ನವದೆಹಲಿ:ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ದ್ವಿಪಕ್ಷಿಯ ಮಾತುಕತೆಗಾಗಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. ಭಾರತ – ರಷ್ಯಾ ನಡುವೆ ಮಹತ್ವದ ಭದ್ರತಾ ಒಪ್ಪಂದವೂ ಏರ್ಪಟ್ಟಿದೆ. ಉಭಯ ದೇಶಗಳ ಮೈತ್ರಿ ಮುಂದುವರಿಸುವ ಕುರಿತು ಪುತಿನ್ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಭಾರತೀಯ ಸೇನೆಗೆ ಎಕೆ-203 ರೈಫಲ್​ಗಳನ್ನು ರಷ್ಯಾದಿಂದ ಖರೀದಿಸುವ ಒಪ್ಪಂದಕ್ಕೆ ಭಾರತ ಸೋಮವಾರ ಸಹಿಹಾಕಿದೆ. ಸೇನಾ ಸಹಕಾರವನ್ನು 2031ರ ತನಕ ವಿಸ್ತರಿಸುವುದಾಗಿಯೂ ಉಭಯ ರಾಷ್ಟ್ರಗಳು ಘೋಷಿಸಿವೆ.
ಸಚಿವರ ಹಂತದ ಮಾತುಕತೆ:ರಷ್ಯಾದ ರಕ್ಷಣಾ ಸಚಿವ ಸೆರ್ಜಿ ಶೋಯಿಗು ಜತೆಗೆ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್, ವಿದೇಶಾಂಗ ಸಚಿವರಾದ ಸೆರ್ಜಿ ಲಾವ್ರೋವ್ ಮತ್ತು ಎಸ್ ಜೈಶಂಕರ್ ಸೋಮವಾರ ಬೆಳಗ್ಗೆ 2+2 ಸಚಿವರ ಸ್ತರದ ಮಾತುಕತೆ ನಡೆಸಿದರು. ರಷ್ಯಾ ಜತೆಗಿನ ಪಾಲುದಾರಿಕೆ ಯಾವುದೇ ದೇಶವನ್ನು ಹಿಮ್ಮೆಟ್ಟಿಸುವುದಕ್ಕೆ ಮಾಡುತ್ತಿರುವುದಲ್ಲ. ಭಾರತದ ದೀರ್ಘಾವಧಿಯ ವಿಶೇಷ ಮತ್ತು ಪ್ರತಿಷ್ಠಿತ ವ್ಯೂಹಾತ್ಮಕ ಪಾಲುದಾರ ರಾಷ್ಟ್ರ ರಷ್ಯಾ. ಸಮಾನ ಆಸಕ್ತಿ, ಬಹುತ್ವ ಮತ್ತು ಜಾಗತಿಕ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ವಿಶ್ವಾಸದೊಂದಿಗೆ ಎರಡೂ ರಾಷ್ಟ್ರಗಳು ಪಾಲುದಾರಿಕೆಯನ್ನು ಮುಂದುವರಿಸುತ್ತಿವೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು. ರಷ್ಯಾದ ರಕ್ಷಣಾ ಸಚಿವ ಸೆರ್ಜಿ ಶೋಯಿಗು ಮತ್ತು ವಿದೇಶಾಂಗ ಸಚಿವ ಸೆರ್ಜಿ ಲಾವ್ರೋವ್ ಭಾನುವಾರ ರಾತ್ರಿಯೆ 2+2 ಮಾತುಕತೆಗಾಗಿ ದೆಹಲಿಗೆ ಆಗಮಿಸಿದ್ದರು. ಭಾರತದ ಗಡಿ ಭಾಗದಲ್ಲಿ ಅಪ್ರಚೋದಿತ ಅತಿಕ್ರಮಣ, ಒತ್ತುವರಿ ಪ್ರಕರಣ, ಭಯೋತ್ಪಾದನೆ, ಕೋವಿಡ್ 19 ಮತ್ತು ಅಫ್ಘಾನಿಸ್ತಾನದ ವಿಚಾರಗಳು ಮಾತುಕತೆಯಲ್ಲಿ ಚರ್ಚೆಗೊಳಗಾಗಿವೆ. ಚೀನಾ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಉದ್ವಿಗ್ನತೆ ಇರುವಾಗಲೇ ಈ ಮಾತುಕತೆ ನಡೆದಿರುವುದು ಗಮನಾರ್ಹ.
