ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರದ ಗೌರವ ವಿಚಾರದಲ್ಲಿ ಯಾವುದೇ ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಎನ್ನುವ ಮೂಲಕ ಚೀನಾಗೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನವದೆಹಲಿ ಶಾಂತಿಯನ್ನು ಬಯಸುತ್ತದೆ ಹೊರತು ಯಾವುದೇ ಘರ್ಷಣೆ ಬಯಸುವುದಿಲ್ಲ ಎಂದು ಶಾಂತಿ ಮಂತ್ರ ಜಪಿಸಿದರು.
ಹೈದರಾಬಾದ್​ನ ದುಂಡಿಗಲ್​ನಲ್ಲಿರುವ ಏರ್​ಫೋರ್ಸ್​ ಅಕಾಡೆಮಿಯ ಕಂಬೈನ್ಡ್​ ಗ್ರಾಜುಯೇಷನ್ ಪರೇಡ್​ ಉದ್ದೇಶಿಸಿ ರಾಜನಾಥ್​ ಸಿಂಗ್​ ಮಾತನಾಡಿದರು.
ಇದನ್ನೂ ಓದಿ:ಗ್ರಾ.ಪಂ ಚುನಾವಣೆಯಲ್ಲಿ ಪತಿ ವಿರುದ್ಧವೇ ಸ್ಪರ್ಧೆಗಿಳಿದ ಪತ್ನಿ: ದಂಪತಿ ಮಾತು ಕೇಳಿದ್ರೆ ಅಚ್ಚರಿ ಖಂಡಿತ!
ಯಾವುದೇ ಪರಿಸ್ಥಿತಿ ಇರಲಿ ಭಾರತ ಸರ್ವಸನ್ನದ್ಧವಾಗಿದೆ ಎಂದು ಸೇನಾ ಸಾಮರ್ಥ್ಯ ಸಾರಿದ ಸಚಿವರು, ಗಡಿಯಲ್ಲಿ ಪಾಕಿಸ್ತಾನ ಕ್ರಾಸ್​ ಬಾರ್ಡರ್​ ಟೆರರಿಸಂ ನಡೆಸುತ್ತಿದೆ. ನೇರವಾಗಿ ಎದರಿಸಲಾಗದೇ ಪ್ರಾಕ್ಸಿ ವಾರ್​ ಮೊರೆ ಹೋಗಿದೆ ಎಂದು ಪಾಕ್​ ವಿರುದ್ಧ ಕಿಡಿಕಾರಿದರು.
ಪಶ್ಚಿಮ ವಲಯದಲ್ಲಿ ಪಾಕಿಸ್ತಾನ ವಿಧ್ವಂಸಕ ಕೃತ್ಯಕ್ಕೆ ಕೈಹಾಕಿದೆ. ನಮ್ಮ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಮಣ್ಣು ಮುಕ್ಕಿದ್ದರೂ ಈಗಲೂ ಪ್ರಾಕ್ಸಿ ವಾರ್​ ಅಥವಾ ಮೋಸದ ಯುದ್ಧ ಮಾಡುತ್ತಲೇ ಇದೆ. ಪಾಕ್​ನ ಈ ಪ್ರಯತ್ನಗಳನ್ನು ಎಚ್ಚರಿಕೆಯಿಂದ ಎದುರಿಸುವ ನಮ್ಮ ಭದ್ರತಾ ಪಡೆಗಳನ್ನು ಸನ್ಮಾನಿಸಲು ನಾನು ಬಯಸುತ್ತೇನೆಂದರು.
ಇದನ್ನೂ ಓದಿ:ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!
ಉಲ್ಲಂಘನೆ, ಆಕ್ರಮಣಶೀಲತೆ ಮತ್ತು ಗಡಿಗಳಲ್ಲಿ ಯಾವುದೇ ಏಕಪಕ್ಷೀಯ ಕ್ರಮಕ್ಕೆ ಸೂಕ್ತ ಉತ್ತರ ನೀಡುವ ಮೂಲಕ ಭಾರತ ದುರ್ಬಲವಲ್ಲ ಎಂಬುದನ್ನು ನಾವು ತೋರಿಸಿದ್ದೇವೆಂದು ಯೋಧರನ್ನು ರಕ್ಷಣಾ ಸಚಿವರು ಹುರಿದುಂಬಿಸಿದರು.(ಏಜೆನ್ಸೀಸ್​)
ನೀವು ಕಾಂಗ್ರೆಸ್​ ಬಿಡೋದು ಯಾವಾಗ? ನಾನು ಕಾತರದಿಂದ ಕಾಯುತ್ತಿರುವೆ… ಎಂದ ಎಚ್​ಡಿಕೆ

ಬಿಗ್​ಬಾಸ್​ನಿಂದ ಹೊರಬಿದ್ದ ಬೆನ್ನಲ್ಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಮೊನಾಲ್​ ಗಜ್ಜರ್​..!

PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + four =
Remember me
