ನವದೆಹಲಿ:ಮಾರಿಷಸ್​ನ ಆಗ್ನೇಯ ಕರಾವಳಿಯಲ್ಲಿ ಕಳೆದ ತಿಂಗಳಿಂದ ಕೆಟ್ಟು ನಿಂತಿರುವ ನೌಕೆಯಿಂದ ತೈಲ ಸೋರಿಕೆಯಾಗುತ್ತಿರುವುದನ್ನು ತಡೆಯಲು ಭಾರತ ನೆರವಿನ ಹಸ್ತ ಚಾಚಿದೆ. ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಕಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ.
ವಾಯು ಪಡೆಯ (ಐಎಎಫ್) ವಿಮಾನವೊಂದರಲ್ಲಿ 30 ಟನ್​ಗೂ ಹೆಚ್ಚು ತೂಕದ ತಾಂತ್ರಿಕ ಉಪಕರಣಗಳು ಹಾಗೂ ಸಲಕರಣೆಗಳನ್ನು ದ್ವೀಪ ದೇಶಕ್ಕೆ ಕಳಿಸಲಾಗಿದೆ. ಓಶಿಯನ್ ಬೂಮ್್ಸ, ರಿವರ್ ಬೂಮ್್ಸ, ಡಿಸ್ಕ್ ಸ್ಕಿಮ್ಮರ್, ಹೆಲಿ ಸ್ಕಿಮ್ಮರ್ ಮೊದಲಾದ ಸಲಕರಣೆಗಳನ್ನು ತೈಲ ಸೋರಿಕೆ ತಡೆಯಲು ಕಳಿಸಲಾಗಿದೆ. ತೈಲ ಸೋರಿಕೆ ತಡೆ ನಿಯಂತ್ರಣದಲ್ಲಿ ಪರಿಣತರಾಗಿರುವ ಕರಾವಳಿ ರಕ್ಷಣಾ ಪಡೆಯ ಹತ್ತು ತಂತ್ರಜ್ಞರು ಕೂಡ ಮಾರಿಷಸ್​ಗೆ ನೆರವಾಗಲು ಧಾವಿಸಿದ್ದಾರೆ.
ಜಪಾನ್​ನ ವಿ. ವಕಾಷಿಯೊ ಹೆಸರಿನ ನೌಕೆ ಹವಳದ ಬಂಡೆಗೆ (ಕೋರಲ್ ರೀಫ್) ಡಿಕ್ಕಿ ಹೊಡೆದು ಜುಲೈ 25ರಿಂದ ನಿಂತಿದೆ. ಈಗಾಗಲೇ ಸುಮಾರು 1 ಸಾವಿರ ಟನ್ ಇಂಧನ ಸೋರಿದ್ದು ಜಲಚರಗಳಿಗೆ ಹಾನಿ ಸಂಭವಿಸುವ ಅಪಾಯ ಎದುರಾಗಿದೆ.
ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + three =
Remember me
