ಜಿನೇವಾ: ಕರೊನಾ ಕೋವಿಡ್ 19 ವೈರಸ್ ಸೋಂಕಿನ ಪ್ರಮಾಣ ಭಾರತದಲ್ಲಿ ಇನ್ನೂ ಸಮುದಾಯ ಸೋಂಕಿನ ಮಟ್ಟಕ್ಕೆ ತಲುಪಿಲ್ಲ. ಇತರೆ ಸಣ್ಣ ದೇಶಗಳಿಗೆ ಹೋಲಿಸಿ ನೋಡುವಾಗ ಭಾರತದಲ್ಲಿನ ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಬಹಳ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಬ್ಲ್ಯುಎಚ್​ಒ ಎಕ್ಸಿಕ್ಯೂಟಿವ್ ಡೈರೆಕ್ಟರ್​ ಡಾ.ಮೈಕೆಲ್ ರಿಯಾನ್​, ಭಾರತ ಒಂದು ದೊಡ್ಡ ದೇಶ. ಅಲ್ಲಿನ ಮಟ್ಟಿಗೆ ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಸೋಂಕು ತಗುಲುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಇದೇ ವೇಳೆ ಜಗತ್ತಿನ ಇತರೆ ಸಣ್ಣಪುಟ್ಟ ದೇಶಗಳನ್ನು ತೆಗೆದುಕೊಂಡು ಲಕ್ಷ ಜನಸಂಖ್ಯೆಗೆ ಸೋಂಕಿತ ಪ್ರಮಾಣ ಹೋಲಿಸಿದರೆ ಹೆಚ್ಚಿದೆ. ಹೀಗಾಗಿ ಭಾರತದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಬಹಳ ಕಡಿಮೆ ಇದೆ. ರಾಜ್ಯಗಳ ಮತ್ತು ಉಪರಾಷ್ಟ್ರೀಯ ಮಟ್ಟದ ಡೇಟಾವನ್ನು ವಿಶ್ಲೇಷಿಸಿದರೆ ಇದು ಇನ್ನೂ ಸ್ಪಷ್ಟವಾಗುತ್ತ ಹೋಗುತ್ತದೆ. ಭಾರತದಲ್ಲಿ ಡೇಟಾವನ್ನು ಉಪರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಕೆಟಗರಿ ಮಾಡಿದ್ದಾರೆ ಎಂಬ ನಿಖರ ಮಾಹಿತಿ ನನಗಿಲ್ಲ. ಅವುಗಳನ್ನು ವಿಶ್ಲೇಷಿಸಿ ನಂತರದಲ್ಲಿ ಈ ಬಗ್ಗೆ ವಿವರ ತಿಳಿಸುತ್ತೇವೆ ಎಂದು ರಿಯಾನ್ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ?:ಸುದ್ದಿ ಸಮಗ್ರ: ದೆಹಲಿ ಕಂಪನ ಜನರಲ್ಲಿ ನಡುಕ
ಡಬ್ಲ್ಯುಎಚ್​ಒದ ಹಿರಿಯ ಎಪಿಡೆಮಿಯಾಲಜಿಸ್ಟ್ ಡಾ. ಮರಿಯಾ ವಾನ್ ಕೆರ್ಖೋವೆ ಈ ಬಗ್ಗೆ ಮಾತನಾಡುತ್ತ, ರಾಷ್ಟ್ರಮಟ್ಟದಲ್ಲಿ ಒಂದು ದೇಶವನ್ನು ವರ್ಗೀಕರಿಸಬಹುದು. ಆದರೆ ಈ ಕೆಲಸ ಆಗಬೇಕಾಗಿರುವುದು ಕೆಳಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಎಂಬುದು ಮುಖ್ಯವಾದುದು. ಯಾಕೆಂದರೆ ಅಲ್ಲಿ ಎಲ್ಲೆಲ್ಲಿ ನಿಮ್ಮ ಅಗತ್ಯವಿದೆಯೋ ಅಲ್ಲಿ ನೀವುಯ ಮಧ್ಯಪ್ರವೇಶಿಸಿ ಸೂಕ್ತ ಕ್ರಮಗಳನ್ನು ನಿರ್ದೇಶಿಸುವುದು ಸಾಧ್ಯವಿದೆ. ಮಧ್ಯಪ್ರವೇಶಿಸುವುದಕ್ಕಿಂತಲೂ ಹೆಚ್ಚಾಗಿ ಸೋಂಕು ಹರಡದಂತೆ ತಡೆಯುವುದಕ್ಕೆ ಅಗತ್ಯವಾದ ಮಧ್ಯಪ್ರವೇಶದ ಕ್ರಮಗಳನ್ನು ಹೆಚ್ಚಿಸವುದು ಅತೀಅಗತ್ಯ. ದೇಶದ ಎಲ್ಲ ಭಾಗಗಳಲ್ಲೂ ವೈರಸ್ ಒಂದೇ ರೀತಿ ವರ್ತಿಸುವುದಿಲ್ಲ. ಹಲವು ಕಡೆ ಹಾಟ್​ಸ್ಪಾಟ್​​ಗಳಿರುವುದನ್ನು ಗಮನಿಸಿರಬಹುದು. ಇನ್ನೂ ಅನೇಕ ರಾಷ್ಟ್ರಗಳಲ್ಲಿ ಸೂಪರ್ ಸ್ಪ್ರೆಡಿಂಗ್​ ಘಟನೆಗಳನ್ನೂ ಅದಕ್ಕೆ ಕಾರಣವಾಗುವ ಕಾರ್ಯಕ್ರಮಗಳನ್ನೂ ಕಾಣಬಹುದು. ಅತ್ಯಂತ ಕೆಳಮಟ್ಟದಲ್ಲಿ ಸೋಂಕು ಹರಡದಂತೆ ತಡೆಯುವ ಬಗೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಆ ಹಂತದಲ್ಲಿ ಈ ಸರಪಣಿಯನ್ನು ಮುರಿಯಲು ಸಾಧ್ಯವಿದೆ ಎಂದು ವಿವರಿಸಿದರು.
ಜೂನ್​ 6ರಂದು ಡಬ್ಲ್ಯುಎಚ್​ಒ ಪ್ರಕಟಿಸಿದ ಕರೊನಾ ವೈರಸ್ ಸ್ಥಿತಿಗತಿ ವರದಿ 137ರಲ್ಲಿ ಭಾರತವನ್ನು ಕ್ಲಸ್ಟರ್ ಆಫ್ ಕೆಟಗರಿಯಲ್ಲೂ ಪಕ್ಕದ ಬಾಂಗ್ಲಾದೇಶವನ್ನು ಕಮ್ಯೂನಿಟಿ ಟ್ರಾನ್ಸ್​ಮಿಷನ್ ಕೆಟಗರಿಯಲ್ಲೂ ಇರಿಸಲಾಗಿತ್ತು. ಭಾರತದಲ್ಲಿ ದಿನೇದಿನೆ ಕೇಸ್​ಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತ ಹೋಗುತ್ತಿದೆ. ಈಗ ದಿನವೊಂದರ 10,000 ಆಸುಪಾಸಿನಲ್ಲಿ ಕೇಸ್​ಗಳ ಪತ್ತೆ ನಡೆದಿದೆ. ಪರಿಣಾಮ ಒಟ್ಟು ಕೇಸ್​ಗಳ ಸಂಖ್ಯೆ 2.5 ಲಕ್ಷ ಸಮೀಪಿಸಿದ್ದು, ಸಾವಿನ ಸಂಖ್ಯೆ 7,000ದ ಆಸುಪಾಸಿನಲ್ಲಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಮಟ್ಟದ ಸೋಂಕು ಇದ್ದು, ಚೀನಾದಲ್ಲಿನ ಸೋಂಕು ಪ್ರಮಾಣವನ್ನು ಮೀರಿ ಮುನ್ನಡೆದಿದೆ. (ಏಜೆನ್ಸೀಸ್)
71 ಲಕ್ಷ ದಾಟಿತು ಕೋವಿಡ್ 19 ಕೇಸ್​: 4 ಲಕ್ಷ ದಾಟಿತು ಮರಣ ಪ್ರಮಾಣ..

Sign in to your account
Please enter an answer in digits:four × three =
Remember me
