ಗುಜರಾತ್​:ಭಾರತದ ಅಕ್ಕಿ-ಗೋಧಿ ಮಾರುಕಟ್ಟೆಗಿಂತಲೂ ಹಾಲಿನ ಮಾರುಕಟ್ಟೆ ದೊಡ್ಡದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಗುಜರಾತ್​ನ ಕಲೋಲ್​ನಲ್ಲಿ ಇಫ್​ಕೊ ಸ್ಥಾಪಿಸಿರುವ ನ್ಯಾನೋ ಯೂರಿಯಾ (ಲಿಕ್ವಿಡ್​) ಪ್ಲಾಂಟ್​ ಉದ್ಘಾಟನೆ ಹಾಗೂ ಸಹಕಾರ್ ಸೆ ಸಮೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
2014ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನಾವು ಯೂರಿಯಾಗೆ ಶೇ. 100 ನೀಮ್ ಕೋಟಿಂಗ್ ಮಾಡುವಲ್ಲಿ ಯಶಸ್ವಿ ಆಗಿದ್ದೇವೆ. ಆ ಮೂಲಕ ರೈತರು ಸಾಕಷ್ಟು ಯೂರಿಯಾ ಪಡೆಯುವಂತಾಗಿದೆ. ಅದಕ್ಕೆಂದೇ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ತೆಲಂಗಾಣಗಳಲ್ಲಿನ ಸ್ಥಗಿತಗೊಂಡಿದ್ದ ಐದು ರಸಗೊಬ್ಬರ ಕಾರ್ಖಾನೆಗಳನ್ನು ಮರು ಆರಂಭಿಸಿದ್ದೇವೆ ಎಂದರು.
ಭಾರತ ಆಮದು ಮಾಡಿಕೊಳ್ಳುವ ಯೂರಿಯಾದ 50 ಕೆ.ಜಿ. ಚೀಲಕ್ಕೆ 3,500 ಕೋಟಿ ರೂ. ತಗುಲುತ್ತದೆ. ಆದರೆ ದೇಶದಲ್ಲಿ ಅದೇ ಯೂರಿಯಾ ಚೀಲವನ್ನು 300 ರೂ.ಗೆ ನೀಡಲಾಗುತ್ತಿದೆ. ಪ್ರತಿ ಚೀಲಕ್ಕೆ 3,200 ರೂ. ಸರ್ಕಾರವೇ ಭರಿಸುತ್ತಿದೆ. ಆ ಮೂಲಕ ರೈತರ ಸಂಕಷ್ಟವನ್ನು ದೂರ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು.
ಇನ್ನು ಸಹಕಾರಿ ಕ್ಷೇತ್ರದ ಕುರಿತು ಮಾತನಾಡಿದ ಪ್ರಧಾನಿ, ದೇಶದಲ್ಲಿ ದಿನಕ್ಕೆ 8 ಲಕ್ಷ ಕೋಟಿ ರೂ. ಮೌಲ್ಯದ ಹಾಲು ಉತ್ಪಾದಿಸಲಾಗುತ್ತಿದೆ. ಅಕ್ಕಿ-ಗೋಧಿ ಎರಡನ್ನೂ ಸೇರಿಸಿ ಲೆಕ್ಕ ಹಾಕಿದರೂ ಆ ಮಾರುಕಟ್ಟೆಗಿಂತ ಹಾಲಿನ ಮಾರುಕಟ್ಟೆಯೇ ದೊಡ್ಡದು. ಗುಜರಾತ್​ನಲ್ಲಿನ ಬಹಳಷ್ಟು ಹಳ್ಳಿಗಳು ಪ್ರಗತಿ ಕಂಡಿದ್ದರೆ ಅದಕ್ಕೆ ಹೈನುಗಾರಿಕೆ ಸಂಬಂಧಿತ ಸಹಕಾರ ಕ್ಷೇತ್ರವೇ ಕಾರಣ ಎಂದು ಮೋದಿ ಅಭಿಪ್ರಾಯಪಟ್ಟರು.
ಸ್ವಯಂಪ್ರೇರಿತ ವೇಶ್ಯಾವೃತ್ತಿ ಕಾನೂನುಬದ್ಧ ಎಂದ ಸುಪ್ರೀಂಕೋರ್ಟ್; ಪೊಲೀಸರು ಕೇಸ್​ ದಾಖಲಿಸುವಂತಿಲ್ಲ..

ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
