ನವದೆಹಲಿ:ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಜೈಪುರ, ಗುವಾಹಟಿ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ನಿಲ್ದಾಣಗಳ ಲೀಸ್ ಪ್ರಸ್ತಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ಸಭೆ ಒಪ್ಪಿಗೆ ನೀಡಿತು. ಜಾಗತಿಕ ಬಿಡ್ಡಿಂಗ್​ನಲ್ಲಿ ಯಶಸ್ವಿಯಾದ ಅದಾನಿ ಎಂಟರ್​ಪ್ರೖೆಸಸ್ ಸಂಸ್ಥೆಗೆ ಖಾಸಗೀಕರಣದ ಗುತ್ತಿಗೆ ಸಿಕ್ಕಿದೆ. ಈ ಮೂರು ವಿಮಾನ ನಿಲ್ದಾನಗಳ ಅಭಿವೃದ್ಧಿ, ಆಡಳಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆ ಅವಧಿ 50 ವರ್ಷದ್ದಾಗಿರುತ್ತದೆ. ಸೇವೆಯಲ್ಲಿ ದಕ್ಷತೆ, ಪರಿಣತಿ ಹಾಗೂ ವೃತ್ತಿಪರತೆಗೆ ಈ ಖಾಸಗೀಕರಣ ಪ್ರಕ್ರಿಯೆ ನೆರವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಗತ್ಯವಾದ ಬಂಡವಾಳ ಹೂಡಿಕೆಗೂ ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿದೆ.
ಕಬ್ಬಿಗೆ ನ್ಯಾಯಸಮ್ಮತ ಬೆಲೆ:2020-21ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ನೀಡಬೇಕಾದ ಮುಕ್ತ ಹಾಗೂ ನ್ಯಾಯಸಮ್ಮತ ಬೆಲೆ (ಎಫ್​ಆರ್​ಪಿ) ಮಂಜೂರು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. 2020-21ನೇ ಸಾಲಿನ ಕಬ್ಬಿನ ಋತುವಿಗೆ (ಅಕ್ಟೋಬರ್-ಸೆಪ್ಟೆಂಬರ್) ಸಂಬಂಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃಷಿ ದರ ಮತ್ತು ಬೆಲೆ ಆಯೋಗದ (ಸಿಎಸಿಪಿ) ಶಿಫಾರಸಿನ ಅನ್ವಯ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಕಬ್ಬು ಬೆಳೆಗಾರರ ಹಿತರಕ್ಷಣೆ ಸಲುವಾಗಿ ಎಫ್​ಆರ್​ಪಿಯನ್ನು ನಿರ್ಧರಿಸಲಾಗಿದೆ.
ಕಬ್ಬಿಗೆ ಎಫ್​ಆರ್​ಪಿ ದರಗಳು
ಇಂಧನ ಕ್ಷೇತ್ರಕ್ಕೆ ಪರಿಹಾರ
ಕರೊನಾ ಸಾಂಕ್ರಾಮಿಕತೆಯಿಂದಾಗಿ ಸಮಸ್ಯೆಗೆ ಸಿಲುಕಿರುವ ಇಂಧನ ಕ್ಷೇತ್ರಕ್ಕೆ ಪರಿಹಾರ ಒದಗಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ವಿದ್ಯುತ್ ವಿತರಣೆ ಕಂಪನಿಗಳಿಗೆ (ಡಿಸ್ಕಾಂ) ಇಂಧನ ಹಣಕಾಸು ನಿಗಮ (ಪಿಎಫ್​ಸಿ) ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮಗಳು (ಆರ್​ಇಸಿ) ಸಾಲ ನೀಡಿಕೆಯಲ್ಲಿ ಒಂದು ಬಾರಿ ಸಡಿಲಿಕೆ ಕಲ್ಪಿಸಲು ಸಮಿತಿ ಅನುಮೋದನೆ ನೀಡಿದೆ. ಉಜ್ವಲ್ ಡಿಸ್ಕಾಂ ಭರವಸೆ ಯೋಜನೆಯಡಿ (ಉದಯ್) ಕಳೆದ ವರ್ಷದ ಆದಾಯದ ಶೇಕಡ 25 ಕಾರ್ಯವಾಹಿ ಬಂಡವಾಳದ (ರ್ವಂಗ್ ಕ್ಯಾಪಿಟಲ್) ಮೇಲಿನ ಮಿತಿವರೆಗೆ ಸಾಲ ವಿಸ್ತರಿಸಲು ಅನುಮೋದನೆ ನೀಡಲಾಗಿದೆ. ಸರ್ಕಾರದ ಬುಧವಾರದ ನಿರ್ಧಾರದಿಂದಾಗಿ ಇಂಧನ ಕ್ಷೇತ್ರದ ಹಣಕಾಸು ಸ್ಥಿತಿ ಸುಧಾರಿಸಲಿದೆ ಹಾಗೂ ಡಿಸ್ಕಾಂಗಳಿಗೆ ರಾಜ್ಯ ಸರ್ಕಾರಗಳು ಪಾವತಿ ಮಾಡುವುದನ್ನು ಖಾತರಿಪಡಿಸುತ್ತದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 3 =
Remember me
