ನವದೆಹಲಿ:ಯುದ್ಧಪೀಡಿತ ಗಾಜಾಗೆ ಜಗತ್ತಿನಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇಂದು ಭಾರತವು ಮಾನವೀಯ ಆಧಾರದ ಮೇಲೆ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.
ಅ. 7ರಂದು ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ಗಾಜಾದಿಂದ 5 ಸಾವಿರ ರಾಕೆಟ್​ಗಳ ಮೂಲಕ ದಾಳಿ ಮಾಡಿ ಇಸ್ರೇಲ್​ನಲ್ಲಿ ಮಾರಣಹೋಮ ಸೃಷ್ಟಿಸಿದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್​ ಹಮಾಸ್​ ಉಗ್ರರರ ವಿರುದ್ಧ ಸಮರ ಸಾರಿದ್ದು, ಗಾಜಾ ಒಳಗೆ ನುಗ್ಗಿ ಧ್ವಂಸ ಮಾಡುತ್ತಿದೆ. ಯುದ್ಧದ ಪರಿಣಾಮ ಲಕ್ಷಾಂತರ ನಾಗರಿಕರು ನಿರ್ಗತಿಕರಾಗಿದ್ದು, ತನ್ನ ಮಿತ್ರ ಅಮೆರಿಕದ ಮನವಿ ಮೇರೆಗೆ ಅಲ್ಲಿನ ಜನರಿಗೆ ನೆರವು ಒದಗಿಸಲು ಇಸ್ರೇಲ್​ ಒಪ್ಪಿಕೊಂಡಿದೆ.
ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳಲ್ಲಿ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪೌಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು ಮತ್ತು ಇತರ ಅಗತ್ಯ ವಸ್ತುಗಳ ಜೊತೆಗೆ ನೀರು ಶುದ್ಧೀಕರಣ ಮಾತ್ರೆಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಎಕ್ಸ್​ ಮೂಲಕ ತಿಳಿಸಿದ್ದಾರೆ.
🇮🇳 sends Humanitarian aid to the people of 🇵🇸!
An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
The material includes essential life-saving medicines,…pic.twitter.com/28XI6992Ph
— Arindam Bagchi (@MEAIndia)October 22, 2023

ಗಾಜಾವನ್ನು ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್​ ಘೋಷಣೆ ಮಾಡಿದ್ದು, ನೀರು, ವಿದ್ಯುತ್​, ಇಂಧನ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ದೀರ್ಘಕಾಲ ಕೊರತೆಯನ್ನು ಸೃಷ್ಟಿಸುತ್ತಿದೆ. ಇಸ್ರೇಲ್​​ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್​ ಸ್ಟೇಟ್ಸ್​ ಮನವಿಯ ಮೇರೆಗೆ ಈಜಿಪ್ಟ್​ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್​ ಅನುಮತಿಸಿದೆ. ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳು ರಫಾ ಗಡಿಯ ಮೂಲಕ ಗಾಜಾಗೆ ತಲುಪಲಿದೆ.
ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್‌ ಕಚೇರಿಯು ಹೊತ್ತಿದೆ. ನಿನ್ನೆ ಇಪ್ಪತ್ತು ಟ್ರಕ್‌ಗಳು ಈಜಿಪ್ಟಿನ ಟರ್ಮಿನಲ್ ಅನ್ನು ಪ್ರವೇಶಿಸಿದ್ದವು. ಪ್ಯಾಲೆಸ್ತೀನ್​ ಕಡೆಯ 36 ಖಾಲಿ ಟ್ರೇಲರ್‌ಗಳು ಟರ್ಮಿನಲ್‌ಗೆ ಪ್ರವೇಶಿಸಿ ಈಜಿಪ್ಟಿನ ಕಡೆಗೆ ಹೋಗಿ, ನೆರವನ್ನು ಲೋಡ್ ಮಾಡಿಕೊಂಡು ರಫಾ ಗಡಿಯ ಮೂಲಕ ಗಾಜಾಗೆ ತೆರಳಿದವು. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಹ ಶುಕ್ರವಾರ ಈಜಿಪ್ಟ್ ಕ್ರಾಸಿಂಗ್ ಬದಿಗೆ ಭೇಟಿ ನೀಡಿ ನೆರವು ವಿತರಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಇವು ಕೇವಲ ಟ್ರಕ್​ಗಳಲ್ಲ, ಜೀವರಕ್ಷಕಗಳು ಎಂದು ಮಾಧ್ಯಮಗಳಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಅ.7ರ ದಾಳಿಗೆ ಪ್ರತಿಯಾಗಿ ಇಸ್ರೇಲ್​ ನಡೆಸುತ್ತಿರುವ ದಾಳಿಗೆ ಗಾಜಾ ಸಂಪೂರ್ಣ ನಲುಗಿ ಹೋಗಿದೆ. ವೆಸ್ಟ್​ ಬ್ಯಾಂಕ್​ನಲ್ಲೂ ಇಸ್ರೇಲ್​ ರಕ್ಷಣಾ ಪಡೆಗಳು ದಾಳಿ ನಡೆಸುತ್ತಿವೆ. ಇಸ್ರೇಲ್​ ನಡೆಸಿದ ಬಾಂಬ್​ ದಾಳಿಯಲ್ಲಿ ಈವರೆಗೂ 4300ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನ್​ನಲ್ಲಿ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧವೂ ಎರಡು ವಾರಗಳನ್ನು ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಈಜಿಪ್ಟ್​​ನಲ್ಲಿ ನಡೆದ ಶಾಂತಿ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಾನವೀಯ ಕದನ ವಿರಾಮಕ್ಕಾಗಿ ಒತ್ತಾಯಿಸಿದ್ದಾರೆ. ಆದರೂ ಇಸ್ರೇಲ್​ ಮಾತ್ರ ಗಾಜಾ ಮೇಲಿನ ತನ್ನ ದಾಳಿಯನ್ನು ಮಾತ್ರ ಮುಂದುವರಿಸಿದೆ.(ಏಜೆನ್ಸೀಸ್​)
ಈಜಿಪ್ಟ್​ನಿಂದ ರಫಾ ಗಡಿಯ ಮೂಲಕ ಯುದ್ಧಪೀಡಿತ ಗಾಜಾ ಕಡೆ ಹೊರಟ ನೆರವು ತುಂಬಿದ ಟ್ರಕ್​ಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
