ಭಾರತಕ್ಕೆ ಫೆಬ್ರವರಿ ಮಧ್ಯಭಾಗದಲ್ಲಿ ಕಾಲಿಟ್ಟ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್​ಡೌನ್ ಅಸ್ತ್ರ ಪ್ರಯೋಗಿಸಿದೆ. ಈಗಾಗಲೇ 3 ಬಾರಿ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ ಅದರ ರೂಪರೇಷೆಗಳು ಬದಲಾಗಿದ್ದು, 50ಕ್ಕೂ ಅಧಿಕ ದಿನ ಪೂರೈಸಿದೆ. ಇದರಿಂದ ಭಾರತಕ್ಕಾದ ಲಾಭ, ಅನುಷ್ಠಾನ ಕುರಿತ ಚಿತ್ರಣ ಇಲ್ಲಿದೆ.
ಜನತಾ ಕರ್ಫ್ಯೂದಿಂದ ಆರಂಭ
ದೇಶದಲ್ಲಿ ಕರೊನಾ ಪ್ರಕರಣಗಳು 500ರ ಗಡಿ ದಾಟಿ, 12 ಜನರನ್ನು ಬಲಿಪಡೆಯುತ್ತಲೇ ಎಚ್ಚೆತ್ತ ಕೇಂದ್ರ ಸರ್ಕಾರ ಲಾಕ್​ಡೌನ್ ಜಾರಿಗೆ ಚಿಂತನೆ ನಡೆಸಿತ್ತು.ಮೊದಲ ಪ್ರಯೋಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಿಸಿದ್ದರು. ಅಂದು ಎಲ್ಲ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಕೆಲವೇ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಮಾತ್ರ ಅನುಮತಿ ನೀಡಲಾಗಿತ್ತು. ಈ ಮೂಲಕ ಜನರ ಪ್ರತಿಕ್ರಿಯೆ ಗಮನಿಸಿದ ಕೇಂದ್ರ ಸರ್ಕಾರ ಲಾಕ್​ಡೌನ್ ಘೋಷಣೆಗೆ ಸಿದ್ಧತೆ ನಡೆಸಿತ್ತು.
ಸಿಎಂಗಳ ಜತೆ ಐದು ಬಾರಿ ವಿಡಿಯೋ ಕಾನ್ಪರೆನ್ಸ್
ಕರೊನಾ ಲಾಕ್​ಡೌನ್ ಘೋಷಣೆಯಾದಾಗಿನಿಂದ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜತೆ ಈವರೆಗೆ ಐದು ಬಾರಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿ, ಹಲವು ಮಹತ್ತರ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಸಲಹೆಗಳನ್ನು ಪರಿಗಣಿಸಿ ಕರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದ್ದಾರೆ.
ಮೊದಲಹಂತದ ಲಾಕ್​ಡೌನ್
ಜನತಾ ಕರ್ಫ್ಯೂ ನಡೆದ ಎರಡು ದಿನಗಳ ಬಳಿಕ ಮಾರ್ಚ್ 23ರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಲಾಕ್​ಡೌನ್ ಘೋಷಣೆ ಮಾಡಿದರು. ಮಾ.24ರಿಂದ ಏ.14ರವರೆಗೆ ಯಾರೂ ಮನೆಯಿಂದ ಆಚೆ ಬರಕೂಡದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದ್ದರು. ಈ ಅವಧಿಯಲ್ಲಿ ದಿನಸಿ, ಹಾಲು, ವೈದ್ಯಕೀಯ ಸೇರಿ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿತ್ತು. ತಜ್ಞರ ಪ್ರಕಾರ ಲಾಕ್​ಡೌನ್ ಇಲ್ಲದಿದ್ದರೆ ಭಾರತದಲ್ಲಿ 2 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿರುತ್ತಿದ್ದವು.
