ನವದೆಹಲಿ:ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ. ಕಳೆದ 24ಗಂಟೆಯಲ್ಲಿ 8909 ಹೊಸ ಸೋಂಕಿತರು ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇಲ್ಲಿಯವರೆಗಿನ 24 ಗಂಟೆಯ ಲೆಕ್ಕಾಚಾರದಲ್ಲಿ ಇದು ದಾಖಲೆಯ ಸಂಖ್ಯೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,07, 615ಕ್ಕೆ ಏರಿದ್ದು, ಮೃತರ ಸಂಖ್ಯೆ 5817. 24ಗಂಟೆಯಲ್ಲಿ ಕೊವಿಡ್​ನಿಂದ ಸತ್ತವರು 217 ಮಂದಿ ಎಂದು ಮಾಹಿತಿ ನೀಡಿದೆ.
ಸಕ್ರಿಯ ಕರೊನಾ ಪ್ರಕರಣಗಳು 1,01,497 ಆಗಿದ್ದು, 1,00,302 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ 48.31 ಕರೊನಾ ರೋಗಿಗಳು ಗುಣಮುಖರಾಗಿ ಡಿಸ್​​ಚಾರ್ಜ್​ ಆಗಿದ್ದಾರೆ.
ಕೊವಿಡ್​-19 ತೀವ್ರವಾಗಿ ಬಾಧಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೀಗ ಏಳನೇ ಸ್ಥಾನಕ್ಕೆ ತಲುಪಿದೆ.ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗಿನವರೆಗೆ ಮಹಾರಾಷ್ಟ್ರದಲ್ಲಿ 103, ದೆಹಲಿಯಲ್ಲಿ 33, ಗುಜರಾತ್​ನಲ್ಲಿ 29, ತಮಿಳುನಾಡಿನಲ್ಲಿ 13, ಪಶ್ಚಿಮಬಂಗಾಳದಲ್ಲಿ 10, ಮಧ್ಯಪ್ರದೇಶದಲ್ಲಿ 6 ಹಾಗೂ ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ತಲಾ 5 ಮತ್ತು ತೆಲಂಗಾಣದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಾಗೇ ಹರಿಯಾಣ, ಜಮ್ಮು-ಕಾಶ್ಮೀರದಲ್ಲಿ ತಲಾ 2 ಮತ್ತು ಕೇರಳ, ಚಂಡಿಗಢ್​, ಲಡಾಖ್​, ಪಂಜಾಬ್​, ಉತ್ತರಖಂಡಗಳಲ್ಲಿ ತಲಾ ಒಂದು ಸಾವು ಉಂಟಾಗಿದೆ.
ಇದುವರೆಗೆ ಕೊವಿಡ್​-19ನಿಂದಾಗಿ ಅತಿಯಾಗಿ ಬಾಧಿಸಲ್ಪಟ್ಟಿರುವ ರಾಜ್ಯ ಮಹಾರಾಷ್ಟ್ರ. ಒಟ್ಟು 5815 ಸಾವಿನ ಸಂಖ್ಯೆಯಲ್ಲಿ 2,465 ಮಹಾರಾಷ್ಟ್ರದಿಂದಲೇ ದಾಖಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 4 =
Remember me
