ನವದೆಹಲಿ:ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರ ಜತೆಗಿನ ಗಲ್ವಾನ್​ ಘರ್ಷಣೆಯ ಬಳಿಕ ಭಾರತ ವಾಸ್ತವ ಗಡಿರೇಖೆಯುದ್ದಕ್ಕೂ (ಎಲ್​ಎಸಿ) ಭದ್ರತೆಯನ್ನು ಹೆಚ್ಚಿಸುತ್ತಿದೆ. ಇಂಡೋ ಟಿಬೇಟಿಯನ್​ ಬಾರ್ಡರ್​ ಪೊಲೀಸ್​ (ಐಟಿಬಿಪಿ) ಪಡೆಯ 3 ಸಾವಿರಕ್ಕೂ ಹೆಚ್ಚು ಯೋಧರನ್ನು ಗಡಿ ಭದ್ರತೆಗಾಗಿ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಐಟಿಬಿಪಿಯ ಹಲವು ಯೋಧರು ದೇಶದ ವಿವಿಧೆಡೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ಇವರೆಲ್ಲರನ್ನೂ ಆ ಕರ್ತವ್ಯದಿಂದ ಮುಕ್ತಗೊಳಿಸಿ, ಗಡಿ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಭಾರತವನ್ನು ಹಣಿಯಲು ಹೊಸ ಪ್ರಹಸನ ಆರಂಭಿಸಿದ ಚೀನಾ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಟಿಬಿಪಿಯ 15 ಕಂಪನಿಗಳನ್ನು ಈಗಾಗಲೆ ಕೇಂದ್ರಾಡಳಿತ ಪ್ರದೇಶ ಲಡಾಖ್​ಗೆ ರವಾನಿಸಲಾಗಿದೆ. ಒಂದು ಕಂಪನಿ ಎಂದರೆ ಅಂದಾಜು 100ರಿಂದ 120 ಯೋಧರು ಇರುತ್ತಾರೆ. ಈಗ ರವಾನಿಸಲಾಗಿರುವ 15 ಕಂಪನಿಗಳು ಸೇರಿ ಒಟ್ಟು 30 ಕಂಪನಿಗಳನ್ನು ಭದ್ರತಾ ಕಾರ್ಯಕ್ಕಾಗಿ ಕೆಲವೇ ದಿನಗಳಲ್ಲಿ ಎಲ್​ಎಸಿಗೆ ರವಾನಿಸಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಪ್ರದೇಶದಲ್ಲಿನ ಎಲ್​ಎಸಿ ಬಳಿ ಸಾಮಾನ್ಯವಾಗಿ 7 ಸಾವಿರ ಯೋಧರು ಗಡಿ ಭದ್ರತೆಗಾಗಿ ಸದಾ ನಿಯೋಜನೆಗೊಂಡಿರುತ್ತಾರೆ.
ಯೋಧರ ಬಲಿದಾನವನ್ನು ರಾಜಕೀಯಕರಣಗೊಳಿಸಬೇಡಿ; ರಾಹುಲ್​ ಗಾಂಧಿಗೆ ಯೋಧರ ತಂದೆಯ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