ಇದನ್ನೂ ಓದಿಮುತ್ತಪ್ಪ ರೈ ಸಾವಿಗೆ ಒಂದು ದಿನ ಮೊದಲು ಕುತೂಹಲ ಕೆರಳಿಸಿದ ಡಾನ್​ ಜಯರಾಜ್​ ಪುತ್ರನ ಟ್ವೀಟ್​
ಭಾಷಣ ಮೂಲಕ ಉತ್ಸಾಹ ತುಂಬಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಕರೊನಾ ಆರಂಭವಾದ ಬಳಿಕ ನಾಲ್ಕು ಬಾರಿ ದೇಶ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕರೊನಾ ವಿರುದ್ಧ ಹೋರಾಡಲು ಜನರಲ್ಲಿ ಉತ್ಸಾಹ ತುಂಬಿದ್ದಾರೆ. ಜನತಾ ಕರ್ಫ್ಯೂ ದಿನ ಸಂಜೆ 5 ಗಂಟೆಗೆ ಚಪ್ಪಾಳೆ, ಜಾಗಟೆ ಹೊಡೆಯುವ ಮೂಲಕ ಕರೊನಾ ವಾರಿಯರ್ಸ್​ಗೆ ಗೌರವ ಸೂಚಿಸಲು ಕೋರಿದ್ದರು. ಇದಕ್ಕೆ ದೇಶಾದ್ಯಂತ ಜನರು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದರು. ಎರಡನೇ ಭಾಷಣ ವೇಳೆ ಮನೆ ಮುಂದೆ ದೀಪ ಬೆಳಗಲು ಸೂಚಿಸಿದ್ದರು.
ಮೊದಲ ಬಾರಿ ವಿಸ್ತರಣೆ
ಲಾಕ್​ಡೌನ್ ಅವಧಿ ಮುಗಿಯುತ್ತ ಬಂದಂತೆ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ನಡೆಸಿ, ಅಲ್ಲಿನ ಕರೊನಾ ಪರಿಸ್ಥಿತಿ ಬಗ್ಗೆ ವರದಿ ಪಡೆದರು. ಏಪ್ರಿಲ್ 14ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೇ 3ರವರೆಗೆ ಲಾಕ್​ಡೌನ್ ವಿಸ್ತರಿಸುವುದಾಗಿ ಘೋಷಿಸಿದರು. ಆದರೆ ಈ ಬಾರಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಯಿತು. ಕರೊನಾ ಪ್ರಕರಣಗಳ ಆಧಾರದ ಮೇಲೆ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಹಾಗೂ ಹಸಿರು ಎಂಬ ಮೂರು ವಲಯಗಳಾಗಿ ವಿಂಗಡಿಸಲಾಯಿತು.
ಮತ್ತೆ ಎರಡು ವಾರ ವಿಸ್ತರಣೆ
ಮೇ 1ರಂದು ಲಾಕ್​ಡೌನ್ ಅವಧಿಯನ್ನು ಎರಡು ವಾರಗಳ ಕಾಲ ವಿಸ್ತರಣೆ ಮಾಡಲಾಯಿತು. ಕುಂಠಿತವಾಗಿದ್ದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮೂರನೇ ವಿಸ್ತರಣೆ ವೇಳೆ ಭಾರಿ ವಿನಾಯಿತಿಗಳನ್ನು ನೀಡಲಾಯಿತು. ಹಲವು ಪ್ರದೇಶಗಳಲ್ಲಿ ಕೈಗಾರಿಕೆಗಳು, ಇನ್ನಿತರ ಚಟುವಟಿಕೆಗಳನ್ನು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಸಲು ಅನುಮತಿಸಲಾಯಿತು. ಪ್ರಸ್ತುತ ಲಾಕ್​ಡೌನ್ ಅವಧಿ ಮೇ 17ಕ್ಕೆ ಮುಗಿಯಲಿದ್ದು, ಹಲವು ವಿನಾಯಿತಿಗಳೊಂದಿಗೆ ಮತ್ತೆ ಅವಧಿ ವಿಸ್ತರಣೆಯಾಗುವ ಸಂಭವವಿದೆ.
ಹೆಂಡ್ತಿನಾ ಕರ್ಕೊಂಡು ಬಾ ಅಂದ್ರೆ, ಕರೊನಾನೂ ಕರ್ಕೊಂಡ್‌ ಬಂದ ಬೆಂಗಳೂರಿನ ಈ ಯುವಕ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 9 =
Remember me
