ಬೆಂಗಳೂರು:ಕಳೆದ ಕೆಲವು ದಿನಗಳಿಂದ ಬಾಧಿಸುತ್ತಿರುವ ಎಚ್​3ಎನ್​2 ವೈರಸ್​ನಿಂದ ಕರ್ನಾಟಕದಲ್ಲಿ ಒಬ್ಬರು ಸಾವಿಗೀಡಾಗುವ ಮೂಲಕ ಭಾರತದಲ್ಲಿ ಈ ಸೋಂಕಿನಿಂದಾದ ಮೊದಲ ಸಾವು ಕರ್ನಾಟಕದಲ್ಲಿ ಸಂಭವಿಸಿತ್ತು. ಇನ್ನೊಬ್ಬರು ಈ ಸೋಂಕಿಗೆ ಬಲಿಯಾಗುವ ಮೂಲಕ ದೇಶದಲ್ಲಿ ಎಚ್​3ಎನ್​2ನಿಂದ ಸತ್ತವರ ಸಂಖ್ಯೆ ಎರಡಕ್ಕೇರಿದೆ.
ಇದನ್ನೂ ಓದಿ:ಹೊರರಾಜ್ಯಗಳಿಗೆ ನಂದಿನಿ ಹಾಲಿನ ಪೂರೈಕೆ ಸ್ಥಗಿತಗೊಳಿಸಿ; ಹೋಟೆಲ್​ ಮಾಲೀಕರಿಂದ ಕೆಎಂಎಫ್​ಗೆ ಪತ್ರ
ರಾಜ್ಯದ ಹಾಸನ ಜಿಲ್ಲೆಯ 82 ವರ್ಷದ ವ್ಯಕ್ತಿ ಹಿರೇಗೌಡ ಮಾ. 1ರಂದು ಸಾವಿಗೀಡಾಗಿದ್ದರು. ಅವರು ಎಚ್​3ಎನ್​2 ವೈರಸ್​ ಸೋಂಕಿಗೆ ಒಳಗಾಗಿದ್ದನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಖಚಿತಪಡಿಸಿದ್ದರು. ಇದೀಗ ಹರ್ಯಾಣದಲ್ಲೂ ಇನ್ನೊಬ್ಬರು ಈ ಸೋಂಕಿಗೆ ಒಳಗಾಗಿ ಸತ್ತಿದ್ದು ಖಚಿತವಾಗಿದೆ.
ಇದನ್ನೂ ಓದಿ:ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಹರ್ಯಾಣದಲ್ಲಿ 56 ವರ್ಷದ ವ್ಯಕ್ತಿ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಸಾವಿಗೀಡಾಗಿದ್ದರು. ಜಿಂದ್ ಜಿಲ್ಲೆಯ ಈ ವ್ಯಕ್ತಿ ಎಚ್​3ಎನ್​2 ಸೋಂಕಿಗೆ ಒಳಗಾಗಿದ್ದರು. ದೇಶದಲ್ಲಿ ಎಚ್​3ಎನ್​2 ಸೋಂಕಿಗೆ ಒಳಗಾಗಿ ಸಾವಿಗೀಡಾದ ಎರಡು ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಸೋಂಕಿನ ಕುರಿತ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ. ಎಚ್​3ಎನ್​2 ಇನ್​​ಪ್ಲುಯೆಂಜಾವನ್ನು ಹಾಂಗ್​ಕಾಂಗ್​ ಫ್ಲೂ ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ:2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
