ನವದೆಹಲಿ:ಪ್ರಸ್ತುತ ಮೊಬೈಲ್ ತಯಾರಿಕೆಯಲ್ಲಿ ಭಾರತವು ವಿಶ್ವದಲ್ಲೇ ಪ್ರಾಬಲ್ಯ ಸಾಧಿಸುತ್ತಿದೆ. ದೇಶವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಮೂಲಸೌಕರ್ಯ, ಅನೂಕೂಲಕ ಸರ್ಕಾರಿ ನೀತಿ ಮತ್ತು ಪ್ರತಿಭಾವಂತ ನೌಕರರು ಇರುವುದರಿಂದ ಜಾಗತಿಕ ಕಂಪೆನಿಗಳನ್ನು ಭಾರತ ಆಕರ್ಷಿಸುತ್ತಿದೆ. ಅತಿದೊಡ್ಡ ಸ್ಮಾರ್ಟ್​ಫೋನ್ ಕಂಪೆನಿ ಆ್ಯಪಲ್ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುತ್ತಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪೆನಿ ನೊಯ್ಡಾದಲ್ಲಿ ಈಗಾಗಲೇ ಉತ್ಪಾದನಾ ಘಟಕ ತೆರೆದಿದೆ. ಈ ಮೂಲಕ ಮೊಬೈಲ್ ತಯಾರಿಕಾ ಕ್ಷೇತ್ರಕ್ಕೆ ಭಾರತ ಸೂಕ್ತ ತಾಣವಾಗಿ ಬದಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅರ್ಚಕನಿಂದ ಪ್ರೇಯಸಿ ಹತ್ಯೆ ಪ್ರಕರಣ | ಗೂಗಲ್​ನಲ್ಲಿ ಹುಡುಕಾಡಿ ಜೀವ ತೆಗೆಯುವುದು ಹೇಗೆಂದು ತಿಳಿದುಕೊಂಡ ಆರೋಪಿ!
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವು ತಂತ್ರಜ್ಞಾನದ ಮೇಲೆ ತನ್ನ ಹಿಡಿತ ಬಲಪಡಿಸಿದೆ. ಜತೆಗೆ ಮೊಬೈಲ್ ಕ್ಷೇತ್ರದಲ್ಲಿ 100 ಪ್ರತಿಶತ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಿದೆ. ಇದು ಹೂಡಿಕೆದಾರರಿಗೂ ಸಾಕಷ್ಟು ನೆರವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೇಕ್ ಇನ್ ಇಂಡಿಯಾ ಯೋಜನೆಯಡಿ ಆ್ಯಪಲ್ ಕಂಪೆನಿ ಭಾರತದ ಮೂರು ಕಡೆಗಳಲ್ಲಿ ಮೊಬೈಲ್ ಉತ್ಪಾದಿಸುತ್ತಿದೆ.
ಲಾವಾ ಕಂಪೆನಿ ದೇಶೀಯ ಮಾರುಕಟ್ಟೆಗೆ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊದಲ ಭಾರತೀಯ ಬ್ರಾಂಡ್ ಆಗಿದೆ. ಉತ್ತಮ ಮೂಲಸೌಕರ್ಯ ನೀಡಿರುವುದರಿಂದ ಕಂಪೆನಿಗಳಿಗೆ ಭಾರತದಲ್ಲಿ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 8 =
Remember me
