ನವದೆಹಲಿ:ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ (ಗ್ಲೋಬಲ್ ಇನ್ನೋವೇಷನ್ ಇಂಡೆಕ್ಸ್-ಜಿಐಐ) ಭಾರತ ನಾಲ್ಕು ಸ್ಥಾನ ಜಿಗಿತ ಕಂಡಿದ್ದು 48ನೇ ರ‍್ಯಾಂಕ್​ ಪಡೆದಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯು.ಐ.ಪಿ.ಓ.) ಸಂಯೋಜಿಸಿರುವ 2020ನೇ ಸಾಲಿನ ಜಿಐಐಅನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಇನ್​ಸೀಡ್ ಬಿಸಿನೆಸ್ ಸ್ಕೂಲ್ ಸಹ ಪ್ರಾಯೋಜಕ ಸಂಸ್ಥೆಗಳಾಗಿವೆ.
ಈ ಸೂಚ್ಯಂಕ 131 ದೇಶಗಳ ಇತ್ತೀಚಿನ ವಾರ್ಷಿಕ ಆವಿಷ್ಕಾರ ಪ್ರವೃತ್ತಿ ಹಾಗೂ ರ‍್ಯಾಂಕಿಂಗ್ ಪ್ರತಿಬಿಂಬಿಸುತ್ತದೆ. ಜಗತ್ತಿನ ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಆವಿಷ್ಕಾರ ದಾಖಲಾಗಿರುವ ಮೂರನೇ ದೇಶವಾಗಿ ಹೊರಹೊಮ್ಮಿದೆ. ಜಿಐಐನಲ್ಲಿ ವಿವಿಧ ರಂಗಗಳಲ್ಲಿ ಲಭ್ಯವಿರುವ ಹೊಸ ಸೂಚಕಗಳು ಹಾಗೂ ಆಗಿರುವ ಸುಧಾರಣೆಗಳು ರ್ಯಾಂಕಿಂಗ್​ನಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ. ಸೇವಾ ರಫ್ತು, ಸರ್ಕಾರಿ ಆನ್​ಲೈನ್ ಸೇವೆಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀಧರರು, ಸಂಶೋಧನೆ ಮತ್ತು ಅಭಿವೃಧಿಗೆ ಆದ್ಯತೆ ನೀಡುವ ಕಂಪನಿಗಳು ಮುಂತಾದ ಸೂಚಕಗಳಲ್ಲಿ ಟಾಪ್ 15 ದೇಶಗಳಲ್ಲಿ ಭಾರತವೂ ಸ್ಥಾನ ಪಡೆದಿದೆ.
ಐಐಎಸ್ಸಿ ಕೊಡುಗೆ
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ), ಮುಂಬೈ ಮತ್ತು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಹಾಗೂ ಅವುಗಳ ಉನ್ನತ ಪ್ರಕಟಣೆಗಳ ಕೊಡುಗೆಗಳಿಂದಾಗಿ ಭಾರತ ಕೆಳ ಮಧ್ಯಮ ವರ್ಗದ ದೇಶಗಳ ವಿಭಾಗದಲ್ಲಿ ಗುಣಮಟ್ಟದ ಆವಿಷ್ಕಾರದ ಸಾಧನೆ ಮಾಡಿದೆ ಎಂದು ವರದಿ ಅಭಿಪ್ರಾಯ ಪಟ್ಟಿದೆ. ಸಂಸ್ಥೆಗಳು (61), ವ್ಯವಹಾರ ಆಧುನೀಕರಣ (55) ಮತ್ತು ಸೃಜನಾತ್ಮಕ ಫಲಿತಾಂಶಗಳಲ್ಲಿ (64) ಕೂಡ ಭಾರತ ಉತ್ತಮ ಸಾಧನೆ ತೋರಿದೆ. ಉನ್ನತ 30 ಮಧ್ಯಮ ಆದಾಯ ಆರ್ಥಿಕ ತೆಗಳ ಪೈಕಿ ಚೀನಾ 14ನೇ ಸ್ಥಾನ ಗಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 16 =
Remember me
