ಲುಂಬಿನಿ:ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದು ಭಾರತೀಯರಷ್ಟೇ ನೇಪಾಳಿಗರಿಗೂ ಖುಷಿ ನೀಡುವ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು. ಅವರು ನೇಪಾಳ ಪ್ರಧಾನಿ ಶೇರ್ ಬಹಾದುರ್ ದೇವುಬಾ ಅವರ ಆಹ್ವಾನದ ಮೇರೆಗೆ ಲುಂಬಿನಿಯಲ್ಲಿ 2566ನೇ ಬುದ್ಧ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ನೇಪಾಳಿ ಪ್ರಧಾನಿ ದೇವುಬಾ ಪತ್ನಿ ಡಾ. ಅರ್ಜು ರಾಣಾ ದೇವುಬಾ ಮತ್ತು ಅನೇಕ ನೇಪಾಳಿ ಸಚಿವರು, ಗಣ್ಯರು ಸೇರಿ 2,500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಜನಕಪುರದಲ್ಲಿ ನಾನು ಹೇಳಿದ್ದೆ, ನೇಪಾಳವಿಲ್ಲದೆ ನಮ್ಮ ರಾಮ ಪರಿಪೂರ್ಣನಾಗಲಾರ. ಇಂದಿಗೂ ನನಗೆ ಅದರ ಅರಿವು ಇದೆ. ಭಗವಾನ್ ಶ್ರೀರಾಮಚಂದ್ರನ ಮಂದಿರ ಭಾರತದಲ್ಲಿ ನಿರ್ವಣವಾಗುತ್ತಿದ್ದರೆ ನೇಪಾಳದಲ್ಲಿನ ಜನರಿಗೂ ಅದು ಖುಷಿ ನೀಡುವ ವಿಚಾರವೇ ಆಗಿರುತ್ತದೆ ಎಂಬುದನ್ನೂ ಬಲ್ಲೆ ಎಂದು ಮೋದಿ ಹೇಳಿದರು. ಈಗ ಎದುರಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಭಾರತ ಮತ್ತು ನೇಪಾಳದ ಎಂದಿಗೂ ವೃದ್ಧಿಸುವ ಸ್ನೇಹವು ಇಡೀ ಮನುಕುಲಕ್ಕೆ ಪ್ರಯೋಜನಕಾರಿಯಾಗಲಿದೆ. ಎರಡೂ ರಾಷ್ಟ್ರಗಳ ಸ್ನೇಹ ಸಂಬಂಧ ಹಿಮಾಲಯದಂತೆ ಅಚಲವಾದುದು ಎಂದು ಪ್ರಧಾನಿ ಮೋದಿ ಹೇಳಿದರು.
ಭಗವಾನ್ ಬುದ್ಧ ಮಾನವೀಯತೆಯ ಸಾಕಾರ ಮೂರ್ತಿ. ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಬುದ್ಧನ ಜೀವನಾದರ್ಶಗಳು, ಚಿಂತನೆಗಳು ಸಹಕಾರಿ. ಉಭಯ ದೇಶಗಳು ಇವುಗಳ ಅನುಷ್ಠಾನಕ್ಕೆ ಜಂಟಿಯಾಗಿ ಪ್ರಯತ್ನಿಸಲಿವೆ ಎಂದರು.
ಬುದ್ಧನ ಜನ್ಮಭೂಮಿ:ಭಗವಾನ್ ಬುದ್ಧನ ಜನ್ಮಭೂಮಿ ಲುಂಬಿನಿ. ಇದು ಬೌದ್ಧ ಧರ್ವಿುಯರ ಧಾರ್ವಿುಕ ಶ್ರದ್ಧಾಕೇಂದ್ರ. ನೇಪಾಳದ ದಕ್ಷಿಣ ಭಾಗದಲ್ಲಿ ಈ ಊರು ಇದೆ. ಲುಂಬಿನಿಯಲ್ಲಿ ಭಾರತ ಮತ್ತು ನೇಪಾಳ ಸರ್ಕಾರಗಳು ಜಂಟಿಯಾಗಿ ಮ್ಯೂಸಿಯಂ ಅನ್ನು ನಿರ್ವಿುಸುತ್ತಿವೆ. ಲುಂಬಿನಿ ಬುದ್ಧಿಸ್ಟ್ ಯೂನಿರ್ವಸಿಟಿಯಲ್ಲಿ ಡಾ.ಅಂಬೇಡ್ಕರ್ ಚೇರ್ ಫಾರ್ ಬುದ್ಧಿಸ್ಟ್ ಸ್ಟಡೀಸ್ ಸ್ಥಾಪನೆಗೆ ಭಾರತ ಸರ್ಕಾರ ಕ್ರಮ ತೆಗೆದುಕೊಂಡಿದೆ.
