ನವದೆಹಲಿ:ತಾಪಮಾನ ಏರಿಕೆ ವಿರುದ್ಧ ಸಣ್ಣಪುಟ್ಟ ಹೋರಾಟಗಳನ್ನು ನಡೆಸಿದರೆ ಸಾಲದು. ಸಮಗ್ರವಾದ ಸಮರ ನಡೆಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದ್ದಾರೆ. ಅಭಿವೃದ್ಧಿಶೀಲ ದೇಶಗಳಿಗೆ ಹೆಚ್ಚಿನ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲ ನೀಡಿದರಷ್ಟೆ ಇಡೀ ಜಗತ್ತು ವೇಗವಾಗಿ ಪ್ರಗತಿ ಸಾಧಿಸಬಲ್ಲದು ಎಂದು ಜಿ-20 ದೇಶಗಳ ಶೃಂಗಸಭೆಯ ಭಾಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಹೇಳಿದರು.
ಭಾರತ ಪ್ಯಾರಿಸ್ ಒಡಂಬಡಿಕೆಯ ಎಲ್ಲ ಉದ್ದೇಶಗಳನ್ನು ಗುರಿ ಮೀರಿ ಸಾಧಿಸುತ್ತಿದೆ ಎಂದರು. ‘ಸೇಫ್​ಗಾರ್ಡಿಂಗ್ ದ ಪ್ಲಾನೆಟ್: ದ ಸರ್ಕ್ಯುಲರ್ ಕಾರ್ಬನ್ ಇಕಾನಮಿ ಅಪ್ರೋಚ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರದೊಂದಿಗೆ ಸೌಹಾರ್ದದಿಂದ ಬದುಕುವ ಭಾರತೀಯ ಪರಂಪರೆಯ ಮೌಲ್ಯದಿಂದ ಪ್ರೇರಿತವಾಗಿ ಹಾಗೂ ಬದ್ಧತೆಗೆ ಅನುಗುಣವಾಗಿ ಭಾರತವು ಕಡಿಮೆ ಮಟ್ಟದ ಇಂಗಾಲ ಹಾಗೂ ಹವಾಮಾನ ಸ್ನೇಹಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಸರಿಸುತ್ತಿದೆ ಎಂದು ವಿವರಿಸಿದರು.
‘ಮನುಕುಲ ಸಮೃದ್ಧವಾಗಬೇಕಾದರೆ ಪ್ರತಿ ವ್ಯಕ್ತಿ ಸಮೃದ್ಧರಾಗಬೇಕು. ಶ್ರಮವನ್ನು ಉತ್ಪಾದನೆಯ ಅಂಶವಾಗಿ ಮಾತ್ರ ನೋಡಬಾರದು. ಪ್ರತಿ ಕಾರ್ವಿುಕರ ಮಾನವ ಘನತೆ ಬಗ್ಗೆ ಗಮನ ಹರಿಸುವುದು ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು. ಕೋವಿಡ್-19 ಜಾಗತಿಕ ಸಾಂಕ್ರಾಮಿಕತೆಯಿಂದ ಪ್ರಜೆಗಳು ಮತ್ತು ಆರ್ಥಿಕತೆ ರಕ್ಷಿಸಲು ಗಮನ ಹರಿಸಲಾಗುತ್ತಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + two =
Remember me
