ನವದೆಹಲಿ: ಜಮ್ಮು-ಕಾಶ್ಮೀರದ ಭಾಗವಾಗಿರುಯವ ಗಿಲ್ಗಿಟ್​-ಬಾಲ್ಟಿಸ್ತಾನ ಪ್ರದೇಶಕ್ಕೆ ಸಂಬಂಧಿಸಿ ಪಾಕಿಸ್ತಾನದ ಕೋರ್ಟ್​ ನೀಡಿದ ತೀರ್ಪಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರ, ಲಡಾಕ್​ನ ಭಾಗವಾಗಿರುವ ಗಿಲ್ಗಿಟ್​ -ಬಾಲ್ಟಿಸ್ತಾನದಲ್ಲಿ ಅಕ್ರಮ ನೆಲೆಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಪಿಒಕೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಪಾಕಿಸ್ತಾನ ಸಿದ್ಧವಿದೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, ದೆಹಲಿಯಲ್ಲಿರುವ ಪಾಕಿಸ್ತಾನದಹಿರಿಯ ರಾಯಭಾರಿಯನ್ನು ಕರೆಯಿಸಿಕೊಂಡು ಪಾಕಿಸ್ತಾನದ ಸುಪ್ರೀಂ ಕೋರ್ಟ್​ ತಥಾಕಥಿತ ಗಿಲ್ಗಿಟ್​-ಬಾಲ್ಟಿಸ್ತಾನ್ ಕುರಿತು ನೀಡಿರುವ ತೀರ್ಪಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಗಿಲ್ಗಿಟ್​-ಬಾಲ್ಟಿಸ್ತಾನ ಪ್ರದೇಶವು ಜಮ್ಮು-ಕಾಶ್ಮೀರ, ಲಡಾಕ್​​ನ ಸಂಪೂರ್ಣ ಭೌಗೋಳಿಕ ವ್ಯಾಪ್ತಿಯಲ್ಲೇ ಬರುತ್ತಿದೆ. ಇದರ ಮೇಲಿನ ಸಂಪೂರ್ಣ ಹಕ್ಕು ಕೂಡ ಭಾರತದ್ದೇ ಆಗಿದೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ:ಒಂದೊಮ್ಮೆ ಪಿಒಕೆ ಭಾರತದ ಭಾಗವಾಗಬೇಕು ಎಂದು ಸಂಸತ್ತು ಬಯಸಿದರೆ ಅದನ್ನು ಕಾರ್ಯಗತಗೊಳಿಸುವ ಕೆಲಸ ನಮ್ಮದು ಎಂದ ಸೇನಾ ಮುಖ್ಯಸ್ಥ ಎಂಎಂ ನರವಣೆ
ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ವ್ಯಾಪ್ತಿಯಲ್ಲಿ ಗಿಲ್ಗಿಟ್​-ಬಾಲ್ಟಿಸ್ತಾನವನ್ನೂ ಸೇರಿಸಲಾಗಿದೆ. ಈ ರೀತಿ ಆದೇಶ ಸರಿಯಲ್ಲ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಾಕ್​ ಸರ್ಕಾರ ಅಕ್ರಮವಾಗಿ ಜಮ್ಮು-ಕಾಶ್ಮೀರದ ಕೆಲವು ಭೂಪ್ರದೇಶವನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದು,ಅಲ್ಲಿ ಕಳೆದ ಏಳು ದಶಕಗಳಿಂದ ಸ್ಥಳೀಯ ಜನರ ಮೇಲೆ ಪಾಕಿಸ್ತಾನ ಸರ್ಕಾರ ದೌರ್ಜನ್ಯವೆಸಗುತ್ತ ಬಂದಿದೆ. ಇದನ್ನು ನಿಲ್ಲಿಸಬೇಕು. ಅಲ್ಲಿನ ನೆಲೆಗಳನ್ನೆಲ್ಲ ತೆರವುಗೊಳಿಸಿ ಆ ಪ್ರದೇಶವನ್ನು ಭಾರತದ ಸುಪರ್ದಿಗೆ ಬಿಟ್ಟುಕೊಡಬೇಕು ಎಂದು ಭಾರತ ತಾಕೀತು ಮಾಡಿದೆ. (ಏಜೆನ್ಸೀಸ್​)
https://www.vijayavani.net/the-viral-photo-is-from-syria-and-not-pok/
https://www.vijayavani.net/pok-peoples-protests-in-rawalpindi-against-pakistan/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
