ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಧಿಕಾರಾವಧಿ ಜುಲೈ 25ರಂದು ಕೊನೆಗೊಳ್ಳುತ್ತಿದೆ. ಸಂವಿಧಾನದ ಅನುಚ್ಛೇದ 62(1) ರ ಪ್ರಕಾರ, ರಾಷ್ಟ್ರಪತಿಗಳ ಅಧಿಕಾರದ ಅವಧಿ ಮುಕ್ತಾಯವಾಗುವ ಮೊದಲೇ ನೂತನ ರಾಷ್ಟ್ರಪತಿ ಚುನಾವಣೆಯನ್ನು ಪೂರ್ಣಗೊಳಿಸಬೇಕು. ಹೀಗಾಗಿ, ಭಾರತದ ಮುಂದಿನ ರಾಷ್ಟ್ರಪತಿ ಚುನಾವಣೆಯು ಜುಲೈ 18ರಂದು ಜರುಗಲಿದೆ. ಚುನಾವಣೆ ಆಯೋಗವು ಇದಕ್ಕಾಗಿ ಅಧಿಸೂಚನೆಯನ್ನೂ ಹೊರಡಿಸಿದೆ. ಪ್ರಸ್ತುತ ರೇಸ್​ನಲ್ಲಿ ಇಬ್ಬರು ಸ್ಪರ್ಧಿಗಳಿದ್ದಾರೆ. ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುಮು ಹಾಗೂ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಬೆಂಬಲದಿಂದ ಯಶವಂತ್ ಸಿನ್ಹಾ ಕಣಕ್ಕೆ ಇಳಿದಿದ್ದಾರೆ.
ಮತದಾರರು ಯಾರು?:ನಮ್ಮಲ್ಲಿ ಜನರು ನೇರವಾಗಿ ಅಧ್ಯಕ್ಷರು ಅಂದರೆ ರಾಷ್ಟ್ರಪತಿಗಳನ್ನು ಚುನಾಯಿಸುವುದಿಲ್ಲ. ಶಾಸಕರು ಹಾಗೂ ಸಂಸದರು ಮತದಾನದ ಮೂಲಕ ಇವರನ್ನು ಆಯ್ಕೆ ಮಾಡುತ್ತಾರೆ. ಸಂಸದರಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಿಬ್ಬರಿಗೂ ಮತದಾನದ ಹಕ್ಕು ಇರುತ್ತದೆ. ಆದರೆ, ಶಾಸಕರ ಪೈಕಿ, ವಿಧಾನಸಭೆ ಸದಸ್ಯರಿಗೆ ಮಾತ್ರ ಮತದಾನಕ್ಕೆ ಅವಕಾಶವಿದ್ದು, ವಿಧಾನ ಪರಿಷತ್ ಸದಸ್ಯರಿಗೆ ಈ ಹಕ್ಕು ಇರುವುದಿಲ್ಲ.
ಕರ್ನಾಟಕದ ಪಾಲು ಎಷ್ಟು?:ಕರ್ನಾಟಕದಲ್ಲಿ ಒಟ್ಟು 224 ವಿಧಾನಸಭೆ ಸದಸ್ಯರಿ ದ್ದಾರೆ. ಒಬ್ಬ ವಿಧಾನಸಭೆ ಸದಸ್ಯರ ಮತ ಮೌಲ್ಯ 131 ಇದೆ. ರಾಜ್ಯದ ಎಲ್ಲ ವಿಧಾನಸಭೆ ಸದಸ್ಯರ ಮೌಲ್ಯ 224 ್ಡ 131 = 29,344. ರಾಜ್ಯದ ಸಂಸತ್ ಸದಸ್ಯರ ಸಂಖ್ಯೆ28. ಒಬ್ಬ ಸಂಸದರ ಮತ ಮೌಲ್ಯ 700. ರಾಜ್ಯದ ಎಲ್ಲ ಸಂಸದರ ಮತ ಮೌಲ್ಯ 19,600. ಶಾಸಕರು, ಸಂಸದರು ಸೇರಿ ಈ ಚುನಾವಣೆಯಲ್ಲಿ ಕರ್ನಾಟಕದ ಒಟ್ಟು ಮತ ಮೌಲ್ಯ 48,944 ಆಗುತ್ತದೆ.
