ನವದೆಹಲಿ:ವಾಸ್ತವ ಗಡಿ ರೇಖೆಯುದ್ದಕ್ಕೂ ಅದರಲ್ಲೂ ವಿಶೇಷವಾಗಿ ಲೇಹ್​ನಿಂದ ಲಡಾಖ್​ವರೆಗಿನ ನಾಲ್ಕು ಕಡೆಗಳಲ್ಲಿ ಚೀನಿ ಯೋಧರು ಭಾರತೀಯ ಯೋಧರೊಂದಿಗೆ ತಿಕ್ಕಾಟ ನಡೆಸುತ್ತಿದ್ದಾರೆ. ಗಡಿರೇಖೆಗೆ ಸಮೀಪವಾಗಿ ಸಹಸ್ರಾರು ಟೆಂಟ್​ಗಳನ್ನು ನೆಟ್ಟು ಯೋಧರ ಜಮಾವಣೆ ಮಾಡುತ್ತಿದೆ. ಜತೆಗೆ ಬಂಕರ್​ಗಳನ್ನು ನಿರ್ಮಿಸುವ ಮೂಲಕ ಭಾರತದೊಂದಿಗೆ ದೀರ್ಘಕಾಲದವರೆಗೆ ತಿಕ್ಕಾಟ ಮುಂದುವರಿಸುವ ಇರಾದೆ ತೋರುತ್ತಿದೆ.
ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿರೇಖೆಯ ಬಳಿಯ ಸೇನಾ ನಿಯೋಜನೆಯನ್ನು ಪ್ರಮಾಣವನ್ನು ಹೆಚ್ಚಿಸಿದೆ. ಬಂಕರ್​ಗಳ ನಿರ್ಮಾಣಕ್ಕೂ ಮುಂದಾಗಿದೆ. ತನ್ಮೂಲಕ ದೀರ್ಘಕಾಲದ ತಿಕ್ಕಾಟಕ್ಕೆ ತಾನೂ ಸಿದ್ಧ ಎಂದು ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆಯನ್ನೂ ರವಾನಿಸಿದೆ.ಆದರೆ ಈ ತಿಕ್ಕಾಟಕ್ಕೆ ಕಾರಣ ಏನೆಂದು ಹುಡುಕುತ್ತಾ ಹೊರಟರೆ, ವಾಸ್ತವ ಗಡಿರೇಖೆ ಸಮೀಪದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಎಂಬ ಉತ್ತರ ದೊರೆಯುತ್ತದೆ. ಈ ಕಾಮಗಾರಿಗಳಿಂದಾಗಿ ತ್ವರಿತವಾಗಿ ಯೋಧರನ್ನು ವಾಸ್ತವ ಗಡಿರೇಖೆ ಬಳಿಗೆ ತಲುಪಿಸಲು ಭಾರತಕ್ಕೆ ಅನುಕೂಲವಾಗುತ್ತದೆ. ಇದು ಚೀನಿಯರ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಅವರು ಪದೇಪದೆ ಭಾರತದ ಗಡಿಯೊಳಗೆ ಅತಿಕ್ರಮಣ ಮಾಡುವ ಮೂಲಕ ಬೆದರಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಆದರೆ, ಚೀನಿಯರು ಅದೆಷ್ಟೇ ಅಡ್ಡಿಪಡಿಸಿದರೂ, ಒರಲಿ, ಎದೆಎದೆ ಬಡಿದುಕೊಂಡರೂ ತಾನು ಮಾತ್ರ ಯಾವುದಕ್ಕೂ ಜಗ್ಗುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಹೊಸ ಮದುವೆ, ಹೊಸ ಅಪಾರ್ಟ್​ಮೆಂಟ್​, ಹೊಸ ಬದುಕು… ಆದರೆ, ಮುಗಿಯುತ್ತಲೇ ಇಲ್ಲ ಹನಿಮೂನ್​..!
