ತಂತ್ರಾನ ಕ್ಷೇತ್ರದಲ್ಲಿ ಭಾರತವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಡಿಜಿಟಲ್​ ಇಂಡಿಯಾ ಯೋಜನೆ ರೂಪುಗೊಂಡಿದೆ. ತಂತ್ರಾನದ ಸಹಾಯದಿಂದ ಸರ್ಕಾರದ ಸೇವೆಗಳು ಸುಲಭವಾಗಿ ಜನರಿಗೆ ತಲುಪುವಂತೆ ಮಾಡುವುದು ಮತ್ತು ದೇಶದ ಜನತೆ ನೂತನ ತಂತ್ರಾನಗಳ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಆಶಯಕ್ಕೆ ಆರು ವರ್ಷ ಪೂರ್ಣ.
ದೇಶದ ಮಾಹಿತಿ-ತಂತ್ರಜ್ಞಾನ ರಂಗದ ಮಹತ್ವದ ಯೋಜನೆ ‘ಡಿಜಿಟಲ್​ ಇಂಡಿಯಾ’ಕ್ಕೆ 2015ರ ಜುಲೈ 1 ರಂದು ಕೇಂದ್ರ ಸರ್ಕಾರ ಚಾಲನೆ ನೀಡಿತು. ಈ ಕಾರ್ಯಕ್ರಮದಡಿ ಹಲವು ಯೋಜನೆಗಳು ಬೆಸೆದುಕೊಂಡಿವೆ. ಭಾರತವನ್ನು ಜ್ಞಾನ ಸಂಪನ್ಮೂಲ ದೇಶವನ್ನಾಗಿಸುವ ಕನಸು ಹೊಂದಿರುವ ಈ ಯೋಜನೆ, ಸಾರ್ವಜನಿಕ ಸಹಭಾಗಿತ್ವದಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶ ಹೊಂದಿದೆ. ಮೂಲಸೌಕರ್ಯ ಸೃಷ್ಟಿ ಪ್ರಕ್ರಿಯೆ ಸೇರಿ ಡಿಜಿಟಲ್​ ಇಂಡಿಯಾದ ವಿವಿಧ ಯೋಜನೆಯಡಿ 1.7 ಕೋಟಿ ಜನರಿಗೆ ಪ್ರತ್ಯಕ್ಷವಾಗಿ ಹಾಗೂ 8.5 ಕೋಟಿ ಜನರಿಗೆ ಅಪ್ರತ್ಯಕ್ಷವಾಗಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಸರ್ಕಾರ ಘೋಷಿಸಿತ್ತು.
ಪ್ರಾಜೆಕ್ಟ್​ನಲ್ಲಿ ಏನೆಲ್ಲ?* ದೇಶದ 2.30 ಲಕ್ಷ ಶಾಲೆಗಳಿಗೆ ವೈಫೈ ಸಂಪರ್ಕ ಕಲ್ಪಿಸಲು ನಿರ್ಧಾರ. ಮಾತ್ರವಲ್ಲ, ಶಾಲೆಗಳಲ್ಲಿ ಡಿಜಿಟಲ್​ ತರಬೇತಿ.