ರಾಷ್ಟ್ರಪತಿ ಭವನದ ವೈಶಿಷ್ಟ್ಯ:ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ರಾಷ್ಟ್ರಪತಿಗಳ ಅಧಿಕೃತ ನಿವಾಸ. 320 ಎಕರೆ ವಿಶಾಲ ಪ್ರದೇಶದಲ್ಲಿ ಇದು ವ್ಯಾಪಿಸಿದೆ. ನಾಲ್ಕಂತಸ್ತಿನ ಈ ಕಟ್ಟಡದಲ್ಲಿ 340 ಕೋಣೆಗಳಿವೆ. ಸುಸಜ್ಜಿತ ಹಾಲ್​ಗಳು, ಕಚೇರಿ ಕೋಣೆಗಳು, ಸಿಬ್ಬಂದಿ ವರ್ಗ ಮತ್ತು ಅಂಗರಕ್ಷಕರ ಮನೆಗಳು, ಕುದುರೆ ಲಾಯ ಇದರಲ್ಲಿವೆ. ಇದರ ಒಟ್ಟಾರೆ ನೆಲ ಪ್ರದೇಶ (ಫ್ಲೋರ್ ಏರಿಯಾ) 2 ಲಕ್ಷ ಚದರ ಅಡಿ. 2.5 ಕಿ.ಮೀ. ಕಾರಿಡಾರ್, 190 ಎಕರೆಯಷ್ಟು ಉದ್ಯಾನ ಪ್ರದೇಶ ಹೊಂದಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತದ ಮುಖ್ಯಸ್ಥ ಗವರ್ನರ್ ಜನರಲ್ ವಾಸಕ್ಕಾಗಿ ಈ ಕಟ್ಟಡ ನಿರ್ವಿುಸಲಾಯಿತು. 1912ರಲ್ಲಿ ಕಟ್ಟಡ ನಿರ್ಮಾಣ ಆರಂಭಿಸಿ 1929ರಲ್ಲಿ ಪೂರ್ಣಗೊಳಿಸಲಾಯಿತು. 1931ರಲ್ಲಿ ಉದ್ಘಾಟಿಸಲಾಯಿತು.
ದ್ರೌಪದಿ ಮುಮು:ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುಮು ಒಡಿಶಾದ ಬುಡಕಟ್ಟು ಜನಾಂಗಕ್ಕೆ ಸೇರಿದವರು (ಜನನ 1958ರ ಜೂನ್ 20). ಕೆಲ ಕಾಲ ಶಿಕ್ಷಕಿಯಾಗಿದ್ದ ಅವರು 1997ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2004ರಲ್ಲಿ ರಾಯರಂಗಪುರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿ, ಮಂತ್ರಿ ಸ್ಥಾನ ಪಡೆದುಕೊಂಡರು. 2015 ರಿಂದ 2021 ರವರೆಗೆ ಜಾರ್ಖಂಡ್​ನ ಒಂಬತ್ತನೇ ರಾಜ್ಯಪಾಲರಾಗಿದ್ದರು. ಈ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರಥಮ ರಾಷ್ಟ್ರಪತಿಯಾಗಲಿದ್ದಾರೆ.
ಯಶವಂತ ಸಿನ್ಹಾ:ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ ಸಿನ್ಹಾ (ಜನನ 1937ರ ನವೆಂಬರ್ 6) ಬಿಹಾರದ ಕಾಯಸ್ಥ ಸಮುದಾಯಕ್ಕೆ ಸೇರಿದವರು. 1960ರಲ್ಲಿ ಐಎಎಸ್ ಅಧಿಕಾರಿಯಾದ ಅವರು 24 ವರ್ಷ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. 1990-1991ರಲ್ಲಿ ಚಂದ್ರಶೇಖರ ಸರ್ಕಾರದಲ್ಲಿ ಹಾಗೂ 1998ರಿಂದ 2002ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2018ರಲ್ಲಿ ಬಿಜೆಪಿ ತೊರೆದು, 2021ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದರು.

