ನವದೆಹಲಿ:ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದ ಸೇಲಿಂಗ್​ನಲ್ಲಿ ಭಾರತದ ನೇಹಾ ಠಾಕೂರ್​ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ ಡಿಂಘಿ ILCA-4ರಲ್ಲಿ ನೇಹಾ ಈ ಸಾಧನೆ ಮಾಡಿದ್ದಾರೆ. ಭಾರತದಕ್ಕೆ ಇದು ಒಟ್ಟಾರೆಯಾಗಿ 12ನೇ ಪದಕವಾಗಿದೆ.
16 ಅಂಕ ಗಳಿಸುವ ಮೂಲಕ ಥಾಯ್ಲೆಂಡ್​ನ ನೊಪಾಸ್ಸೋರ್ನ್​ ಖುನ್​ಬೂಂಜಾನ್​ ಚಿನ್ನ ಗೆದ್ದಿದ್ದಾರೆ. ಭೋಪಾಲ್​ನ ನ್ಯಾಷನಲ್​ ಸೇಲಿಂಗ್​ ಸ್ಕೂಲ್​ನ ವಿದ್ಯಾರ್ಥಿನಿಯಾಗಿರುವ ನೇಹಾ ಠಾಕೂರ್​ 32 ಅಂಕ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಅವರ ನೆಟ್​ಸ್ಕೋರ್​ 27 ಆಗಿದ್ದರಿಂದ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. 28 ನೆಟ್​ಸ್ಕೋರ್​ ಗಳಿಸಿದ್ದ ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್​ ನೆಟ್​ಸ್ಕೋರ್​ ಕಂಚಿನ ಪದಕ ಗೆದ್ದಿದ್ದಾರೆ.
Many congratulations to Neha Thakur on winning the#SilverMedalin the ILCA4 Girls,#Sailingevent.Let’s#Cheer4india🇮🇳#WeAreTeamIndia|#IndiaAtAG22pic.twitter.com/ad9lILyWTc
ಇದನ್ನೂ ಓದಿ:ಎಐಎಡಿಎಂಕೆ-ಬಿಜೆಪಿ ಮೈತ್ರಿ ಕಡಿತ; ಕಳ್ಳರು ಯಾವತ್ತಿದ್ದರೂ ಒಂದೇ ಎಂದು ವ್ಯಂಗ್ಯವಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್
ಮಹಿಳೆಯರ ಡಿಂಘಿ ILCA-4ರ ವಿಭಾಗದಲ್ಲಿ ಒಟ್ಟು 11 ರೇಸ್​ಗಳನ್ನು ಒಳಗೊಂಡಿದೆ. ಒಟ್ಟು 32 ಅಂಕ ಗಳಿಸುವ ಮೂಲಕ ನೇಹಾ ತಮ್ಮ ಸ್ಪರ್ಧೆಯನ್ನು ಮುಗಿಸಿದ್ದರು. ಐದನೇ ರೇಸ್​ನಲ್ಲಿ 5 ಅಂಕ ಗಳಿಸುವ ಮೂಲಕ 27 ನೆಟ್​ಸ್ಕೋರ್​ನೊಂದಿಗೆ ಆಟ ಮುಗಿಸಿದರು. ಸೇಲಿಂಗ್​ನಲ್ಲಿ ನೆಟ್​ ಸ್ಕೋರ್​ಅನ್ನು ಎಲ್ಲಾ ರೇಸ್​ಗಳಿಂದ ಕಡಿಮೆ ಅಂಕಗಳಿಂದ ಕಳೆಯಲಾಗುತ್ತದೆ. ಕಡಿಮೆ ನೆಟ್​ ಸ್ಕೋರ್​ ಹೊಂದಿರುವವರನ್ನು ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 2 =
Remember me
