ನವದೆಹಲಿ:ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯುವಂತೆ ಭಾರತ ಸೂಚನೆ ನೀಡಿದೆ.ಇದಷ್ಟೇ ಅಲ್ಲ, ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲೂ ಕೂಡ ತನ್ನ ಅರ್ಧದಷ್ಟು ವಾಪಸ್​ ಭಾರತಕ್ಕೆ ಕರೆಯಿಸಿಕೊಳ್ಳುವುದಾಗಿ ಕೂಡ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ಇಸ್ಲಾಮಾಬಾದ್​ ಭಾರತೀಯ ರಾಯಭಾರ ಕಚೇರಿಯ ಇಬ್ಬರನ್ನು ಅಲ್ಲಿನ ಪೊಲೀಸರು ಬಂದೂಕು ತೋರಿಸಿ ಅಪಹರಿಸಿದ್ದರು. ಬಳಿಕ ರಸ್ತೆ ಅಪಘಾತದ ಕೇಸ್​ನಲ್ಲಿ ವಿಚಾರಣೆ ನಡೆಸಿದ್ದಾಗಿ ನೆಪ ಹೇಳಿದ್ದರು. ಇವರನ್ನು ಎರಡು ದಿನಗಳ ಹಿಂದಷ್ಟೇ ಭಾರತ ವಾಪಸ್​ ಕರೆಯಿಸಿಕೊಂಡಿತ್ತು.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳ ಖರ್ಚೆಷ್ಟು? ಹಳೇ ಮ್ಯಾನೇಜರ್​ನಿಂದ ಪೊಲೀಸರಿಗೆ ಮಾಹಿತಿ
ಇದಕ್ಕೂ ಮುನ್ನ ಬೇಹುಗಾರಿಕೆಯಲ್ಲಿ ತೊಡಗಿದ್ದ ನವದೆಹಲಿಯಲ್ಲಿರುವ ಪಾಕ್​ ರಾಯಭಾರ ಕಚೇರಿಯ ಮೂವರನ್ನು ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕ್​ ಸುಳ್ಳು ಕೇಸ್​ ದಾಖಲಿಸಿ, ಅವರ ಮೇಲೆ ದೌರ್ಜನ್ಯ ಎಸಗಿತ್ತು.
ಪಾಕ್​ ಅಧಿಕಾರಿಗಳು ಗೂಢಚಾರ ಕೃತ್ಯ ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದರಿಂದ ಅವರನ್ನು ದೇಶದಿಂದಲೇ ಹೊರಗೆ ಕಳುಹಿಸಲು ಭಾರತೀಯ ವಿದೇಶಾಂಗ ಇಲಾಖೆ ನಿರ್ಧರಿಸಿದೆ. ಹೀಗಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಅರ್ಧದಷ್ಟು ಇಳಿಕೆ ಮಾಡುವಂತೆ ಸೂಚಿಸಿದೆ.
ಇದನ್ನೂ ಓದಿ;ಸಂಘರ್ಷದ ನಡುವೆ ಸದ್ದಿಲ್ಲದೆ ಚೀನಾಗೆ ಭಾರಿ ತಿರುಗೇಟು ನೀಡಿದೆ ಭಾರತ
ಅಂತೆಯೇ ಇಸ್ಲಾಮಾಬಾದ್​ನಲ್ಲಿರುವ ತನ್ನ ದೂತಾವಾಸದ ಸಿಬ್ಬಂದಿಯ ಪ್ರಮಾಣವನ್ನು ಅರ್ಧಕ್ಕೆ ಇಳಿಸಲಿದೆ ಎಂದು ಇಲಾಖೆ ತಿಳಿಸಿದೆ.
ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
