತದ ನಾಯಕತ್ವದ ಈ ಜಿ-20 ಸಭೆಯಲ್ಲಿ, ಈ ಚರ್ಚೆಗಳು ಅಂತರರಾಷ್ಟ್ರೀಯ ಉಪಕ್ರಮಗಳನ್ನು ನಿರ್ಮಿಸಲು ಅಥವಾ ವಿಸ್ತರಿಸಲು ಒಂದು ವೇದಿಕೆಯನ್ನು ಒದಗಿಸುತ್ತವೆ, ಜಾಗತಿಕವಾಗಿ ವರದಿಯಾಗುತ್ತಿರುವ ತೀವ್ರ ಆಹಾರ ಅಭದ್ರತೆ ಮತ್ತು ನಿರಂತರವಾದ ಉನ್ನತ ಮಟ್ಟದ ಹಸಿವುಗಳಿಗೆ ಸಮಯೋಚಿತ ಪ್ರತಿಕ್ರಿಯೆಯನ್ನು ನೀಡುತ್ತವೆ.
ಮುನ್ನೋಟವನ್ನು ನೀಡಲಾಗಿದೆ; ಅದರ ಅನುಷ್ಠಾನವೇ ಈಗ ಸವಾಲು. ದೇಶಗಳು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದರಿಂದ ಮತ್ತು ಈ ತತ್ವಗಳನ್ನು ಪಾಲಿಸುವುದರಿಂದ ಸದೃಢವಾದ ಆಹಾರ ಭದ್ರತೆ ಮತ್ತು ಉತ್ತಮ ಪೌಷ್ಟಿಕಾಂಶದ ಜಗತ್ತಿನ ಭರವಸೆಯು ಸಾಕ್ಷಾತ್ಕಾರಕ್ಕೆ ಹತ್ತಿರವಾಗುತ್ತದೆ. ಈ ಮಹತ್ವದ ಸಭೆಯು ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಮುಂದಿನ ಪೀಳಿಗೆಗೆ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಹಾದಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
6 ರಾಜ್ಯಗಳ ಉಪಚುನಾವಣೆ ಮತಎಣಿಕೆ: ತ್ರಿಪುರಾದಲ್ಲಿ ಬಿಜೆಪಿ, ಕೇರಳ, ಉತ್ತರಾಖಂಡದಲ್ಲಿ ಕಾಂಗ್ರೆಸ್​ ಮುನ್ನೆಡೆ

ನಾಳೆಯಿಂದ 2 ದಿನ ಜಿ-20 ಶೃಂಗಸಭೆ: ಜಾಗತಿಕ ಸಮ್ಮೇಳನಕ್ಕೆ ಸಂಪೂರ್ಣ ಸಜ್ಜಾದ ರಾಷ್ಟ್ರ ರಾಜಧಾನಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 8 =
Remember me
