ನವದೆಹಲಿ:ಪೂರ್ವಾನ್ವಯ ತೆರಿಗೆ ಹೇರಿಕೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ವ್ಯಾಜ್ಯವೊಂದರಲ್ಲಿ ಭಾರತಕ್ಕೆ ಸೋಲಾಗಿದ್ದು, ಬ್ರಿಟನ್​ನ ಕೈರ್ನ್ ಎನರ್ಜಿ ಕಂಪನಿಗೆ 10,500 ಕೋಟಿ ರೂಪಾಯಿ (1.40 ಬಿಲಿಯನ್ ಡಾಲರ್) ಮೊತ್ತವ ಮರಳಿಸುವಂತೆ ಆದೇಶಿಸಲಾಗಿದೆ. ಕೈರ್ನ್ ಎನರ್ಜಿ ಕಂಪನಿ ಹೂಡಿದ್ದ ದಾವೆಯ ವಿಚಾರಣೆ ನಡೆಸಿದ ಮೂವರು ಸದಸ್ಯರ ತೆರಿಗೆ ನ್ಯಾಯಮಂಡಳಿ ಈ ಸೂಚನೆ ನೀಡಿದೆ.
ತೆರಿಗೆ ವಸೂಲಿಗಾಗಿ ಸರ್ಕಾರ ಕೈರ್ನ್ ಎನರ್ಜಿಯ ಡಿವಿಡೆಂಡ್​ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಹಾಗೂ ತೆರಿಗೆ ಮರುಪಾವತಿಯನ್ನು ತಡೆ ಹಿಡಿದಿತ್ತು. ಅವೆಲ್ಲವನ್ನೂ ಬಡ್ಡಿ ಹಾಗೂ ವೆಚ್ಚ ಸಹಿತ ಮರಳಿಸುವಂತೆ 582 ಪುಟಗಳ ತೀರ್ಪಿನಲ್ಲಿ ಸೂಚಿಸಿದೆ. ಅದರ ಮೊತ್ತ 10,500 ಕೋಟಿ ರೂಪಾಯಿ ಆಗುತ್ತದೆ.
ಕೈರ್ನ್ ಇಂಡಿಯಾದ 2006-07ನೇ ಸಾಲಿನ ಆಂತರಿಕ ಪುನರ್​ಸಂಘಟನೆ ಹಿನ್ನೆಲೆಯಲ್ಲಿ 10,247 ಕೋಟಿ ರೂಪಾಯಿ ಪೂವಾನ್ವಯ ತೆರಿಗೆಯನ್ನು ಭಾರತ ಸರ್ಕಾರ ವಿಧಿಸಿದ್ದು ನ್ಯಾಯೋಚಿತವಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಈ ಮಂಡಳಿಯಲ್ಲಿ ಭಾರತದ ಒಬ್ಬ ಪ್ರತಿನಿಧಿಯೂ ಇದ್ದರು.
2ನೇ ಸೋಲು: ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಭಾರತಕ್ಕೆ ಆಗಿರುವ ಎರಡನೇ ಸೋಲು ಇದಾಗಿದೆ. ಸೆಪ್ಟೆಂಬರ್​ನಲ್ಲಿ ಬ್ರಿಟನ್​ನ ವೊಡಾಫೋನ್ ಸಮೂಹ 22,100 ಕೋಟಿ ರೂಪಾಯಿ ತೆರಿಗೆ ಪ್ರಕರಣದಲ್ಲಿ ಜಯ ಸಾಧಿಸಿತ್ತು.
ಪರಿಶಿಷ್ಟ ಜಾತಿಯವರ ಪೋಸ್ಟ್ ಮೆಟ್ರಿಕ್ ಸ್ಕಾಲರ್​ಷಿಪ್​ಗೆ 59,000 ಕೋಟಿ ರೂ. ಹೂಡಿಕೆ: ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 8 =
Remember me
