ಅಯೋಧ್ಯೆ:ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಶತಶತಮಾನಗಳ ಹೋರಾಟ, ಕೋಟ್ಯಂತರ ಭಕ್ತರ ಕನಸು ಸಾಕಾರಕ್ಕೆ ಕೊನೆಗೂ ಶ್ರೀಕಾರ ಬಿದ್ದಿದೆ. ಭಾರತೀಯ ಸಂಸ್ಕೃತಿಯ ನೆಲೆಗಟ್ಟಾಗಿರುವ ಶ್ರೀರಾಮನ ಆದರ್ಶಗಳ ಜತೆಗೆ ದೇಶವಾಸಿಗಳ ನಂಬಿಕೆ, ಶ್ರದ್ಧೆಯನ್ನು ವಿಶ್ವಕ್ಕೆ ಸಾರುವ ಮಹಾಕಾರ್ಯ ರಾಮಮಂದಿರ ನಿರ್ವಣದ ಶಿಲಾನ್ಯಾಸ ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿ ನೆರವೇರಿದೆ. ರಾಮಜನ್ಮಭೂಮಿಯಲ್ಲೇ ಮಂದಿರ ನಿರ್ವಿುಸುವ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ಬುಧವಾರ ಭೂಮಿಪೂಜೆ ನೆರವೇರಿಸಿದರು. ಅದರೊಂದಿಗೆ ಮಹೋನ್ನತವಾದ ರಾಮಮಂದಿರ ಕಟ್ಟಡ ರೂಪದಲ್ಲಿ ಅವತರಿಸುವುದಷ್ಟೇ ಬಾಕಿ ಉಳಿದಂತಾಗಿದೆ. ಅಸಂಖ್ಯಾತ ರಾಮಭಕ್ತರ ಪಾಲಿಗೆ ಭವ್ಯವಾದ ದಿವ್ಯವಾದ ಮಂದಿರದಲ್ಲಿ ವಿರಾಜಮಾನ ಶ್ರೀರಾಮನನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆ, ಕಾತರಗಳು ದುಪ್ಪಟ್ಟಾಗಿವೆ.
ಕರ್ನಾಟಕ ನಂಟು
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ ನಂಟು ವಿಶೇಷವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಹಲವು ಬಾರಿ ರಾಜ್ಯದ ಹೆಸರು ಪ್ರಸ್ತಾಪವಾಯಿತು. ‘ಜಗನ್ನಾಥ ಪುರಿಯಿಂದ ಬದರಿನಾಥದವರೆಗೆ, ಕನ್ಯಾಕುಮಾರಿಯಿಂದ ಖೀರ್ ಭವಾನಿವರೆಗೆ, ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಲಕ್ಷದ್ವೀಪದಿಂದ ಲೇಹ್​ವರೆಗೆ, ಸಮೇದ್ ಶಿಖರದಿಂದ ಶ್ರವಣಬೆಳಗೊಳದವರೆಗೆ ಇಡೀ ಭಾರತ ರಾಮಮಯವಾಗಿದೆ’ ಎಂದರು. ವಿವಿಧ ಭಾಷೆಗಳಲ್ಲಿ ರಾಮಾಯಣದ ರೂಪಾಂತರ ಹೆಸರಿಸುವ ಸಂದರ್ಭದಲ್ಲಿ ನಾಗಚಂದ್ರ ಬರೆದಿರುವ ಕನ್ನಡದ ಕುಮುದೇಂದು ರಾಮಾಯಾಣವನ್ನು ಮೋದಿ ಸ್ಮರಿಸಿದರು. ಬೆಂಗಳೂರಿನ ಶಿಲ್ಪಿ ರಾಮ ಮೂರ್ತಿ ಸಿದ್ಧಪಡಿಸಿರುವ ಕೋದಂಡ ರಾಮನ ಪ್ರತಿಮೆ ಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾರ್ಯಕ್ರಮದ ವೇದಿಕೆಯಲ್ಲಿ ಮೋದಿಗೆ ಸ್ಮರಣಿಕೆಯಾಗಿ ನೀಡಿದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು ಹಾಗೂ ಮಾದಾರ ಚೆನ್ನಯ್ಯ ಶ್ರೀಗಳು ಭಾಗವಹಿಸಿದ್ದರು.
ಮೋದಿ ಸಂಕಲ್ಪ
ಶಿಲಾನ್ಯಾಸದ ಕ್ಷಣ ಕ್ಷಣ
ಮೋದಿ ದಿನಚರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