ಅತಿಎತ್ತರದ ಏರ್​ಸ್ಟ್ರಿಪ್​ ತಂದಿರುವ ನಡುಕ:ವಾಸ್ತವ ಗಡಿರೇಖೆಗೆ ಸಮೀಪವಾಗಿ ಗಲ್ವಾನ್​ ಬಳಿ ಭಾರತ ಡಾರ್​ಚುಕ್​ನಿಂದ ದೌಲತಾ ಬೇಗ್​ ಓಲ್ಡಿಗೆ ಶಯಾಕ್​ ಮಾರ್ಗವಾಗಿ ರಸ್ತೆಯನ್ನು ನಿರ್ಮಿಸಿದೆ. ಈ ರಸ್ತೆಯನ್ನು ಏರ್​ಸ್ಟ್ರಿಪ್​ ಆಗಿಯೂ ಬಳಸುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿಎತ್ತರದ ಏರ್​ಸ್ಟ್ರಿಪ್​ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಇಲ್ಲಿ ಸಿ-130 ಜೆ ಯುದ್ಧವಿಮಾನವನ್ನು ಸುಲಭವಾಗಿ ಇಳಿಸಬಹುದಾಗಿದೆ. 2019ರಲ್ಲಿ ನಿರ್ಮಾಣವಾಗಿರುವ ಈ ರಸ್ತೆ ಕರಾಕೊರಂ ಹೆದ್ದಾರಿಗೂ ಸುಲಭವಾಗಿ ಸಂಪರ್ಕ ಒದಗಿಸುತ್ತದೆ. ಇದು ಚೀನಿಯರ ಎದೆನಡುಕಕ್ಕೆ ಕಾರಣವಾಗಿದೆ.
ಗಡಿಭಾಗದಲ್ಲಿ ಚೀನಿಯರು ಆಗಾಗ ಉಪಟಳ ಕೊಡುತ್ತಿರುತ್ತಾರೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ತಕ್ಷಣವೇ ಹೆಚ್ಚಿನ ಯೋಧರನ್ನು ವಾಸ್ತವ ಗಡಿರೇಖೆ ಬಳಿಗೆ ಸಾಗಿಸುವುದು ಅಗತ್ಯವಾಗಿರುತ್ತದೆ. ಇದಕ್ಕೆ ಈ ಏರ್​ಸ್ಟ್ರಿಪ್​ ಸಹಕರಿಸುತ್ತದೆ ಎಂದು ಭಾರತೀಯ ಸೇನಾಪಡೆ ಮೂಲಗಳು ಹೇಳಿವೆ.
ಚೀನಿಯರು ಕಳೆದ ನಾಲ್ಕು ವರ್ಷಗಳಿಂದ ವಾಸ್ತವ ಗಡಿರೇಖೆ ಬಳಿಯ ತಮ್ಮ ಪ್ರದೇಶದಲ್ಲಿ ಇಂಥ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇದೀಗ ಭಾರತ ಈ ಕಾಮಗಾರಿಗಳಿಗೆ ಹೊಂದಿಕೊಳ್ಳುವ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಭಾಗದಲ್ಲಿ ಕೈಗೊಳ್ಳುತ್ತಿದೆ. ಇದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಚೀನಿಯರು ಗಡಿಭಾಗದಲ್ಲಿ ಪದೇಪದೆ ಗಡಿ ಅತಿಕ್ರಮಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಭಾರತ ಮಾತ್ರ ಇದಾವುದಕ್ಕೂ ಜಗ್ಗದೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನವನ್ನು ಮುಂದುವರಿಸುತ್ತಿದೆ.
ಲಾಕ್​​ಡೌನ್​ ಇಲ್ಲ… ಸಂಚಾರ ನಿರ್ಬಂಧಿಸಿಲ್ಲ…. ಆದರೂ ಜಪಾನ್​ ಕರೊನಾ ಮಣಿಸಿದ್ದೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
