ನವದೆಹಲಿ:ಭಾರತದಲ್ಲಿ ಕರೊನಾ ಸಾಂಕ್ರಾಮಿಕತೆಯಿಂದ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವುದಕ್ಕಿಂತ ಹೆಚ್ಚುವರಿಯಾಗಿ 47 ಲಕ್ಷ ಜನರು ಮರಣಿಸಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳಿರುವುದು ಅಸಂಬದ್ಧ ಹಾಗೂ ಅಸಮರ್ಥನೀಯ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಶುಕ್ರವಾರದವರೆಗೆ ದೇಶದಲ್ಲಿ 5,20,000 ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ. ಡಬ್ಲ್ಯುಎಚ್​ಒ ವರದಿ ತೀರಾ ಚಿಂತೆಗೀಡು ಮಾಡುವಂಥದ್ದಾಗಿದೆ ಎಂದು ಭಾರತದ ಕೋವಿಡ್​ ಕಾರ್ಯ ತಂಡದ (ಸಿಡಬ್ಲ್ಯುಜಿ) ಮುಖ್ಯಸ್ಥ ಎನ್​.ಕೆ. ಅರೋರಾ ಹೇಳಿದ್ದಾರೆ. ಅಂಕಿಸಂಖ್ಯೆಯಲ್ಲಿ ಶೇಕಡ 10ರಿಂದ 20ರಷ್ಟು ವ್ಯತ್ಯಾಸ ಇದ್ದೀತು. ಆದರೆ ಭಾರತದಲ್ಲಿ ಅನುಸರಿಸಲಾಗುತ್ತಿರುವ ದೃಢ ಹಾಗೂ ನಿಖರ ಜನನ&ಮರಣ ನೋಂದಣಿ ವ್ಯವಸ್ಥೆಯು ಕರೊನಾ ವೈರಸ್​ ಸಂಬಂಧಿತ ಸಾವುಗಳನ್ನು ಬಹುತೇಕವಾಗಿ ಕವರ್​ ಮಾಡಿದೆ ಎಂದು ಹೇಳಿರುವ ಅರೋರಾ, ಡಬ್ಲ್ಯುಎಚ್​ಒಗೆ ತಿರುಗೇಟು ನೀಡಿದ್ದಾರೆ. ಭಾರತದ ಜನನ&ಮರಣ ನೋಂದಣಿ ವ್ಯವಸ್ಥೆಯನ್ನು ನಾಗರಿಕ ನೋಂದಣಿ ವ್ಯವಸ್ಥೆ (ಸಿವಿಲ್​ ರಿಜಿಸ್ಟ್ರೆಶನ್​ ಸಿಸ್ಟಂ& ಸಿಆರ್​ಎಸ್​) ಎಂದು ಕರೆಯುತ್ತಾರೆ.
ಡಬ್ಲ್ಯುಎಚ್​ಒ ಹೇಳಿದ್ದೇನು?2020 ಜನವರಿ ಮತ್ತು 2021 ಡಿಸೆಂಬರ್​ ನಡುವೆ ಭಾರತದಲ್ಲಿ 47 ಲಕ್ಷ ಹೆಚ್ಚುವರಿ ಕರೊನಾ ಸಾವು ಸಂಭವಿಸಿದೆ. ಇದು ಸರ್ಕಾರದ ಅಧಿಕೃತ ಮಾಹಿತಿಗಿಂತ ಹತ್ತು ಪಟ್ಟು ಹೆಚ್ಚು. ಭಾರತದ ಕೋವಿಡ್​ ಸಾವು, ಸಾಂಕ್ರಾಮಿಕತೆಯಿಂದ ಜಗತ್ತಿನಾದ್ಯಂತ ಬಲಿಯಾದವರ ಒಟ್ಟು ಸಂಖ್ಯೆಯ ಮೂರನೇ ಒಂದರಷ್ಟಾಗುತ್ತದೆ ಎಂದು ಡಬ್ಲ್ಯುಎಚ್​ಒ ಮಹಾ ನಿರ್ದೇಶಕ ಟೆಡ್ರೋಸ್​ ಅಧಾನಂ ಘೇಬ್ರಿಯೆಸಸ್​ ಗುರುವಾರ ಹೇಳಿದ್ದರು. ಜಗತ್ತಿನಾದ್ಯಂತ ಕೋವಿಡ್​ಗೆ ಬಲಿಯಾದವರ ಸಂಖ್ಯೆ ಅಧಿಕೃತವಾಗಿ ಪ್ರಕಟಿಸಲಾದ 60 ಲಕ್ಷಕ್ಕೆ ಬದಲು 1.50 ಕೋಟಿ ಆಗಿದೆ ಎಂದೂ ಅಧಾನಂ ಹೇಳಿದ್ದರು.
ಸರ್ಕಾರದ ವಿವರಣೆ2018ರಲ್ಲಿ ಸುಮಾರು ಶೇಕಡ 85&88ರಷ್ಟು ಸಾವುಗಳನ್ನು ಕವರ್​ ಮಾಡಲಾಗಿದೆ. 2020ರಲ್ಲಿ ಅದು ಶೇ. 98&99 ಆಗಿತ್ತು. 2018 ಮತ್ತು 2019ರಲ್ಲಿ ಹೆಚ್ಚುವರಿಯಾಗಿ ಏಳು ಲಕ್ಷ ಸಾವುಗಳು ಸಂಭವಿಸಿವೆ. ಅವೆಲ್ಲವೂ ಕೋವಿಡ್​ ಸಾವುಗಳು ಎಂದು ನಾವೇನಾದರೂ ಹೇಳಿದ್ದೇವೆಯೇ ಎಂಬುದು ಸರ್ಕಾರದ ಪ್ರಶ್ನೆ. ಹೆಚ್ಚುವರಿ 4.6 ಲಕ್ಷದಲ್ಲಿ 1.45 ಲಕ್ಷ ಸಾವುಗಳು ವರದಿಯಾಗಿರುವ ಸಾವುಗಳಾಗಿವೆ. ಮೂರು ಲಕ್ಷ ಸಾವುಗಳು ಇತರ ಕಾರಣಗಳಿಂದ ಸಂಭವಿಸಿದ್ದಾಗಿವೆ. ಒಂದು ವೇಳೆ ನಾವು 4 ಲಕ್ಷ ಮರಣಗಳು ಹೆಚ್ಚುವರಿ ಎಂದು ಹೇಳಿದರೂ ಅದು ಡಬ್ಲ್ಯುಎಚ್​ಒದ ಅಂದಾಜಿಗೆ ಸರಿ ಹೊಂದುವುದಿಲ್ಲ ಎಂದು ಅರೋರಾ ವಿವರಿಸಿದ್ದಾರೆ.
ಡೇಟಾ ಹಾಗೂ ಬೇಟಾರಾಹುಲ್​ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿ ರುವ ಬಿಜೆಪಿ ವಕ್ತಾರ ಸಂಬಿತ್​ ಮಹಾಪಾತ್ರ, “ಡಬ್ಲ್ಯು ಎಚ್​ಒ ಡೇಟಾ ಹಾಗೂ ಕಾಂಗ್ರೆಸ್​ “ಬೇಟಾ’ ಇಬ್ಬರೂ ತಪು$್ಪ’ ಎಂದು ವರ್ಣಿಸಿದ್ದಾರೆ.
ವಿಜ್ಞಾನ ಸುಳ್ಳು ಹೇಳದುಭಾರತದಲ್ಲಿ 47 ಲಕ್ಷ ಹೆಚ್ಚುವರಿ ಕೋವಿಡ್​ ಮರಣ ಸಂಭವಿಸಿದೆ ಎಂಬ ಡಬ್ಲ್ಯುಎಚ್​ಒ ಹೇಳಿಕೆಗೆ ಪೂರಕವಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾದ ಮಾಡಿದ್ದಾರೆ. “ವಿಜ್ಞಾನ ಸುಳ್ಳು ಹೇಳುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಸುಳ್ಳಾಡುತ್ತಾರೆ’ ಎಂದು ಎಂದು ಟ್ವೀಟ್​ ಮಾಡಿದ್ದಾರೆ. ಕೋವಿಡ್​ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಿ ಸಂತ್ರಸ್ತ ನೆರವಿಗೆ ಧಾವಿಸುವಂತೆಯೂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೂಸ್ಟರ್​ ಡೋಸ್​ ಬೇಗನೆ ಪಡೆಯಲು ಅನುಮತಿವಿದೇಶಗಳಿಗೆ ತೆರಳುವ ಭಾರತೀಯರು ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಲಸಿಕೆಯ ಮುನ್ನೆಚ್ಚರಿಕೆ ಡೋಸ್​ಅನ್ನು ಈಗಿರುವ ನಿಯಮವಾದ ಒಂಬತ್ತು ತಿಂಗಳಿಗಿಂತ ಮುಂಚೆಯೇ ಪಡೆಯಲು ಲಸಿಕೆ ಕುರಿತ ರಾಷ್ಟ್ರೀಯ ಸಲಹಾ ಗುಂಪು (ಎನ್​ಟಿಎಜಿಐ) ಅನುಮತಿ ನೀಡಿದೆ. ಆದರೆ, ಒಟ್ಟಾರೆಯಾಗಿ ಎರಡನೇ ಹಾಗೂ ಬೂಸ್ಟರ್​ ಡೋಸ್​ ನಡುವಿನ ಅಂತರವನ್ನು ಒಂಬತ್ತು ತಿಂಗಳಿಂದ ಕಡಿಮೆ ಮಾಡಲು ಅದು ಶಿಾರಸು ಮಾಡಿಲ್ಲ. ಆರು ತಿಂಗಳಿಗೆ ಇಳಿಸುವ ಸಲಹೆ ಸರ್ಕಾರದ ಮುಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