* ಪ್ರಮುಖ ಸೇವೆಗಳೆಂದರೆ, ಡಿಜಿಟಲ್​ ಲಾಕರ್​, ನ್ಯಾಷನಲ್​ ಸ್ಕಾಲರ್​ಷಿಪ್​ ಪೋರ್ಟಲ್​, ಇ-ಹಾಸ್ಪಿಟಲ್​, ಇ-ಸೈನ್​, ಡಿಜಿಟಲ್​ ಏಜೆಂಟ್​, ಮೈ ಗವರ್ನ್​ಮೆಂಟ್​ ಆ್ಯಪ್​, ಸ್ವಚ್ಛ ಭಾರತ್​ ಆ್ಯಪ್​, ಡಿಜಿಟಲ್​ ಇಂಡಿಯಾ ಪೋರ್ಟಲ್​ ಮತ್ತು ಮೊಬೈಲ್​ ಆ್ಯಪ್ಸ್​, 11 ರಾಜ್ಯಗಳಲ್ಲಿ ‘ಭಾರತ್​ನೆಟ್​’ ಸೇವೆ.* ಇಲೆಕ್ಟ್ರಾನಿಕ್​ ಸೇವೆ, ಉತ್ಪನ್ನ, ಉತ್ಪಾದನೆ ಮತ್ತು ಉದ್ಯೋಗ ಅವಕಾಶ ಸೇರಿ ಹಲವು ಕ್ಷೇತ್ರಗಳ ಬೆಳವಣಿಗೆ. ಪ್ರತಿಯೊಬ್ಬ ನಾಗರಿಕನಿಗೂ ಅನುಕೂಲವಾಗುವಂಥ ಡಿಜಿಟಲ್​ ಮೂಲಸೌಕರ್ಯ.* ಬ್ರಾಡ್​ಬ್ಯಾಂಡ್​ ಹೈವೇ, ಮೊಬೈಲ್​ ಸಂಪರ್ಕಕ್ಕಾಗಿ ಸಾರ್ವತ್ರಿಕ ಅವಕಾಶ, ಸಾರ್ವಜನಿಕ ಅಂತರ್ಜಾಲ ಬಳಕೆ ಯೋಜನೆ, ಇ-ಆಡಳಿತ – ತಂತ್ರಜ್ಞಾನದ ಮೂಲಕ ಸರ್ಕಾರದ ಕೆಲಸಗಳ ಸುಧಾರಣೆ, ಇ ಕ್ರಾಂತಿ- ಇಲೆಕ್ಟ್ರಾನಿಕ್​ ಮಾಧ್ಯಮದ ಮುಖೇನ ಸೇವೆಗಳನ್ನು ಒದಗಿಸುವುದು, ಎಲ್ಲರಿಗೂ ಮಾಹಿತಿ ಪೂರೈಸುವುದು, ಇಲೆಕ್ಟ್ರಾನಿಕ್ಸ್​ ಉತ್ಪಾದನೆ-ಆಮದು ಪ್ರಕ್ರಿಯೆಯನ್ನು ಪೂರ್ತಿಯಾಗಿ ನಿಲ್ಲಿಸುವ ಗುರಿ.* ಉತ್ತಮ ಮೂಲಸೌಕರ್ಯ ಒದಗಿಸುವ ಮೂಲಕ ದೇಶದಾದ್ಯಂತ ಅತಿವೇಗದ ಅಂತರ್ಜಾಲ ಸೇವೆ.* ರಾಷ್ಟ್ರೀಯ ಗ್ರಾಮೀಣ ಇಂಟರ್​ನೆಟ್​ ಮಿಷನ್​ ಅಡಿ ಸಾರ್ವಜನಿಕ ಇಂಟರ್​ನೆಟ್​ ಲಭ್ಯತೆ ಕಾರ್ಯಕ್ರಮ. ಗ್ರಾಮ ಪಂಚಾಯಿತಿಗಳಿಗೆ ಇಂಟರ್​ನೆಟ್​ ಸಂಪರ್ಕ, ಅಂಚೆಕಚೇರಿಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವುದು.* ರಾಷ್ಟ್ರೀಯ ಜ್ಞಾನ ಜಾಲ ಮತ್ತು ರಾಷ್ಟ್ರೀಯ ಆಪ್ಟಿಕ್​ ಫೈಬರ್​ ಜಾಲದ ಮೂಲಕ ದೇಶವ್ಯಾಪಿ ಮಾಹಿತಿ ಮೂಲಸೌಕರ್ಯ ಒದಗಿಸುವುದು.* ಅತ್ಯಂತ ಹಿಂದುಳಿದ 55,619 ಗ್ರಾಮಗಳಲ್ಲೂ ಮೊಬೈಲ್​ ಸಂಪರ್ಕ ಸಾರ್ವತ್ರಿಕಗೊಳಿಸುವುದು.