ಮತಗಳ ಮೌಲ್ಯ ಎಷ್ಟು?:ಆಯಾ ರಾಜ್ಯಗಳ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಶಾಸಕರ ಮತಗಳ ಮೌಲ್ಯ ನಿರ್ಧರಿಸಲಾಗುತ್ತದೆ. ರಾಜ್ಯಗಳ ಜನಸಂಖ್ಯೆ ಪರಿಗಣಿಸಲು 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಉತ್ತರ ಪ್ರದೇಶದ ಶಾಸಕರ ಮತ ಮೌಲ್ಯವು ಗರಿಷ್ಠ (ತಲಾ 208) ಆಗಿದ್ದರೆ, ಸಿಕ್ಕಿಂ ಶಾಸಕರ ಮತ ಮೌಲ್ಯವು ಕನಿಷ್ಠ (ತಲಾ 7) ಆಗಿದೆ. ಉತ್ತರ ಪ್ರದೇಶದಲ್ಲಿ 208 ವಿಧಾನಸಭೆ ಸದಸ್ಯರಿದ್ದಾರೆ. ಹೀಗಾಗಿ ಈ ರಾಜ್ಯದ ಒಟ್ಟು ಶಾಸಕರ ಮತ ಮೌಲ್ಯವು 207 ಗಿ 403 = 83,824 ಆಗುತ್ತದೆ. ಸಿಕ್ಕಿಂನಲ್ಲಿ 32 ಶಾಸಕರಿದ್ದಾರೆ. ಈ ರಾಜ್ಯದ ಒಟ್ಟು ಶಾಸಕರ ಮತ ಮೌಲ್ಯವು 32 ಗಿ 7 = 224 ಆಗುತ್ತದೆ. ಈ ರೀತಿ ಎಲ್ಲ ರಾಜ್ಯಗಳ ವಿಧಾನಸಭೆ ಸದಸ್ಯರುಗಳ ಒಟ್ಟು ಮೌಲ್ಯವು 5.43 ಲಕ್ಷ ಆಗುತ್ತದೆ. ಇನ್ನು ಸಂಸದರ ಮತ ಮೌಲ್ಯದ ವಿಧಾನ ಬೇರೆ. 543 ಲೋಕಸಭೆ ಸದಸ್ಯರು ಹಾಗೂ 233 ರಾಜ್ಯಸಭೆ ಸದಸ್ಯರು ಸೇರಿ ಒಟ್ಟು 776 ಸಂಸದರು ಇದ್ದಾರೆ. ಹೀಗಾಗಿ, ಪ್ರತಿ ಸದಸ್ಯರ ಮತ ಮೌಲ್ಯ ಲೆಕ್ಕ ಹಾಕಲು 5.43 ಲಕ್ಷವನ್ನು 776ರಿಂದ ಭಾಗಿಸಬೇಕಾಗುತ್ತದೆ. ಆಗ 699.74 ಬರುತ್ತದೆ. ಇದನ್ನು ಪೂರ್ಣಾಂಕಕ್ಕೆ ತೆಗೆದುಕೊಂಡಾಗ, ಪ್ರತಿ ಸಂಸದರ ಮತ ಮೌಲ್ಯವು 700 ಆಗುತ್ತದೆ. ವಿಧಾನಸಭೆ ಹಾಗೂ ಸಂಸತ್ ಸದಸ್ಯರ ಒಟ್ಟು ಮತ ಮೌಲ್ಯವು 10.86 ಲಕ್ಷ ಆಗುತ್ತದೆ.
ಅರ್ಹತೆಗಳೇನು?: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಬಯಸುವವರಿರಬೇಕಾದ ಅರ್ಹತೆಗಳು:
ಮತ ಮೌಲ್ಯ ಲೆಕ್ಕಾಚಾರ:ರಾಜ್ಯದ ಒಟ್ಟು ಜನಸಂಖ್ಯೆಯನ್ನು (1971 ರ ಜನಗಣತಿಯ ಪ್ರಕಾರ) ವಿಧಾನಸಭೆಯ ಒಟ್ಟು ಚುನಾಯಿತ ಸ್ಥಾನಗಳ ಸಂಖ್ಯೆಯಿಂದ ಭಾಗಿಸಿ, ಮತ್ತೆ 1000ದಿಂದ ಭಾಗಿಸಿದಾಗ ಬರುವ ಮೊತ್ತವೇ ಆಯಾ ರಾಜ್ಯದ ವಿಧಾನಸಭೆ ಸದಸ್ಯರ ಮತ ಮೌಲ್ಯವಾಗುತ್ತದೆ. ಉದಾಹರಣೆಗೆ ಕರ್ನಾಟಕದ ಲೆಕ್ಕಾಚಾರವನ್ನೇ ತೆಗೆದುಕೊಳ್ಳಿ. 1971ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆ 2,92,99,014 ಇದೆ. ಇದಕ್ಕೆ ಒಟ್ಟು ಶಾಸಕರ ಸಂಖ್ಯೆ 224ರಿಂದ ಭಾಗಿಸಬೇಕು. ನಂತರ ಇದನ್ನು 1000ದಿಂದ ಭಾಗಿಸಬೇಕು. ಆಗ ಬರುವ ಮೊತ್ತ 130.79 ಆಗುತ್ತದೆ. ಇದನ್ನು ಪೂರ್ಣಾಂಕ ಮಾಡಿದಾಗ ಕರ್ನಾಟಕ ವಿಧಾನಸಭೆ ಸದಸ್ಯರ ಮತ ಮೌಲ್ಯ 131 ಆಗುತ್ತದೆ.