ನಾಲ್ಕು ರಕ್ಷಣಾ ಒಪ್ಪಂದಗಳು
ರಷ್ಯಾ ನಿರ್ವಿುತ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ‘ಟ್ರಯಂಫ್’ನ ಮೊದಲ ಘಟಕ ಈಗಾಗಲೇ ಭಾರತಕ್ಕೆ ತಲುಪಿದೆ. ಈ ಒಪ್ಪಂದ ತಡೆಯುವುದಕ್ಕೆ ಅಮೆರಿಕ ಸಾಕಷ್ಟು ಪ್ರಯತ್ನ ಮಾಡಿದೆ. ಅಮೆರಿಕದ ಆದೇಶವನ್ನು ಪಾಲಿಸುವಂತೆ ಭಾರತದ ಮೇಲೆ ಒತ್ತಡ ಹೇರಿತ್ತು. ಇವೆಲ್ಲವನ್ನೂ ಮೀರಿ ಈ ಒಪ್ಪಂದವನ್ನು ಭಾರತ ಯಶಸ್ವಿ ಯಾಗಿ ನೆರವೇರಿಸಿಕೊಂಡಿದೆ. ಕೈಗಾರಿಕಾ ಮೂಲಗಳ ಪ್ರಕಾರ, ಸ್ಕಾ್ವಡ್ರನ್​ನ ಮೊದಲ ಭಾಗಗಳು ಈಗಾಗಲೇ ಭಾರತವನ್ನು ಸೇರಿವೆ. ಈ ಕ್ಷಿಪಣಿ ಬಿಡಿಭಾಗಗಳು ಈಗಾಗಲೇ ವಾಯು ಮತ್ತು ಸಮುದ್ರ ಮಾರ್ಗ ವಾಗಿ ಭಾರತಕ್ಕೆ ಸೇರಿದೆ. ರಷ್ಯಾದಿಂದ 40,000 ಕೋಟಿ ರೂಪಾಯಿ ಮೌಲ್ಯದ 5 ಟ್ರಯಂಫ್ ಎಸ್-400 ಯುದ್ಧವಿಮಾನ ಹಾಗೂ ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆ ಖರೀದಿಯ ಒಪ್ಪಂದಕ್ಕೆ 2018ರ ಅಕ್ಟೋಬರ್​ನಲ್ಲಿ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದರಂತೆ ರಷ್ಯಾವು ಐದು ವರ್ಷದೊಳಗೆ ಎಲ್ಲ 5 ವ್ಯವಸ್ಥೆಯನ್ನು ಹಸ್ತಾಂತರಿಸಬೇಕು.
ಅಮೆರಿಕದ ನಿರ್ಬಂಧ ಭೀತಿ:ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳು ವುದರಿಂದ ಭಾರತಕ್ಕೆ ಅಮೆರಿಕದ ನಿರ್ಬಂಧದ ಭೀತಿಯೂ ಇದೆ. ಇಷ್ಟಾದರೂ, ಅಮೆರಿಕದ ಜತೆಗಿನ ಒಪ್ಪಂದ, ಒಡನಾಟಗಳಿಗೆ ತೊಂದರೆ ಆಗದ ರೀತಿಯಲ್ಲಿ ರಷ್ಯಾದ ಜತೆಗೂ ಒಡನಾಟ ನಡೆಸುವ ಅನಿವಾರ್ಯತೆ ಭಾರತಕ್ಕೆ ಇದೆ. ಹೀಗಾಗಿ, ಭಾರತದ ಸೇನಾ ಬಲ ವೃದ್ಧಿಗೆ ಬೇಕಾದ ಎಲ್ಲ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ಸಂಜೆ ದೆಹಲಿಯ ಹೈದರಾಬಾದ್ ಹೌಸ್​ನಲ್ಲಿ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಿದರು. ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸಾಮಾನ್ಯ ಹಿತಾಸಕ್ತಿಯ ವಿಚಾರಗಳು ಮತ್ತು ವ್ಯೂಹಾತ್ಮಕ ಪಾಲುದಾರಿಕೆ ವಿಚಾರಗಳು ಚರ್ಚೆಗೆ ಒಳಗಾಗಿವೆ.
ಕೋವಿಡ್ 19 ಸಂಕಷ್ಟ ಇದ್ದಾಗ್ಯೂ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಮ್ಮ ಆಗಮನವು ಭಾರತದ ಜತೆಗಿನ ಬಾಂಧವ್ಯ ಸಂಬಂಧಿಸಿ ನಿಮ್ಮ ಬದ್ಧತೆಯನ್ನು ಎತ್ತಿ ತೋರಿಸಿದೆ. ಕಳೆದ ಕೆಲವು ದಶಕಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಸೂತ್ರಗಳು ಬದಲಾಗಿವೆ. ಆದರೆ, ಭಾರತ -ರಷ್ಯಾ ಸಂಬಂಧದ ಮೇಲೆ ಅವು ಪರಿಣಾಮ ಬೀರಿಲ್ಲ. ಅದು ಇನ್ನಷ್ಟು ಬಲಿಷ್ಠಗೊಳ್ಳುತ್ತ ಮುಂದುವರಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತನ್ನು ಆರಂಭಿಸಿದ್ದರು. ಭಾರತ ಒಂದು ಮಹಾನ್ ಶಕ್ತಿ. ಒಂದು ಸ್ನೇಹಪರ ದೇಶ ಮತ್ತು ಸರಿಯಾದ ಮಿತ್ರ ರಾಷ್ಟ್ರ ಎಂಬುದನ್ನು ನಾವು ಗ್ರಹಿಸಿದ್ದೇವೆ. ನಮ್ಮ ದೇಶಗಳ ನಡುವಿನ ಸಂಬಂಧ ವೃದ್ಧಿಯಾಗುತ್ತಿದೆ. ಭವಿಷ್ಯದ ಕಡೆಗೆ ನಮ್ಮ ನೋಟವಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳಿದರು.
ಕಳವಾದ ನಾಯಿಯನ್ನು ಹನ್ನೆರಡೇ ಗಂಟೆಗಳಲ್ಲಿ ಹುಡುಕಿಕೊಟ್ಟ ಪೊಲೀಸರು; ಹುಡುಕಿಕೊಡದಿದ್ದರೆ ಎಸ್​ಪಿಗೆ ತಿಳಿಸುವುದಾಗಿ ಹೇಳಿದ್ದ ದೂರುದಾರರು

ಕದ್ರಿ ಗೋಪಾಲನಾಥ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರ ಪತ್ನಿ ಅಸ್ವಸ್ಥ; ಜಿಲ್ಲಾಧಿಕಾರಿಯಿಂದಲೇ ಚಿಕಿತ್ಸೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