ಆರಂಭಿಕ ಸೇವೆಗಳು* ಭಾರತ್​ ನೆಟ್​* ಡಿಜಿಟಲ್​ ಲಾಕರ್​* ನ್ಯಾಷನಲ್​ ಸ್ಕಾಲರ್​ಶಿಪ್​ ಪೋರ್ಟಲ್​
ಬಂಡವಾಳ ಹೂಡಿಕೆ* ರಿಲಯನ್ಸ್​ನಿಂದ 2.5 ಲಕ್ಷ ಕೋಟಿ ರೂ.* 4 ಜಿ ಮತ್ತು ಇ-ಹೆಲ್ತ್​ ಸೌಲಭ್ಯ ವಿಸ್ತರಿಸಲು ಭಾರ್ತಿ ಏರ್​ಟೆಲ್​ ನೆರವು; ಮುಂದಿನ 5 ವರ್ಷಗಳಲ್ಲಿ ಕಂಪನಿಯಿಂದ 1 ಲಕ್ಷ ಕೋಟಿ ರೂ. ಹೂಡಿಕೆ* ಆದಿತ್ಯ ಬಿರ್ಲಾ ಗ್ರೂಪ್​ನಿಂದ 44,516 ಕೋಟಿ ರೂ. ಹೂಡಿಕೆ* ಇ- ಗವರ್ನೆನ್ಸ್​ನಲ್ಲಿ ಕೈಜೋಡಿಸಲಿದೆ ಟಾಟಾ ಸಮೂಹ
ಯೋಜನೆ ಉದ್ದೇಶಗಳು* 2.4 ಲಕ್ಷ ಹಳ್ಳಿಗಳಲ್ಲಿ ಬ್ರಾಡ್​ಬ್ಯಾಂಡ್​ ಸೌಲಭ್ಯ* ಸಾರ್ವತ್ರಿಕ ಫೋನ್​ ಸಂಪರ್ಕ* 4 ಲಕ್ಷ ಸಾರ್ವಜನಿಕ ಇಂರ್ಟನೆಟ್​ ಆ್ಯಕ್ಸೆಸ್​ ಪಾಯಿಂಟ್​ಗಳು* 2.5 ಲಕ್ಷ ಶಾಲೆ, ಎಲ್ಲ ವಿವಿಗಳಲ್ಲಿ ವೈ-ಫೈ ಸೌಲಭ್ಯ* ಸಾರ್ವಜನಿಕರಿಗಾಗಿ ವೈ-ಫೈ ಹಾಟ್​ಸ್ಪಾಟ್​ ಅಭಿವೃದ್ಧಿ
ಕನಿಷ್ಠ ಸರ್ಕಾರ ಗರಿಷ್ಠ ಆಡಳಿತಕ್ಕೆ ಬಲಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಕನಸನ್ನು ನನಸು ಮಾಡುವುದಕ್ಕೆ ಇರುವ ಏಕೈಕ ದಾರಿ ಡಿಜಿಟಲ್​ ಇಂಡಿಯಾ. ಸರ್ಕಾರದ ಮಟ್ಟಿಗೆ ನವೋನ್ವೇಷಣೆಯೇ ಪ್ರಮುಖ ಆದ್ಯತೆ ಮತ್ತು ಈ ದಶಕ ಭಾರತದ ಮಟ್ಟಿಗೆ ಟೆಕ್​ ದಶಕವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಡಿಜಿಟಲ್​ ಇಂಡಿಯಾಕ್ಕೆ ಆರು ವರ್ಷ ಪೂರ್ಣಗೊಂಡ ನಿಮಿತ್ತ ಗುರುವಾರ ಆಯೋಜಿಸಿದ್ದ ವರ್ಚುವಲ್​ ಸಭೆಯಲ್ಲಿ ಯೋಜನೆಯ ಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದರು. ಡೇಟಾ, ಜನಸಂಖ್ಯಾ ಪ್ರಯೋಜನಗಳ ಜತೆಗೆ ಟೆಕ್​ ಸಾಮರ್ಥ್ಯಗಳು ದೇಶಕ್ಕೆ ದೊಡ್ಡ ಅವಕಾಶವನ್ನೇ ಒದಗಿಸುತ್ತಿವೆ. ಇವೆಲ್ಲ ಸೇರಿ ಈ ದಶಕವನ್ನು ಭಾರತದ ಟೆಕ್​ ದಶಕವನ್ನಾಗಿ ಪರಿವರ್ತಿಸಲಿವೆ. ಡಿಜಿಟಲ್​ ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಹೆಚ್ಚಾಗಲಿದೆ ಮತ್ತು ಜಾಗತಿಕ ಡಿಜಿಟಲ್​ ಎಕಾನಮಿಯಲ್ಲಿ ಭಾರತದ ಪಾಲು ಕೂಡ ಹೆಚ್ಚಾಗಲಿದೆ ಎಂದು ಮೋದಿ ಹೇಳಿದರು.
