ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಹಾಗೂ ಸೇವಾ ಔರ್ ಸಮರ್ಪಣ್ ಅಭಿಯಾನದ ಭಾಗವಾಗಿ ದೇಶಾದ್ಯಂತ ಶುಕ್ರವಾರ ಆಯೋಜಿಸಿದ್ದ ಬೃಹತ್ ಕೋವಿಡ್ ಲಸಿಕೆ ಅಭಿಯಾನದಲ್ಲಿ ಒಂದೇ ದಿನ 2 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕರ್ನಾಟಕ 26.92 ಲಕ್ಷ, ಬಿಹಾರ 26.62 ಲಕ್ಷ, ಉತ್ತರ ಪ್ರದೇಶ 24.86 ಲಕ್ಷ, ಮಧ್ಯಪ್ರದೇಶ 23.79 ಲಕ್ಷ, ಗುಜರಾತ್ 20.46 ಲಕ್ಷ ಡೋಸ್ ಲಸಿಕೆ ವಿತರಿಸಿವೆ.
ಕೋವಿನ್ ಪೋರ್ಟಲ್ ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿ 9.15ರ ಹೊತ್ತಿಗೆ 2,24,65,509 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಲಸಿಕೆ ನೀಡಿಕೆ ಪ್ರಮಾಣ 78.68 ಕೋಟಿ ದಾಟಿದೆ. ಈ ಹಿಂದೆ 85 ದಿನಗಳಲ್ಲಿ 10 ಕೋಟಿ ಡೋಸ್ ಲಸಿಕೆ ವಿತರಿಸಲಾಗಿತ್ತು. ನಂತರ ಕೇವಲ 45 ದಿನಗಳಲ್ಲಿ 20 ಕೋಟಿ, ಬಳಿಕ 29 ದಿನಗಳಲ್ಲಿ 30 ಕೋಟಿ, 24 ದಿನಗಳಲ್ಲಿ 40 ಕೋಟಿ, 20 ದಿನಗಳಲ್ಲಿ 50 ಕೋಟಿ ಲಸಿಕೆ ನೀಡಲಾಯಿತು. ಆಗಸ್ಟ್ 6ರ ನಂತರ 19 ದಿನಗಳಲ್ಲಿ ಲಸಿಕೆ ವಿತರಣೆ ಪ್ರಮಾಣ 60 ಕೋಟಿ ಡೋಸ್ ಮೀರಿದೆ. ಬಳಿಕ ಕೇವಲ 13 ದಿನಗಳಲ್ಲಿ (ಸೆಪ್ಟೆಂಬರ್ 7ರಿಂದ 19ರವರೆಗೆ) ಒಟ್ಟು ಲಸಿಕೆ ವಿತರಣೆ ಪ್ರಮಾಣ 70 ಕೋಟಿ ಡೋಸ್ ಮೀರಿದೆ.
ಗುರಿ ಮೀರಿದ 9 ಜಿಲ್ಲೆಗಳು:ಲಸಿಕೆ ಮೇಳದಲ್ಲಿ ಬೆಂಗಳೂರು ನಗರ ಶೇ.138, ಶಿವಮೊಗ್ಗ ಶೇ.131, ಧಾರವಾಡ ಶೇ.123, ರಾಮನಗರ ಶೇ.121, ಹಾಸನ ಶೇ.117, ದಾವಣಗೆರೆ ಶೇ.107, ಚಿಕ್ಕಮಗಳೂರು ಶೇ.103, ಹಾವೇರಿ ಶೇ.100 ಹಾಗೂ ತುಮಕೂರು ಶೇ.100 ಲಸಿಕೆ ವಿತರಿಸುವ ಮೂಲಕ ಈ ಒಂಬತ್ತು ಜಿಲ್ಲೆಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ.
ಕರ್ನಾಟಕದಲ್ಲಿ 26.92 ಲಕ್ಷ ಡೋಸ್:ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 3,17,5000 ಡೋಸ್ ಲಸಿಕೆ ವಿತರಣೆ ಗುರಿ ಹೊಂದಲಾಗಿತ್ತು. ರಾತ್ರಿ 8.30ರ ವೇಳೆಗೆ 2,92,962 ಡೋಸ್ ಲಸಿಕೆ ವಿತರಿಸಿ ಮೂಲಕ ದಾಖಲೆ ಸೃಷ್ಟಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೂ ವಿತರಣೆಯಾದ ಲಸಿಕೆಯ ಒಟ್ಟು ಸಂಖ್ಯೆ 5.12 ಕೋಟಿ ಡೋಸ್ ಮೀರಿದೆ.
ಹೊಸ ಮೈಲಿಗಲ್ಲಿಗೆ ಡಾ.ಸುಧಾಕರ್ ಸಂತಸ:ಲಸಿಕೆ ವಿತರಣೆಯಲ್ಲಿ ಕರ್ನಾಟಕ ಹೊಸ ದಾಖಲೆ ಸೃಷ್ಟಿಸಿದೆ. ಈ ಕಾರ್ಯದಲ್ಲಿ ಕಳೆದ ಏಳು ತಿಂಗಳಿಂದ ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಕಾರ್ಯಕರ್ತರಿಗೆ ಧನ್ಯವಾದ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಧನ್ಯವಾದ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
9 ತಿಂಗಳ ಮಗುವನ್ನು ಕೊಂದರು?; ಬಳಿಕ ಕುಟುಂಬದ ನಾಲ್ವರೂ ಆತ್ಮಹತ್ಯೆ ಮಾಡಿಕೊಂಡರು!; ಶವಗಳ ಮಧ್ಯೆ 4 ದಿನ ಕಳೆದಳು ಪುಟ್ಟ ಬಾಲಕಿ..

ಸ್ಟಾರ್ ನಟನ ತೋಟದಲ್ಲಿ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರ; ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 16 =
Remember me
