ಉತ್ತರ ಪ್ರದೇಶ:ಬಸ್ಸಿನಲ್ಲಿ ನಿಗದಿದ ಮೊತ್ತ ನೀಡಿ, ಟಿಕೆಟ್ ಪಡೆದು ಸಂಚರಿಸುವುದು ನಿಯಮ. ಪ್ರತಿಯೊಬ್ಬ ಪ್ರಯಾಣಿಕನೂ ಟಿಕೆಟ್ ಖರೀದಿಸಿಯೇ ಪ್ರಯಾಣಿಸುತ್ತಾನೆ. ಇಲ್ಲವಾದ್ರೆ ಕಂಡೆಕ್ಟರ್ ಬಸ್​ನಿಂದ ಇಳಿಯುವಂತೆ ಸೂಚಿಸುತ್ತಾನೆ. ಒಂದು ವೇಳೆ ಟಿಕೆಟ್ ರಹಿತ ಪ್ರಯಾಣ ಮಾಡಿದರೆ ದಂಡವನ್ನೂ ಕಟ್ಟಬೇಕಾಗುತ್ತದೆ.
ಆದರೆ ಇಲ್ಲೊಬ್ಬರು ಹಿರಿಯ ಪೊಲೀಸ್ ಅಧಿಕಾರಿ ತನ್ನ ಪ್ರಭಾವ ಬಳಸಿ, ಟಿಕೆಟ್ ಖರೀದಿಸದೆ ಪ್ರಯಾಣಿಸಿದ್ದಾರೆ. ದಾರಿ ಮಧ್ಯೆ ಸಹಪ್ರಯಾಣಿಕರು ಪೊಲೀಸ್ ಅಧಿಕಾರಿಯನ್ನು ಟಿಕೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಪ್ರಯಾಣಿಕರೊಬ್ಬರು ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಉನ್ನಾವೊ ಸಾರಿಗೆ ಇಲಾಖೆಯ ಬಸ್ಸಿನಲ್ಲಿ ಪೊಲೀಸ್ ಇನ್ಸ್​​ಪೆಕ್ಟರ್ ಜಿತೇಂದ್ರ ಸಿಂಗ್ ಅವರನ್ನು ಪ್ರಯಾಣಿಕರು ಪ್ರಶ್ನಿಸಿ, ನಿಮ್ಮ ಟಿಕೆಟ್ ಎಲ್ಲಿ ಎಂದು ಕೇಳಿದ್ದಾರೆ. ಈ ವೇಳೆ ಇನ್ಸ್​ಪೆಕ್ಟರ್ ನೀವು ದರೋಡೆಯಾಗುವುದನ್ನು ನಿಲ್ಲಿಸಿ ಮತ್ತು ನಿಮ್ಮ ವ್ಯವಹಾರವನ್ನು ನೋಡಿಕೊಳ್ಳಿ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ. ನಂತರ ನಾನು ಪ್ರಯಾಣಿಸುತ್ತಿರುವ ಜಾಗ ಇಲ್ಲೇ ಹತ್ತಿರದಲ್ಲಿದೆ. ಹೀಗಾಗಿ ಟಿಕೆಟ್ ಖರೀದಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
दरोगा जी बिना टिकट लिए वर्दी का धौंस दिखा सफर करना चाहते थे. पब्लिक ने सबक सिखा दिया. देखिए वायरल विडियो|pic.twitter.com/ouTYS46rB1— Priya singh (@priyarajputlive)November 30, 2022
दरोगा जी बिना टिकट लिए वर्दी का धौंस दिखा सफर करना चाहते थे. पब्लिक ने सबक सिखा दिया. देखिए वायरल विडियो|pic.twitter.com/ouTYS46rB1
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ಸ್​ಪೆಕ್ಟರ್ ಜಿತೇಂದ್ರ ಸಿಂಗ್​ ವರ್ತನೆಯ ಬಗ್ಗೆ ಹಿರಿಯ ಅಧಿಕಾರಿಗಳು ವರದಿ ಕೇಳಿದ್ದು, ರಾಯ್ ಬರೇಲಿ ಹಾಗೂ ಉನ್ನಾವೋ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋ ನೋಡಿದ ಅನೇಕರು ಇನ್ಸ್​ಪೆಕ್ಟರ್​​​ ಜಿತೇಂದ್ರ ಸಿಂಗ್ ವರ್ತನೆಯನ್ನು ಖಂಡಿಸಿದ್ದಾರೆ. ಕಷ್ಟದಲ್ಲಿರುವ ಸಾಮಾನ್ಯ ಜನರು ಕೂಡಾ ಟಿಕೆಟ್ ಪಪಡೆದು ಸಂಚರಿಸುತ್ತಾರೆ. ಆದರೆ ಸರ್ಕಾರಿ ನೌಕರಿಯಲ್ಲಿರುವ ನಿಮಗೆ ಟಿಕೆಟ್ ಖರೀದಿಸಲು ಉಡಾಫೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಸಹಪ್ರಯಾಣಿಕರು ಧೈರ್ಯದಿಂದ ಪ್ರಶ್ನಿಸಿದ್ದು ಸ್ವಾಗತಾರ್ಹ ಎಂದು ಕಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