ರೈತರಿಗೆ ವರದಾನವಾದ ಡಿಬಿಟಿತಂತ್ರಜ್ಞಾನದ ಸಮರ್ಥ ಬಳಕೆ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಹಾಗೂ ಇತರ ಅಪಸವ್ಯಗಳನ್ನು ತಡೆಯಬಲ್ಲದು ಎಂಬುದಕ್ಕೆ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ ಸಾ. ಈ ಯೋಜನೆಯಡಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್​ ಖಾತೆಗಳಿಗೆ (ನೇರ ನಗದು ವರ್ಗಾವಣೆ) ಜಮಾ ಮಾಡಲಾಗುತ್ತಿದೆ. ಈವರೆಗೆ 10 ಕೋಟಿ ರೈತರು 1.35 ಲಕ್ಷ ಕೋಟಿ ನೆರವನ್ನು ನೇರವಾಗಿ ಅವರ ಬ್ಯಾಂಕ್​ ಖಾತೆಗಳಿಂದಲೇ ಪಡೆದುಕೊಂಡಿದ್ದಾರೆ ಎಂದು ಮೋದಿ ವಿವರಿಸಿದರು. ಹಾಗೆಯೇ ‘ಒನ್​ ನೇಶನ್​ ಒನ್​ ಎಂಎಸ್​ಪಿ’ ಯೋಜನೆ ಅಡಿ ಗೋಧಿ ಬೆಳೆಗಾರರಿಗೆ 85 ಸಾವಿರ ಕೋಟಿ ಬೆಂಬಲ ಬೆಲೆ ಅವರ ಬ್ಯಾಂಕ್​ ಖಾತೆಗಳಿಗೆ ಸಂದಾಯವಾಗಿದೆ.
ಡೇಟಾ ರಕ್ಷಣೆಗೆ ಭಾರತ ಬದ್ಧಭಾರತವು ಡೇಟಾ ಪವರ್​ಹೌಸ್​ ಆಗಿದ್ದು, ಅದರ ಹೊಣೆಗಾರಿಕೆಗಳ ಬಗ್ಗೆ ಜಾಗೃತ ಪ್ರಜ್ಞೆ ಇದೆ. ಎಲ್ಲ ಆಯಾಮಗಳಲ್ಲೂ ಡೇಟಾ ರಕ್ಷಣೆಯ ಕೆಲಸ ಪ್ರಗತಿಯಲ್ಲಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಣ ಮುಂದುವರಿಸುವುದಕ್ಕೆ. ಇತರ ಸಾರ್ವಜನಿಕ ಸೇವೆಗಳು ಮತ್ತು ಆರೋಗ್ಯ ಸೇವೆ ಒದಗಿಸುವುದಕ್ಕೆ ನೆರವಾಗಿರುವುದು ತಂತ್ರಜ್ಞಾನವೇ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಡಿಜಿಟಲ್​ ಸಲ್ಯೂಷನ್​ಗೆ ವಿಶ್ವ ಮನ್ನಣೆಕೋವಿಡ್​ 19 ಸಂಕಷ್ಟದ ಅವಧಿಯಲ್ಲಿ ಅಭಿವೃದ್ಧಿ ಪಡಿಸಿದ ಡಿಜಿಟಲ್​ ಸಲ್ಯೂಷನ್ಸ್​ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿವೆ. ಆರೋಗ್ಯ ಸೇವೆ ಒದಗಿಸುವಲ್ಲಿ ಕಾಂಟ್ಯಾಕ್ಟ್​ ಟ್ರೇಸಿಂಗ್​ ಆ್ಯಪ್​, ಆರೋಗ್ಯ ಸೇತು ಪ್ರಮುಖ ಪಾತ್ರವಹಿಸಿವೆ. ನವಭಾರತದ ಯಶೋಗಾಥೆಗಳಲ್ಲಿ ಡಿಜಿಟಲ್​ ಇಂಡಿಯಾ ಪ್ರಮುಖವಾದುದು ಎಂದು ಮೋದಿ ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
