ನವದೆಹಲಿ:ಚೀನಾದಿಂದ ಅಂದಾಜು ಒಂದೂವರೆ ಕೋಟಿ ಕೋವಿಡ್​-19 ಟೆಸ್ಟಿಂಗ್​ ಕಿಟ್​ಗಳಿಗಾಗಿ ಭಾರತ ಬೇಡಿಕೆ ಇಟ್ಟಿದೆ. ಈ ಪೈಕಿ 6.5 ಲಕ್ಷ ಟೆಸ್ಟಿಂಗ್​ಕಿಟ್​ಗಳನ್ನು ಚೀನಾ ಈಗಾಗಲೇ ಪೂರೈಸಿದೆ. ಆದರೆ, ಇವುಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳೆದ್ದಿವೆ. ಹೀಗಾಗಿ ದೇಶದಲ್ಲಿಯೇ ಇವುಗಳ ಉತ್ಪಾದನೆಯಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ.
ಇದೀಗ ದಕ್ಷಿಣ ಕೊರಿಯಾದ ಕಂಪನಿಗಳಿಂದ ಟೆಸ್ಟಿಂಗ್​ ಕಿಟ್​ಗಳನ್ನು ಖರೀದಿಸಲು ಭಾರತ ಮುಂದಾಗಿದೆ. ಹರಿಯಾಣದ ಮನೇಸರ್​ನಲ್ಲಿರುವ ಘಟಕದಲ್ಲಿಯೇ ಇವುಗಳನ್ನು ಉತ್ಪಾದನೆ ಮಾಡಲಾಗುತ್ತಿರುವುದು ವಿಶೇಷವಾಗಿದೆ.
ದಕ್ಷಿಣ ಕೊರಿಯಾಕ್ಕೆ ಭಾರತದ ರಾಯಭಾರಿಯಾಗಿರುವ ಸುಪ್ರಿಯಾ ರಂಗನಾಥನ್​ ಚಂಗ್​ಚಿಯಾಂಗ್​ನಲ್ಲಿರುವ ಎಸ್​ಡಿ ಬಯೋಸೆನ್ಸರ್​ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧದ ಮಾತುಕತೆಗಳನ್ನು ಮುಗಿಸಿದ್ದಾರೆ. ವಾರದೊಳಗೆ 5 ಲಕ್ಷ ಟೆಸ್ಟಿಂಗ್​ ಕಿಟ್​ಗಳನ್ನು ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಅಗತ್ಯ ಕಚ್ಚಾವಸ್ತುಗಳನ್ನು ಕ್ರೋಡೀಕರಿಸುತ್ತಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ರಾಜ್ಯಗಳಿಗೆ ಪೂರೈಸಲಾಗಿರುವ ರ‍್ಯಾಪಿಡ್​ ಟೆಸ್ಟಿಂಗ್​ ಕಿಟ್​ಗಳನ್ನು ಇನ್ನೆರಡು ದಿನಗಳವರೆಗೆ ಬಳಸದಂತೆ ಮಂಗಳವಾರವಷ್ಟೇ ಹೇಳಿತ್ತು. ಸಂಸ್ಥೆಯ ಪರೀಕ್ಷಾ ತಂಡಗಳು ಕ್ಷೇತ್ರಕಾರ್ಯದ ವರದಿ ನೀಡಿದ ಬಳಿಕ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು.
ಇದಲ್ಲದೇ, ದಕ್ಷಿಣ ಕೊರಿಯಾದ ಹುಮಾಸಿಸ್​ ಕಂಪನಿಯೊಂದಿಗೂ ಭಾರತ ಟೆಸ್ಟಿಂಗ್​ ಕಿಟ್​ ಹಾಗೂ ಇತರ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ದಕ್ಷಿಣ ಕೊರಿಯಾ ಕಂಪನಿಗಳು 4.5 ಲಕ್ಷ ಟೆಸ್ಟಿಂಗ್​ ಕಿಟ್​ಗಳನ್ನು ಭಾರತಕ್ಕೆ ಪೂರೈಸಿವೆ. ಈ ಮೂಲಕ ವೈದ್ಯಕೀಯ ಉತ್ಪನ್ನಗಳಿಗಾಗಿ ಚೀನಾ ಮೇಲಿನ ಅವಲಂಬನೆ ಕಡಿಮೆಯಾದಂತಾಗಲಿದೆ.
ಲಾಕ್​ಡೌನ್​ ತೆರವಾದರೆ ಎಲ್ಲವೂ ಮುಗಿಯದು, ಕರೊನಾ 2ನೇ ಹಂತಕ್ಕೆ ಸಜ್ಜಾಗಬೇಕಿದೆ ಭಾರತ, ಸೆಪ್ಟೆಂಬರ್​ವರೆಗೆ ಇರಲಿದೆ ಕೆಲ ನಿರ್ಬಂಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
