ನವದೆಹಲಿ:ಭಾರತದಲ್ಲಿ ಕರೊನಾ ಹೆಮ್ಮಾರಿಯ ಆರ್ಭಟ ಹೆಚ್ಚಿಸುತ್ತಿದ್ದು, ಸೋಂಕಿತರು ಹಾಗೂ ಮೃತರ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ಜಾಗತಿಕವಾಗಿ ಕರೊನಾ ತೀವ್ರತೆಗೆ ನಲುಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾವನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೇರಿದೆ. ಪ್ರತಿ ದಿನ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುವ ಮೊದಲ ಮೂರು ದೇಶಗಳ ಸ್ಥಾನಗಳಲ್ಲೂ ಅಮೆರಿಕ, ಬ್ರೆಜಿಲ್ ಮತ್ತು ಭಾರತ ಇವೆ.
ಅಮೆರಿಕದಲ್ಲಿ ಶನಿವಾರ 45 ಸಾವಿರ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬ್ರೆಜಿಲ್​ನಲ್ಲಿ 35 ಸಾವಿರ ಹಾಗೂ ಭಾರತದಲ್ಲಿ 24 ಸಾವಿರ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಕಳೆದ 24 ತಾಸಿನಲ್ಲಿ 22 ಸಾವಿರ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 6.94 ಲಕ್ಷಕ್ಕೆ ಏರಿಕೆ ಯಾಗಿದೆ. ಜತೆಗೆ 410 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 19,600ಕ್ಕೇರಿದೆ. ಆದಾಗ್ಯೂ ಭಾರತದಲ್ಲಿ ಗುಣಮುಖರ ಪ್ರಮಾಣ ಹೆಚ್ಚಿರುವುದರಿಂದ ಸೋಂಕಿತರು ಹೆಚ್ಚಾದರೂ ತೀವ್ರ ಆತಂಕ ಎದುರಾಗಿಲ್ಲ. ದೇಶದಲ್ಲಿ ಕರೊನಾ ರೋಗಿಗಳ ಗುಣಮುಖ ಪ್ರಮಾಣ ಶೇಕಡಾ 60.80 ಇದ್ದು, ಈವರೆಗೆ 4.18 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಇನ್ನೂ 2.49 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಸರ್ಕಾರ ತಿಳಿಸಿದೆ.
ಒಂದೇ ದಿನ ಗರಿಷ್ಠ ಸೋಂಕು, ಸಾವು:ಭಾರತದಲ್ಲಿ ಶನಿವಾರ ಒಂದೇ ದಿನ 24,018 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, 611 ಮಂದಿ ಸಾವನ್ನಪ್ಪಿದ್ದಾರೆ. ಇದು ಈವರೆಗೆ ಪ್ರತಿದಿನ ದಾಖಲಾದ ಅತಿ ಗರಿಷ್ಠ ಸೋಂಕು ಮತ್ತು ಸಾವಿನ ಪ್ರಕರಣಗಳಾಗಿವೆ.
ದೆಹಲಿಯಲ್ಲಿ ಅತಿ ದೊಡ್ಡ ಚಿಕಿತ್ಸಾ ಕೇಂದ್ರ:ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ದೆಹಲಿಯ ಛತ್ರಪುರದ ರಾಧಾ ಸತ್ಯಂಗ್ ಬಿಯಾಸ್ ಕ್ಯಾಂಪಸ್​ನಲ್ಲಿ ನಿರ್ವಿುಸಲಾಗಿರುವ 10 ಸಾವಿರ ಹಾಸಿಗೆಗಳ ವ್ಯವಸ್ಥೆ ಇರುವ ಸರ್ದಾರ್ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆ (ಎಸ್​ಪಿಸಿಸಿಎಚ್) ಭಾನುವಾರದಿಂದ ರೋಗಿಗಳ ಸೇವೆಗೆ ಮುಕ್ತವಾಗಿದೆ. ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ದಕ್ಷಿಣ ದೆಹಲಿ ಜಿಲ್ಲಾಡಳಿತ ಕೇವಲ 10 ದಿನಗಳಲ್ಲಿ ಈ ಆಸ್ಪತ್ರೆ ನಿರ್ವಿುಸಿದ್ದು, ಇಲ್ಲಿ ಲಕ್ಷಣ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಒತ್ತಡ ರಹಿತ ಮತ್ತು ಶಾಂತಿಯುತ ಪ್ರತ್ಯೇಕ ಸೌಲಭ್ಯ ಒದಗಿಸುವ ಸಲುವಾಗಿ ಈ ಐಸೋಲೇಷನ್ ವ್ಯವಸ್ಥೆ ನಿರ್ವಿುಸಲಾಗಿದ್ದು, ದೀನ ದಯಾಳ ಉಪಾಧ್ಯಾಯ (ಡಿಡಿಯು) ಆಸ್ಪತ್ರೆ ಮತ್ತು ಮದನ ಮೋಹನ ಮಾಳವಿಯಾ ಆಸ್ಪತ್ರೆ, ಲೋಕನಾಯಕ ನಾರಾಯಣ್ ಜೈ ಪ್ರಕಾಶ್ (ಎಲ್​ಎನ್​ಜೆಪಿ) ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಇದನ್ನು ಸಂರ್ಪಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − sixteen =
Remember me
