ನೊಯ್ಡಾ:ರಾಷ್ಟ್ರ ರಾಜಧಾನಿ ದೆಹಲಿಯ ಜೈಲಿನಿಂದ ಭಾರೀ ಮಳೆಯ ನಡುವೆಯೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಭಾರತದ ಸಚಿನ್​ ಮೀನಾ ಮತ್ತು ಪಾಕಿಸ್ತಾನದ ಸೀಮಾ ಹೈದರ್​ ಇದೀಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಎದುರು ನೋಡುತ್ತಿದ್ದಾರೆ. ಪ್ರಿಯಕರನಿಗಾಗಿ ಪಾಕ್​ನಿಂದ ಭಾರತಕ್ಕೆ ಬಂದಿರುವ ಸೀಮಾ, ಇದೀಗ ಭಾರತ ನನ್ನದು ಎಂದು ಹೇಳಿಕೊಂಡಿದ್ದಾಳೆ.
ವೀಸಾ ಇಲ್ಲದೆ ನೇಪಾಳದ ಮೂಲಕ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನ ಮೂಲದ ಸೀಮಾಳನ್ನು ಜುಲೈ 4ರಂದು ಬಂಧಿಸಲಾಯಿತು. ಆಕೆಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಸಚಿನ್​ನನ್ನು ಜೈಲಿಗೆ ಅಟ್ಟಲಾಗಿತ್ತು. ಇವರಿಬ್ಬರ ಪ್ರೇಮಕತೆ ಯಾವ ಬಾಲಿವುಡ್​ ಸಿನಿಮಾಗೂ ಕಮ್ಮಿ ಇಲ್ಲ. ಕೋವಿಡ್​ ಸಾಂಕ್ರಮಿಕ ಸಂದರ್ಭದಲ್ಲಿ ಆನ್​ಲೈನ್​ನಲ್ಲಿ ಪ್ಲೇಯರ್​ ಅನ್​ನೌನ್​ ಬ್ಯಾಟಲ್​ಗ್ರೌಂಡ್​ (ಪಬ್​ಜಿ) ಗೇಮ್​ ಆಡುವಾಗ ಇಬ್ಬರ ನಡುವೆ ಶುರುವಾದ ಪರಿಚಯ, ಪ್ರೀತಿಗೆ ತಿರುಗಿ, ಕೊನೆಗೆ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಬರುವಂತೆ ಪ್ರೇರೇಪಿಸಿತು.
ಇದನ್ನೂ ಓದಿ:ಉತ್ತರ ಭಾರತದಲ್ಲಿ ವರುಣನ ಅಬ್ಬರ: ಹಲವೆಡೆ ಸಾವು, 40 ವರ್ಷಗಳ ಹಿಂದಿನ ದಾಖಲೆ ಮುರಿದ ದೆಹಲಿ
30 ವರ್ಷದ ಸೀಮಾ ಹಾಗೂ 25 ವರ್ಷದ ಸಚಿನ್​ ಕಳೆದ ಮಾರ್ಚ್​ ತಿಂಗಳಲ್ಲಿ ನೇಪಾಳದಲ್ಲಿ ಮದುವೆಯಾದರು. ಇದು ಇವರಿಬ್ಬರ ಮೊದಲ ಭೇಟಿಯಾಗಿತ್ತು. ಮೊದಲ ಭೇಟಿಯಲ್ಲೇ ಮದುವೆ ಮಾಡಿಕೊಂಡಿದ್ದರು. ಅಲ್ಲಿಂದ ಭಾರತಕ್ಕೆ ಬಂದು ಇಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಇಬ್ಬರು ಜೈಲುಪಾಲಾಗಿದ್ದರು. ಇದೀಗ ಇಬ್ಬರು ಬಿಡುಗಡೆಯಾಗಿದ್ದು, ಹೊಸ ಜೀವನ ಆರಂಭಿಸುವ ತವಕದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೀಮಾ, ನನ್ನ ಪತಿಯು ಹಿಂದು. ಹೀಗಾಗಿ ನಾನೂ ಕೂಡ ಹಿಂದು. ಈಗ ನಾನು ಕೂಡ ಭಾರತೀಯಳು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಅದೊಂದು ಸುದೀರ್ಘ ಮತ್ತು ಕಠಿಣ ಪ್ರಯಾಣವಾಗಿತ್ತು. ನಾನು ತುಂಬಾ ಭಯ ಕೂಡ ಬಿದ್ದಿದೆ. ನಾನು ಮೊದಲು ಕರಾಚಿಯಿಂದ ದುಬೈಗೆ ತೆರಳಿ ಅಲ್ಲಿ ನಿದ್ದೆಯನ್ನೂ ಮಾಡದೆ 11 ಗಂಟೆಗಳ ಕಾಲ ಕಾದೆ. ಬಳಿಕ ದುಬೈನಿಂದ ನೇಪಾಳಗೆ ಬಂದಿಳಿದು, ಪೊಖಾರಾಗೆ ರಸ್ತೆ ಮಾರ್ಗವಾಗಿ ತೆರಳಿ ಸಚಿನ್​ ಭೇಟಿ ಮಾಡಿದೆ ಎಂದು ಸೀಮಾ ಹೇಳಿದ್ದಾರೆ.
ಇದಾದ ಬಳಿಕ ಸೀಮಾ ಮತ್ತೆ ಪಾಕಿಸ್ತಾನಕ್ಕೆ ಮತ್ತು ಸಚಿನ್​ ಭಾತಕ್ಕೆ ಮರಳಿದರು. ಸೀಮಾ ಮರಳಿ ಮನೆಗೆ ಹೋದಾಗ ಪತಿಯ ಜತೆಗಿನ ಭಿನ್ನಾಭಿಪ್ರಾಯ ಕಾರಣದಿಂದಾಗಿ ಮತ್ತೆ ಸಚಿನ್​ ಭೇಟಿ ಮಾಡುವ ನಿರ್ಧಾರ ಮಾಡಿದಳು. ಬಳಿಕ 12 ಲಕ್ಷ ಪಾಕಿಸ್ತಾನಿ ರೂಪಾಯಿಗೆ ತುಂಡು ಜಾಗವನ್ನು ಮಾರಿ ವಿಮಾನದ ಟಿಕೆಟ್​ ಮತ್ತು ನೇಪಾಳಕ್ಕೆ ವೀಸಾವನ್ನು ಪಡೆದು ತನ್ನ ನಾಲ್ವರು ಮಕ್ಕಳೊಂದಿಗೆ ಮೇ ತಿಂಗಳಲ್ಲಿ ದುಬೈನಿಂದ ನೇಪಾಳಕ್ಕೆ ಬಂದಳು. ಬಳಿಕ ಪೊಖಾರಗೆ ತೆರಳಿ, ಅಲ್ಲಿಂದ ಕಠ್ಮಂಡುವಿಗೆ ಹೋಗಿ ದೆಹಲಿಗೆ ತೆರಳುವ ಬಸ್​ ಹಿಡಿದು ತನ್ನ ನಾಲ್ವರು ಮಕ್ಕಳೊಂದಿಗೆ ಮೇ 13ರಂದು ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾವನ್ನು ತಲುಪಿದಳು. ಅವಳು ಬರುವುದನ್ನು ಮೊದಲೇ ತಿಳಿದಿದ್ದ ಸಚಿನ್​​, ಆಕೆ ಪಾಕಿಸ್ತಾನಿ ಎಂಬುದು ಗೊತ್ತಾಗದಂತೆ ಗುರುತನ್ನು ಮರೆಮಾಚಿ, ಬಾಡಿಗೆ ಮನೆಯೊಂದರಲ್ಲಿ ಉಳಿದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರ ಸ್ಥಳೀಯರಿಂದ ಪೊಲೀಸರಿಗೆ ತಿಳಿದು ಸಚಿನ್​ ಮತ್ತು ಸೀಮಾ ಇಬ್ಬರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಸೀಮಾಳನ್ನು ಹಾಗೂ ಅಕ್ರಮ ವಲಸಿಗ ಸೀಮಾಳಿಗೆ ಆಶ್ರಯ ಕೊಟ್ಟ ಆರೋಪದ ಮೇಲೆ ಸಚಿನ್​ನನ್ನು ಬಂಧಿಸಲಾಗಿತ್ತು. ನಿನ್ನೆ ಇಬ್ಬರಿಗೂ ನ್ಯಾಯಾಲಯ ಜಾಮೀನು ನೀಡಿದ್ದು, ಭಾರತದಲ್ಲೇ ಅಧಿಕೃತವಾಗಿ ನೆಲೆಸಲು ಇರುವ ಪ್ರಕ್ರಿಯೆಯತ್ತ ಗಮನ ಹರಿಸಿದ್ದಾಳೆ.
ಇದನ್ನೂ ಓದಿ:15 ಮಹಿಳೆಯರ ಜತೆ ಮದ್ವೆ! ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಬೆಂಗ್ಳೂರು ಆಸಾಮಿಯ ಮಹಾ ಮೋಸ ಬಯಲು
ತನ್ನ ಬಿಡುಗಡೆಯ ಕುರಿತು ಮಾತನಾಡಿದ ಸೀಮಾ, ಬಿಡುಗಡೆಯ ಸುದ್ದಿ ಕೇಳಿದಾಗ ನಾನು ಸಂತೋಷದಿಂದ ಕೂಗಾಡಿದೆ. ನಾನು ತಿಂಗಳುಗಟ್ಟಲೆ ಜೈಲಿನಲ್ಲಿ ಇರುತ್ತೇನೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ. ಇದರ ನಡುವೆ ಸೌದಿ ಅರೇಬಿಯಾದಿಂದ ವಿಡಿಯೋ ಸಂದೇಶ ರವಾನಿಸಿರುವ ಸೀಮಾ ಪತಿ ಗುಲಾಮ್​ ಹೈದರ್​, ತನ್ನ ಪತ್ನಿಯನ್ನು ಮರಳಿ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ನಾನು ಪಾಕಿಸ್ತಾನಕ್ಕೆ ಹೋದರೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಮರಳಿ ಪಾಕ್​ಗೆ ಹೋಗಲು ಸೀಮಾ ನಿರಾಕರಿಸಿದ್ದಾಳೆ.(ಏಜೆನ್ಸೀಸ್​)
ಉತ್ತರ ಭಾರತದಲ್ಲಿ ವರುಣನ ಅಬ್ಬರ: ಹಲವೆಡೆ ಸಾವು, 40 ವರ್ಷಗಳ ಹಿಂದಿನ ದಾಖಲೆ ಮುರಿದ ದೆಹಲಿ

13 ವರ್ಷದ ಹಿಂದೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಇಬ್ಬರ ಪ್ರಾಣ ತೆಗೆದಿದ್ದ ಬ್ಯೂಟಿಷಿಯನ್ ಖಿನ್ನತೆಗೆ ಬಲಿ!

ಶ್ವಾನವನ್ನು ನುಂಗಿ ಮುಂದೆ ಚಲಿಸಲಾಗದೇ ನರಳುತ್ತಿದ್ದ 15 ಅಡಿ ಉದ್ದ, 60 ಕೆಜಿ ತೂಕದ ಹೆಬ್ಬಾವು ರಕ್ಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 20 =
Remember me
