ನವದೆಹಲಿ:ಅಮೆರಿಕ ನಂತರದಲ್ಲಿ ವಿಶ್ವದಲ್ಲೇ ಅತಿಹೆಚ್ಚು ಕೋವಿಡ್​-19 ಪರೀಕ್ಷೆ ನಡೆಸಿದ್ದು ಭಾರತ ಎಂದು ಅಮೆರಿಕ ಹೇಳಿದೆ. ಅಮೆರಿಕದಲ್ಲಿ ಇದುವರೆಗೆ 42 ದಶಲಕ್ಷ ಕೋವಿಡ್​-19 ಪರೀಕ್ಷೆಗಳನ್ನು ಮಾಡಲಾಗಿದ್ದರೆ, ಭಾರತದಲ್ಲಿ 12 ದಶಲಕ್ಷ ಕೋವಿಡ್​-19 ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ವೈಟ್​ಹೌಸ್​ ಹೇಳಿದೆ.
ಅಮೆರಿಕದಲ್ಲಿ 3.5 ದಶಲಕ್ಷಕ್ಕೂ ಹೆಚ್ಚುಜನರಲ್ಲಿ ಕರೊನಾ ವೈರಾಣು ಸೋಂಕು ದೃಢಪಟ್ಟಿದೆ. ಇವರ ಪೈಕಿ 1,38,000 ಜನರು ಮೃತಪಟ್ಟಿದ್ದಾರೆ. ಜಾಗತಿಕವಾಗಿ ಒಟ್ಟು 13.6 ದಶಲಕ್ಷ ಜನರಿಗೆ ಸೋಂಕು ತಗುಲಿದ್ದು, 5.86 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವಿವರಿಸಿದೆ.
ಅಮೆರಿಕ ನಂತರದಲ್ಲಿ ಗರಿಷ್ಠ ಕೋವಿಡ್​-19 ಪರೀಕ್ಷೆ ನಡೆಸಿದ ರಾಷ್ಟ್ರ ಭಾರತವಾಗಿದೆ. ಇಲ್ಲಿ ಇದುವರೆಗೆ 12 ದಶಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ವೈಟ್​ಹೌಸ್​ನ ಮಾಧ್ಯಮ ಕಾರ್ಯದರ್ಶಿ ಕೈಲೀಗ್​ ಮೆಕ್​ಎನ್ಯಾನಿ ಹೇಳಿದರು. ಜಗತ್ತಿನಲ್ಲಿ ಬೇರಾವುದೇ ರಾಷ್ಟ್ರಕ್ಕೆ ಹೋಲಿಸಿದರೂ ಗರಿಷ್ಠ ಪರೀಕ್ಷೆಗಳು ಅಮೆರಿಕದಲ್ಲೇ ಅಗಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ಗೆಹ್ಲೋಟ್​ ಸರ್ಕಾರ ಉರುಳಿಸಲು ಹುನ್ನಾರ; ಕೇಂದ್ರ ಸಚಿವರ ವಿರುದ್ಧ ಕಾಂಗ್ರೆಸ್​ ಆರೋಪ
ಇದಕ್ಕೂ ಮುನ್ನ ಮಾತನಾಡಿದ್ದ ಉಪಾಧ್ಯಕ್ಷ ಜೋ ಬಿಡೆನ್​ ಅವರ ಮಾಜಿ ಸಿಬ್ಬಂದಿ ಮುಖ್ಯಸ್ಥೆ ರಾನ್​ ಕ್ಲೇನ್​, ಅಮೆರಿಕದ ಇತಿಹಾಸದಲ್ಲಿ ಗರಿಷ್ಠ ಪ್ರಮಾಣದ ಸಾವಿಗೆ ಎಚ್​1ಎನ್​1 ಕಾರಣವಾಗದೆ ಹೋಗಿದ್ದು ನಮ್ಮ ಅದೃಷ್ಟವೇ ಸರಿ. ಆ ಸಂದರ್ಭದಲ್ಲಿ ನಾವು ಸೂಕ್ತ ಕ್ರಮ ಕೈಗೊಳ್ಳದೇ ಹೋದರೂ ಏನೊಂದು ಸಮಸ್ಯೆ ಆಗಲಿಲ್ಲ ಎಂದು ಹೇಳಿದ್ದರು.
ಇದಕ್ಕೆ ಹೋಲಿಸಿದರೆ, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನೇತೃತ್ವದ ಸರ್ಕಾರ ಕೋವಿಡ್​ ತಡೆಗೆ ಸಾಕಷ್ಟು ಕ್ರಮ ಕೈಗೊಂಡಿತು. ಗರಿಷ್ಠ ಪ್ರಮಾಣದ ಕೋವಿಡ್​ ಪರೀಕ್ಷೆಗಳನ್ನು ನಡೆಸುವ ಜತೆಗೆ, ವಿಶ್ವಾದ್ಯಂತ ವೆಂಟಿಲೇಟರ್​ಗಳನ್ನು ಪೂರೈಕೆ ಮಾಡುವಲ್ಲಿ ಮುಂದಾಳತ್ವ ವಹಿಸಿಕೊಂಡಿತು. ಅಲ್ಲದೆ, 13 ಕೋವಿಡ್​ ಲಸಿಕೆಗಳನ್ನು ಸಿದ್ಧಪಡಿಸಲು ನೆರವಾಯಿತು. ಇವುಗಳ ಪೈಕಿ ಒಂದು ಲಸಿಕೆ ಮೂರು ಹಂತಗಳ ಕ್ಲಿನಿಕಲ್​ ಟ್ರಯಲ್​ಗೆ ಒಳಗಾಗುತ್ತಿದೆ ಎಂದು ವೈಟ್​ಹೌಸ್​ ಮಾಹಿತಿ ನೀಡಿದೆ.
ನಂಗೆ ಕರೊನಾ ಸೋಂಕು ತಗುಲಿದೆ, ಬೆಡ್ ಕೊಡಿಸಿ ಅಂತ ಸಿಎಂ ಮನೆಗೆ ಹೋದ ಸೋಂಕಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 11 =
Remember me