ಮಹಾಬೋಧಿ ಗಿಡ:ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2014ರಲ್ಲಿ ಮೊದಲ ಬಾರಿಗೆ ನೇಪಾಳಕ್ಕೆ ಆಗಮಿಸಿದಾಗ ಮಹಾಬೋಧಿ ಗಿಡವನ್ನು ಇಲ್ಲಿ ನೆಟ್ಟಿದ್ದೆ. ಅದು ಈಗ ಮರವಾಗಿ ಬೆಳೆಯುತ್ತಿರುವುದನ್ನು ನೋಡಲು ಖುಷಿ ಎನಿಸುತ್ತಿದೆ. ಭಾರತದ ಸಾರಾನಾಥ, ಬೋಧಗಯಾ ಮತ್ತು ಖುಷಿನಗರದಿಂದ ನೇಪಾಳದ ಲುಂಬಿನಿ ತನಕ ಎಲ್ಲ ಧಾರ್ವಿುಕ ಶ್ರದ್ಧಾಕೇಂದ್ರಗಳು ನಮ್ಮ ಸಾಮಾನ್ಯ ಪಾರಂಪರಿಕ ತಾಣಗಳು ಮತ್ತು ಹಂಚಿಕೊಂಡಿರುವ ಸಾಂಸ್ಕೃತಿಕ ಮೌಲ್ಯಗಳ ಪ್ರತೀಕ. ನಾವು ಇದನ್ನು ಒಟ್ಟಾಗಿ ಬೆಳೆಸಬೇಕು ಎಂದು ಮೋದಿ ಹೇಳಿದರು.
ಭಾರತವು ನಮ್ಮ ದೇಶದ ಆಪ್ತ ಮಿತ್ರ ಮತ್ತು ವಿಶ್ವಾಸಾರ್ಹ ಸ್ನೇಹಿತ ರಾಷ್ಟ್ರ. ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು. ಬೋಧಗಯಾ, ಸಾರಾನಾಥ, ಕುಷಿನಗರ ಮತ್ತು ಲುಂಬಿನಿಯನ್ನು ಜೋಡಿಸುವ ಬುದ್ಧ ಸರ್ಕೀಟ್ ಯೋಜನೆ ಅನುಷ್ಠಾನವನ್ನು ಎದುರು ನೋಡುತ್ತಿದ್ದೇವೆ.
|ಶೇರ್ ಬಹಾದುರ್ ದೇವುಬಾನೇಪಾಳ ಪ್ರಧಾನಿ
ವಡ್​ನಗರ ಬೌದ್ಧ ಕೇಂದ್ರ:ಗುಜರಾತಿನಲ್ಲಿರುವ ನನ್ನ ಹುಟ್ಟೂರು ವಡ್​ನಗರ ಬೌದ್ಧ ಧರ್ಮ ಕಲಿಕಾ ಕೇಂದ್ರವಾಗಿತ್ತು. ಇಂದಿಗೂ ಪುರಾತನ ಕುರುಹುಗಳು ಲಭ್ಯವಾಗುತ್ತಿವೆ. ಅವುಗಳನ್ನೆಲ್ಲ ಸಂರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮೋದಿ ವಿವರಿಸಿದರು.
ಆರು ಒಪ್ಪಂದಗಳಿಗೆ ಸಹಿ:ಪ್ರಧಾನಿ ಮೋದಿ ಅವರ ನೇಪಾಳ ಪ್ರವಾಸದ ವೇಳೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಆರು ಸಹಕಾರ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾಯಾ ದೇವಿ ದೇಗುಲಕ್ಕೆ ಭೇಟಿ:ನೇಪಾಳದ ಮಾಯಾ ದೇವಿ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ಮೋದಿ ಅವರ ನೇಪಾಳ ಪ್ರವಾಸದ ಮೊದಲ ಭೇಟಿ ಇದೇ ದೇವಸ್ಥಾನಕ್ಕೆ ಆಗಿತ್ತು. ಈ ದೇಗುಲದ ಪಕ್ಕದಲ್ಲೇ ಇರುವ ಅಶೋಕ ಸ್ತಂಭ ( ಕ್ರಿ.ಪೂ.249) ದ ಬಳಿ ಇಬ್ಬರು ಪ್ರಧಾನಿಗಳು ದೀಪ ಬೆಳಗಿಸಿದರು.
5ನೇ ಬಾರಿ ನೇಪಾಳಕ್ಕೆ:ಪ್ರಧಾನಿ ನರೇಂದ್ರ ಮೋದಿ 2014 ರಿಂದೀಚೆಗೆ ಐದನೇ ಬಾರಿಗೆ ನೇಪಾಳಕ್ಕೆ ಭೇಟಿ ನೀಡಿದರು. ಗಡಿ ತಕರಾರು ವ್ಯಕ್ತವಾದ ಬಳಿಕ ಇದು ಮೊದಲನೇ ಭೇಟಿ. ಉತ್ತರ ಪ್ರದೇಶದ ಖುಷಿನಗರದಿಂದ ಭಾರತೀಯ ವಾಯು ಪಡೆಯ ವಿಶೇಷ ಹೆಲಿಕಾಪ್ಟರ್​ನಲ್ಲಿ ಅವರು ನೇಪಾಳ ಪ್ರವಾಸ ಕೈಗೊಂಡರು.
ಮಂಡ್ಯ ಹುಡುಗ್ರ ಅಭಿಮಾನ ನೋಡಿ ‘ಓ ಮೈ ಗಾಡ್’ ಎಂದ ಸನ್ನಿ ಲಿಯೋನ್​!; ನಿಮಗಾಗಿ ರಕ್ತದಾನ ಮಾಡುವೆ ಅಂದ್ರು ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + one =
Remember me
