ದೋಹಾ:ಭಾರತ-ಕತಾರ್ ಸಂಬಂಧಗಳು ವೃದ್ಧಿಸುತ್ತಿವೆ, ಭವಿಷ್ಯದ ವಲಯಗಳಲ್ಲಿ ಸಹಯೋಗ ಸಾಧಿಸಲು ಎರಡೂ ಕಡೆಯವರು ಗಮನ ಹರಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಗುರುವಾರ ಕತಾರಿ ಎಮಿರ್ ಶೇಖ್ ತಮಿಮ್ ಬಿನ್ ಹಮದ್ ಅಲ್ ಥನಿ ಅವರ ಜತೆ ಮಾತುಕತೆ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಗಲ್ಪ್ ರಾಷ್ಟ್ರದಲ್ಲಿ ಸಿಲುಕಿ ಮರಣದಂಡನೆಗೆ ಗುರಿಯಾದ ಭಾರತದ ಮಾಜಿ ನೌಕಾಪಡೆಯ 8 ಮಂದಿ ಅದರಿಂದ ಮುಕ್ತಗೊಂಡ ಎರಡು ದಿನಗಳ ಬಳಿಕ ಮೋದಿ ಈ ವಿಷಯ ತಿಳಿಸಿದರು. ಎಮಿರ್ ಜತೆಗಿನ ಭೇಟಿ ಅದ್ಭುತ ಎಂದ ಮೋದಿ, ವಿವಿಧ ಕ್ಷೇತ್ರಗಳಿಗೆ ಸಂಬಂಧಿತ ಸಹಕಾರಗಳನ್ನು ಗಾಢಗೊಳಿಸುವ ಮಾತುಕತೆ ನಡೆದಿದೆ ಎಂದು ಹೇಳಿದರು. ಯುಎಇನ ಎರಡು ದಿನಗಳ ಭೇಟಿ ಬಳಿಕ ಮೋದಿ ಬುಧವಾರ ರಾತ್ರಿ ಕತಾರ್ ರಾಜಧಾನಿಗೆ ಆಗಮಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಮೋದಿ ಮತ್ತು ಎಮಿರ್ ನಡುವಿನ ಭೇಟಿ ಫಲಪ್ರದವಾಗಿತ್ತು ಎಂದು ಬಣ್ಣಿಸಿದರು. ಅಲ್ಲದೆ, ಭಾರತೀಯ ಸಮುದಾಯದವರಿಗೆ ಈ ದೇಶದಲ್ಲಿ ಸಿಗುತ್ತಿರುವ ಸಹಕಾರಕ್ಕೆ ಎಮಿರ್​ಗೆ ಧನ್ಯವಾದ ಸಲ್ಲಿಸಿದರು ಎಂದೂ ತಿಳಿಸಿದರು. ಬುಧವಾರ ರಾತ್ರಿ ಆಗಮಿಸಿದ ಮೋದಿ, ಕತಾರ್ ಪ್ರಧಾನಿ, ವಿದೇಶಾಂಗ ಸಚಿವರೂ ಆಗಿರುವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥನಿ ಅವರನ್ನು ಭೇಟಿಯಾದರು. ವ್ಯಾಪಾರ, ಹೂಡಿಕೆ, ಇಂಧನ, ಹಣಕಾಸು, ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಕುರಿತು ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು ಎಂದು ರಣಧೀರ್ ಜೈಸ್ವಾಲ್ ತಿಳಿಸಿದರು.
ಕತಾರ್​ಗೆ ಮೋದಿಯವರದ್ದು ಇದು ಎರಡನೇ ಭೇಟಿ ಆಗಿದ್ದು, ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳನ್ನು ಕತಾರ್​ನಿಂದ ಮರಣದಂಡನೆ ಮುಕ್ತಗೊಳಿಸಿದ ಎರಡು ದಿನಗಳಲ್ಲೇ ಈ ಭೇಟಿ ನಡೆದಿರುವುದು ವಿಶೇಷವಾಗಿದೆ. 2016ರ ಜೂನ್​ನಲ್ಲಿ ಮೋದಿ ದೋಹಾಗೆ ಮೊದಲ ಭೇಟಿ ನೀಡಿದ್ದರು. ಕಳೆದ ಡಿಸೆಂಬರ್​ನಲ್ಲಿ ದುಬೈನಲ್ಲಿ ನಡೆದ ಸಿಒಪಿ28 ಶೃಂಗಸಭೆಯಲ್ಲೂ ಪ್ರಧಾನಿ ಮೋದಿ ಕತಾರಿ ಎಮಿರ್ ಅವರನ್ನು ಭೇಟಿ ಆಗಿದ್ದರು. ಕತಾರ್​ಗೆ 2008ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೀಡಿದ್ದ ಉನ್ನತಮಟ್ಟದ ಭೇಟಿ ಬಳಿಕ ಇದು ಭಾರತದಿಂದ ಮತ್ತೊಂದು ಉನ್ನತಮಟ್ಟದ ಭೇಟಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