ಹೀಗೆ ನಡೆಯುತ್ತದೆ ಕೌಂಟಿಂಗ್:ಸಂಸದರು ಮತ್ತು ಶಾಸಕರ ರಹಸ್ಯ ಮತದಾನದ ಮೂಲಕ ರಾಷ್ಟ್ರಪತಿ ಚುನಾವಣೆ ಜರುಗುತ್ತದೆ. ಪ್ರಾಶಸ್ಱದ ಮತದಾನ (ಪ್ರಿಫರೆನ್ಶಿಯಲ್ ವೋಟಿಂಗ್) ಮೂಲಕ ಈ ಆಯ್ಕೆ ನಡೆಯುತ್ತದೆ. ಉದಾಹರಣೆಗೆ – ಚುನಾವಣಾ ಕಣದಲ್ಲಿ 7 ಅಭ್ಯರ್ಥಿಗಳಿದ್ದರೆ, ಮತದಾರರು ತಮ್ಮ ಪ್ರಾಶಸ್ಱದ ಕ್ರಮದಲ್ಲಿ 1ರಿಂದ 7 ಸಂಖ್ಯೆಯವರೆಗೆ ಮತ ನೀಡಬಹುದಾಗಿದೆ. ಮೊದಲ ಪ್ರಾಶಸ್ಱದ ಮತ ನೀಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ಆ ಮತವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ವಿಜೇತರನ್ನು ನಿರ್ಧರಿಸಲು, ಮಾನ್ಯವಾದ ಮತಗಳ ಒಟ್ಟು ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮತಗಳು ಬೇಕು. 5 ಲಕ್ಷ ಮಾನ್ಯ ಮತಗಳಿವೆ ಎಂದು ಭಾವಿಸಿದರೆ, ವಿಜೇತರಾಗಲು ಕನಿಷ್ಠ (5,00,000/2) +1 = 2,50,001 ಮತಗಳು ಬೇಕಾಗುತ್ತವೆ. ಯಾರೊಬ್ಬರೂ ಪ್ರಥಮ ಪ್ರಾಶಸ್ಱದ ಸುತ್ತಿನಲ್ಲಿ ಈ ಕನಿಷ್ಠ ಮತಗಳನ್ನು ಪಡೆಯದಿದ್ದರೆ 2ನೇ ಸುತ್ತಿನ ಮತ ಎಣಿಕೆ ಮಾಡಲಾಗುತ್ತದೆ. ಆಗ, ಪ್ರಥಮ ಪ್ರಾಶಸ್ಱದ ಸುತ್ತಿನಲ್ಲಿ ಕನಿಷ್ಠ ಮತ ಗಳಿಸಿದ ಅಭ್ಯರ್ಥಿಯನ್ನು ಹೊರಹಾಕಲಾಗುತ್ತದೆ ಮತ್ತು ಅವರಿಗೆ ಚಲಾವಣೆಯಾಗಿರುವ ಪ್ರಥಮ ಪ್ರಾಶಸ್ಱದ ಮತಗಳ ಪೈಕಿ 2ನೇ ಪ್ರಾಶಸ್ಱ ಮತಗಳನ್ನು ಇತರರಿಗೆ ವರ್ಗಾಯಿಸಲಾ ಗುತ್ತದೆ. ಹೀಗೆ, ಅರ್ಧಕ್ಕಿಂತ ಹೆಚ್ಚು ಮತಗಳನ್ನು ಒಬ್ಬ ಅಭ್ಯರ್ಥಿ ಪಡೆಯುವವರೆಗೆ ಮತ ಎಣಿಕೆ ಮುಂದುವರಿಯುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
