ನವದೆಹಲಿ: ಒಡಿಶಾದ ಬಾಲಸೋರ್​ನ ಎಪಿಜೆ ಅಬ್ದುಲ್ ಕಲಾಂ ಟೆಸ್ಟಿಂಗ್ ರೇಂಜ್​ನಲ್ಲಿ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಭಾರತ ಇಂದು ಹೈಪರ್​ ಸಾನಿಕ್ ಮಿಸೈಲ್ ಕ್ಲಬ್​ ಸೇರ್ಪಡೆಯಾಗಿದೆ. ಈ ಕ್ಷಿಪಣಿಯ ಶಬ್ದದ ವೇಗಕ್ಕಿಂತಲೂ ಆರು ಪಟ್ಟು ವೇಗದಲ್ಲಿ ಸಾಗುತ್ತದೆ. ಇಂತಹ ಮಿಸೈಲ್ ಹೊಂದಿರುವ ಇತರ ದೇಶಗಳು ಅಮೆರಿಕ, ರಷ್ಯಾ ಮತ್ತು ಚೀನಾ.
ಹೈಪರ್​ ಸಾನಿಕ್ ಟೆಸ್ಟ್ ಡೆಮಾನ್​ಸ್ಟ್ರೇಟರ್​ ವೆಹಿಕಲ್​ ಅನ್ನು ಡಿಫೆನ್ಸ್ ರಿಸರ್ಚ್​ ಆ್ಯಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ (ಡಿಆರ್​ಡಿಒ) ಅಭಿವೃದ್ಧಿಪಡಿಸಿದ್ದು, ಇಂದು ಬೆಳಗ್ಗೆ 11.03 ನಿಮಿಷಕ್ಕೆ ಅಗ್ನಿ ಮಿಸೈಲ್ ಬೂಸ್ಟರ್ ಅನ್ನು ಬಳಸಿಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಇದನ್ನೂ ಓದಿ:ಶಿಕ್ಷಕಿ ದೇಣಿಗೆ ಕೇಳಿದರೆ, ಅವರಿಂದಲೇ ₹48 ಲಕ್ಷ ದೋಚಿದ ಭೂಪ- ನಿಮಗೂ ಇದು ಪಾಠ!
ಸರ್ಕಾರಿ ಮಾಹಿತಿ ಪ್ರಕಾರ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಡಿಆರ್​ಡಿಒ ಸ್ಕ್ರ್ಯಾಮ್​ಜೆಟ್​ ಎಂಜಿನ್​ ಹೊಂದಿದ ಹೈಪರ್​ಸಾನಿಕ್​ ಮಿಸೈಲ್​ ಸಿದ್ಧಪಡಿಸುವ ಸಾಮರ್ಥ್ಯವನ್ನು ಹೊಂದಲಿದೆ. ಇದು ಸೆಕೆಂಡ್​ಗೆ ಎರಡು ಕಿ.ಮೀ.ಗೂ ಅಧಿಕ ವೇಗದಲ್ಲಿ ಸಂಚರಿಸಲಿದೆ. ಇಂದು ನಡೆದ ಪರೀಕ್ಷಾ ಪ್ರಯೋಗವನ್ನು ಡಿಆರ್​ಡಿಒ ಮುಖ್ಯಸ್ಥ ಸತೀಶ್​ ರೆಡ್ಡಿ ಮತ್ತು ಅವರ ತಂಡ ಮಾಡಿದೆ. ಮೂವತ್ತು ಕಿ.ಮೀ. ಸಂಚರಿಸಿದ ಬಳಿಕ ಅದು ಅಗ್ನಿ ಮಿಸೈಲ್ ಬೂಸ್ಟರನ್ನು ಪ್ರತ್ಯೇಕಿಸಿದೆ. ಇದು ಮಹತ್ವದ ಮೈಲಿಗಲ್ಲು ಎಂದು ಡಿಆರ್​ಡಿಒ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
In a historic mission today, India successfully flight tested Hypersonic Technology Demonstrator Vehicle (HSTDV), a giant leap in indigenous defence technologies and significant milestone towards a#sashaktbharatand#atmanirbharbharat.
— DRDO (@DRDO_India)September 7, 2020

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಘಟಿತ ಹೊಣೆಗಾರಿಕೆ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 3 =
Remember me
