ನವದೆಹಲಿ:ಕರೊನಾ ಹಾವಳಿಯನ್ನು ನಿಯಂತ್ರಿಸುವಲ್ಲಿ ಮುಂದುವರಿದ ರಾಷ್ಟ್ರಗಳು ಕೂಡ ಒದ್ದಾಡುತ್ತಿರುವಾಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರ, ತನ್ನ ಸೀಮಿತ ಅವಕಾಶಗಳನ್ನೇ ಬಳಸಿಕೊಂಡು ಕರೊನಾ ಹಬ್ಬುವುದನ್ನು ಸಮರ್ಥವಾಗಿ ನಿಯಂತ್ರಿಸುತ್ತಿರುವುದು ವರ್ಲ್ಡೋಮೀಟರ್ ಮತ್ತು ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ದೃಢಪಟ್ಟಿದೆ.
ಸೋಂಕಿತರ ಸಂಖ್ಯೆ 12 ಸಾವಿರದ ಗಡಿ ತಲುಪುವುದಕ್ಕೆ ಬೇರೆ ದೇಶಗಳಿಗೆ ಎಷ್ಟು ಸಮಯ ಬೇಕಾಯಿತು, ಭಾರತದಲ್ಲಿ ಇದಕ್ಕೆ ಎಷ್ಟು ಸಮಯ ತಗುಲಿತು ಎಂಬುದರ ಹೋಲಿಕೆಯಲ್ಲಿ ಈ ಅಂಶ ಸ್ಪಷ್ಟವಾಗುತ್ತಿದೆ.
ಆರು ಸಾವಿರ ಇದ್ದ ಸೋಂಕಿತರ ಸಂಖ್ಯೆ 12 ಸಾವಿರಕ್ಕೆ ತಲುಪಲು ಭಾರತದಲ್ಲಿ ಆರು ದಿನಗಳು ಬೇಕಾದವು. ಆದರೆ ಅಮೆರಿಕ ಮತ್ತು ಜರ್ಮನಿಯಲ್ಲಿ ಕೇವಲ ಎರಡೇ ದಿನಗಳಲ್ಲಿ ಸೋಂಕಿತರ ಸಂಖ್ಯೆ ಈ ಹಂತಕ್ಕೆ ಬೆಳೆಯಿತು. ಬ್ರಿಟನ್, ಸ್ಪೇನ್ ಮತ್ತು ಫ್ರಾನ್ಸ್‌ನಲ್ಲಿ ಇದಕ್ಕೆ ನಾಲ್ಕು ದಿನ ಬೇಕಾಯಿತು.
‘‘ಭಾರತದಲ್ಲಿ ಮಾರ್ಚ್ 25ರಿಂದ ಆರಂಭವಾದ 21 ದಿನಗಳ ಮೊದಲ ಹಂತದ ಲಾಕ್‌ಡೌನ್ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದು ಇದರಿಂದ ದೃಢಪಡುತ್ತದೆ’’ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರೊನಾ ಪ್ರತ್ಯೇಕ ವಾರ್ಡ್​ನಲ್ಲಿ ವೈದ್ಯನಿಂದ ಮಹಿಳೆ ಮೇಲೆ ಅತ್ಯಾಚಾರ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
