ನವದೆಹಲಿ:ಕೊವಿಡ್​-19 ನಿಂದ ಎರಡೂವರೆ ತಿಂಗಳು ಲಾಕ್​ಡೌನ್​ ಆಗಿದ್ದ ದೇಶದಲ್ಲಿ ಅನ್​ಲಾಕ್​-1 ಜಾರಿಯಾಗಿ ಎರಡುವಾರ ಕಳೆದಿದೆ. ಹಾಗೇ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿಬಾರಿಯೂ ಲಾಕ್​​ಡೌನ್​ ಮುಂದುವರಿಸುವ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ 21 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದರು. ಇನ್ನುಳಿದ 15 ರಾಜ್ಯಗಳ ಸಿಎಂಗಳೊಂದಿಗೆ ನಾಳೆ ಸಭೆ ನಡೆಸಲಿದ್ದಾರೆ.
ಅನ್​ಲಾಕ್​ ಜಾರಿಯಾಗಿ ಎರಡು ವಾರ ಕಳೆದಿದೆ. ಈ ಸಮಯದಲ್ಲಿ ನಮಗಾದ ಅನುಭವ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಿದೆ. ನಾನಿವತ್ತು ಎಲ್ಲ ರಾಜ್ಯಗಳಲ್ಲಿ ಇರುವ ವಾಸ್ತವ ಸಂಗತಿಯನ್ನು ತಿಳಿಯಲು ಇಚ್ಛಿಸುತ್ತೇನೆ. ಕೊವಿಡ್​-19 ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ವಿವರಿಸಿ. ಜತೆಗೆ ನಿಮ್ಮ ಸಲಹೆಗಳನ್ನೂ ನೀಡಿ. ಇದರಿಂದ ನಾವು ಮುಂದಿನ ಕಾರ್ಯತಂತ್ರ ರೂಪಿಸಲು ಸಹಾಯವಾಗುತ್ತದೆ ಎಂದು ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ 21 ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸಿದರು.ಇದನ್ನೂ ಓದಿ:ಗಡಗಡ ನಡುಗಿತು ಟ್ರಂಪ್​ ಕೈ, ಶುರುವಾಯ್ತು ಗುಮಾನಿ: ವಿಡಿಯೋ ವೈರಲ್​
ಭಾರತದಲ್ಲಿ ಕರೊನಾ ವೈರಸ್​ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.50ಕ್ಕೂ ಹೆಚ್ಚು ಇದೆ. ಹಾಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ. ಭಾರತದಲ್ಲಿ ಕರೊನಾದಿಂದ ಸಾವನ್ನಪ್ಪುತ್ತಿರುವುದನ್ನು ನೋಡಿದರೆ ನಮಗೆ ಆತಂಕ ಆಗುತ್ತದೆ. ಆದರೆ ಒಂದು ಸತ್ಯವನ್ನು ಎಲ್ಲರೂ ತಿಳಿಯಬೇಕು. ಭಾರತದಲ್ಲಿ ಕೊವಿಡ್​-19ನಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ತುಂಬ ಕಡಿಮೆ ಇದೆ. ನಮ್ಮ ದೇಶ ಕರೊನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ ಎಂದು ಪ್ರಧಾನಿ ಹೇಳಿದರು.ಇದನ್ನೂ ಓದಿ:ಸುಶಾಂತ್​ ಸಿಂಗ್​​ ಓರ್ವ ನಟ ಎಂಬುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ? ಮತ್ತೊಂದು ಎಡವಟ್ಟು?
ಈಗಿರುವ ಪರಿಸ್ಥಿತಿಯಲ್ಲಿ ಮಾಸ್ಕ್​ ಇಲ್ಲದೆ ಯಾರೂ ಹೊರಗೆ ಹೋಗಬೇಡಿ. ಆ ಬಗ್ಗೆ ಯೋಚನೆಯನ್ನೂ ಮಾಡಬೇಡಿ. ದೋ ಗಜ್​ ಕೀ ದೂರಿ, ( ಎರಡು ಗಜ ಅಂತರ), ಕೈ ತೊಳೆಯುವುದು, ಸ್ಯಾನಿಟೈಸರ್​ ಬಳಕೆಗಳೆಲ್ಲ ಪ್ರಥಮ ಆದ್ಯತೆಗಳಾಗಿರಲಿ. ಈಗೀಗ ಎಲ್ಲ ಅಂಗಡಿ, ಮಾರುಕಟ್ಟೆಗಳು ತೆರೆದಿವೆ. ಅಲ್ಲಿಗೆ ಹೋಗಬೇಕಾದ ಜನರು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬ ಮುಖ್ಯ ಎಂದರು.
ಏಕಪಕ್ಷೀಯ ನಿರ್ಧಾರ ಕೈಗೊಂಡು ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ: ಚೀನಿಯರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 10 =
Remember me
