ನವದೆಹಲಿ: ಬ್ರಿಟನ್ ಮತ್ತು ಫ್ರಾನ್ಸ್​ನ್ನು ಹಿಂದಿಕ್ಕುವ ಮೂಲಕ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ ಎಂದು ಅಮೆರಿಕದ
ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ಎಂಬ ಸಂಸ್ಥೆ ವರದಿಯಲ್ಲಿ ಹೇಳಿದೆ. ಭಾರತ 2.94 ಟ್ರಿಲಿಯನ್ ಡಾಲರ್ ಜಿಡಿಪಿ ಮೂಲಕ ಐದನೇ ಸ್ಥಾನಕ್ಕೇರಿದೆ. 2.83 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಬ್ರಿಟನ್ 6ನೇ ಹಾಗೂ 2.71 ಲಕ್ಷ ಕೋಟಿ ಅಮೆರಿಕನ್ ಡಾಲರ್ ಜಿಡಿಪಿ ಹೊಂದಿರುವ ಫ್ರಾನ್ಸ್ 7ನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿವೆ. 2018ರಲ್ಲಿ ಬ್ರಿಟನ್ 5, ಫ್ರಾನ್ಸ್ 6 ಹಾಗೂ ಭಾರತ 7ನೇ ಸ್ಥಾನದಲ್ಲಿತ್ತು.
ಕೊಳ್ಳುವ ಶಕ್ತಿ ಸಮಾನತೆ (ಪಿಪಿಪಿ)ಯಲ್ಲಿ ಭಾರತದ ಜಿಡಿಪಿ 10.51 ಟ್ರಿಲಿಯನ್ ಡಾಲರ್ ಆಗಿದ್ದು, ಇದು ಜಪಾನ್ ಮತ್ತು ಜರ್ಮನಿಯನ್ನೂ ಮೀರಿದೆ. ಭಾರತದ ಹೆಚ್ಚಿನ ಜನಸಂಖ್ಯೆಯಿಂದಾಗಿ, ದೇಶದ ತಲಾ ಜಿಡಿಪಿ ಪ್ರಮಾಣ 2,170 ಡಾಲರ್ ಆಗಿದೆ. ಅಮೆರಿಕದ ತಲಾ ಜಿಡಿಪಿ ಪ್ರಮಾಣ 62,794 ಡಾಲರ್ ಇದೆ. ಭಾರತ ತನ್ನ ಹಿಂದಿನ ನೀತಿಗಳಿಂದ ಈಗ ಮುಕ್ತ ಮಾರುಕಟ್ಟೆ ಆರ್ಥಿಕತೆಯಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2019-20ರಲ್ಲಿ ಶೇ.5 ಜಿಡಿಪಿ
ಪ್ರಸಕ್ತ ಹಣಕಾಸು ವರ್ಷದಲ್ಲಿ (2019-20) ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 5 ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಕಳೆದ 11 ವರ್ಷಗಳ ಕನಿಷ್ಠ ಮಟ್ಟವಾಗಿದ್ದು, ಕಳೆದ ಜ.31ರಂದು ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲೂ ಜಿಡಿಪಿ ಬೆಳವಣಿಗೆ ದರವನ್ನು ಶೇಕಡಾ 5 ಎಂದು ಅಂದಾಜಿಸಲಾಗಿದೆ. ಜಾಗತಿಕ ಬೆಳವಣಿಗೆಯಲ್ಲಿನ ದೌರ್ಬಲ್ಯ ಭಾರತದ ಮೇಲೂ ಪರಿಣಾಮ ಬೀರುತ್ತಿದೆ. ಹಣಕಾಸು ವಲಯದ ಸಮಸ್ಯೆಗಳು ಹಾಗೂ ಹೂಡಿಕೆ ಕೊರತೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿನ ಬೆಳವಣಿಗೆ ದರ ಕುಸಿದಿದೆ ಎಂದು ಸಮೀಕ್ಷೆ ತಿಳಿಸಿದೆ. ಆದಾಗ್ಯೂ, ಆರ್ಥಿಕತೆಯಲ್ಲಿ ಉಂಟಾಗಲಿದ್ದ ಕುಸಿತದ ಪ್ರಮಾಣ ಈಗಾಗಲೇ ಮುಗಿದಿದ್ದು, ಮುಂದಿನ ಹಣಕಾಸು ವರ್ಷದಿಂದ ಬೆಳವಣಿಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದಿದೆ. ಕೇಂದ್ರ ಸರ್ಕಾರ ಕೂಡ 2025ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪುವ ಗುರಿ ಹೊಂದಿದೆ.
ಮುಕ್ತ ಮಾರುಕಟ್ಟೆಯಿಂದ ಅಭಿವೃದ್ಧಿ
ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಭಾರತದ ಸೇವಾ ವಲಯವೂ ಒಂದು. ಇದು ದೇಶದ ಆರ್ಥಿಕತೆಗೆ ಶೇ. 60 ಮತ್ತು ಉದ್ಯೋಗಕ್ಕೆ ಶೇಕಡಾ 28 ಕೊಡುಗೆಯನ್ನು ಇದು ನೀಡುತ್ತದೆ. ಉತ್ಪಾದನೆ ಮತ್ತು ಕೃಷಿ ಕೂಡ ದೇಶದ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಾಗಿವೆ ಎಂದು ವರದಿಯಲ್ಲಿ ತಿಳಿಸಿದೆ. ಭಾರತ ತನ್ನ ಹಳೆಯ ನೀತಿಗಳ ಬದಲು ಮುಕ್ತ ಮಾರುಕಟ್ಟೆ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. 1990ರ ದಶಕದಿಂದ ಭಾರತದಲ್ಲಿ ಆರ್ಥಿಕ ಉದಾರೀಕರಣ ಪ್ರಾರಂಭವಾಯಿತು. ಆಗ ಉದ್ಯಮಗಳ ಮೇಲಿನ ನಿಯಂತ್ರಣ ಕಡಿಮೆ ಮಾಡಿ ವಿದೇಶಿ ವ್ಯಾಪಾರ ಮತ್ತು ಹೂಡಿಕೆಗೆ ವಿನಾಯಿತಿ ಹಾಗೂ ಸರ್ಕಾರಿ ಕಂಪನಿಗಳ ಖಾಸಗೀಕರಣ ಪ್ರಾರಂಭಿಸಲಾಯಿತು. ಈ ಕಾರಣಗಳಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ದರ ವೇಗ ಪಡೆದುಕೊಂಡಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
