ತಿರುವನಂತಪುರ:ಜಗತ್ಪ್ರಸಿದ್ದ ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರದಿಂದ ಈ ಬಾರಿ ಪ್ರಸಾದವನ್ನು ಅಂಚೆ ಮೂಲಕ ತರಿಸಿಕೊಳ್ಳಬಹುದು. ಈ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಅಂಚೆ ಇಲಾಖೆ ನಡುವೆ ಒಪ್ಪಂದ ಏರ್ಪಟ್ಟಿದೆ. ಕೇರಳದಲ್ಲಿ ಆನ್​ಲೈನ್​ ಮೂಲಕ ಬುಕ್​ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉಳಿದಂತೆ ಅಂಚೆ ಕಚೇರಿಗೆ ತೆರಳಿ ಮುಂಗಡ ಹಣಪಾವತಿಸಿ ಸ್ವಾಮಿ ಪ್ರಸಾದಂ ತರಿಸಿಕೊಳ್ಳಬಹುದು.
ಅಂಚೆ ಇಲಾಖೆ ‘ಸ್ವಾಮಿ ಪ್ರಸಾದಂ’ ಕಿಟ್​ಗೆ 450 ರೂಪಾಯಿ ದರ ನಿಗದಿಪಡಿಸಿದೆ. ಈ ಕಿಟ್​ನಲ್ಲಿ ಅರವಣ ಪಾಯಸ, ತುಪ್ಪ, ಅರಶಿಣ, ಕುಂಕುಮ, ವಿಭೂತಿ ಮತ್ತು ಇತರೆ ಪ್ರಸಾದಗಳಿರುತ್ತವೆ. ಕಳೆದ ಶುಕ್ರವಾರದಿಂದ ಈ ಸೇವೆ ಶುರುವಾಗಿದೆ. 450 ರೂಪಾಯಿ ಪೈಕಿ 250 ರೂಪಾಯಿ ದೇವಸ್ವಂ ಮಂಡಳಿಗೆ ಪಾವತಿಯಾಗುತ್ತದೆ. ಉಳಿದ ಹಣ ಅಂಚೆ ಇಲಾಖೆಗೆ ಸೇರುತ್ತದೆ.
ಇದನ್ನೂ ಓದಿ:ಬಿಜೆಪಿ-ಮೆಹಬೂಬಾ ಮುಫ್ತಿ ಮೈತ್ರಿ ‘ಸೈದ್ಧಾಂತಿಕ’ ಲವ್​ ಜಿಹಾದಾ?: ಶಿವಸೇನೆ ಪ್ರಶ್ನೆ
ಪ್ರಸಾದವನ್ನು ದೇವಸ್ವಂ ಮಂಡಳಿ ಶಬರಿಮಲೆ ಸನ್ನಿದಾನದಿಂದ ಕೆಳಗೆ ಪಂಪಾ ನದಿ ತೀರಕ್ಕೆ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಅಲ್ಲಿಂದ ಭಕ್ತರಿಗೆ ಮೂರು ದಿನಗಳ ಒಳಗಾಗಿ ಪ್ರಸಾದ ತಲುಪಿಸುವ ಹೊಣೆಗಾರಿಕೆ ಅಂಚೆ ಇಲಾಖೆಯದ್ದು. ಸ್ಪೀಡ್ ಪೋಸ್ಟ್ ಮೂಲಕ ಸ್ವಾಮಿ ಪ್ರಸಾದಂ ಕಿಟ್ ಭಕ್ತರಿಗೆ ತಲುಪುತ್ತದೆ. ಒಂದೇ ರಿಸೀಟ್​ನಲ್ಲಿ 10 ಕಿಟ್​ ತನಕ ಆರ್ಡರ್ ಮಾಡುವುದಕ್ಕೆ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)https://www.indiapost.gov.in/VAS/Pages/Tenders/1730_06Nov20_2_HolyBlessinglinks.pdf
ಬಿಡುಗಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರಾಜೀವ್ ಗಾಂಧಿ ಹಂತಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
