ಲಡಾಖ್ ಪ್ರದೇಶದಲ್ಲಿ ಚೀನಾ ಅನಗತ್ಯವಾಗಿ ತೆಗೆಯುತ್ತಿರುವ ತಗಾದೆ ಭಾರತ ಮತ್ತು ಚೀನಾ ನಡುವೆ ಹಲವು ದಿನಗಳಿಂದ ಉದ್ವಿಗ್ನತೆಗೆ ಕಾರಣವಾಗಿರುವುದು ಗೊತ್ತೇ ಇದೆ. ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಸಚಿವರ ಮಟ್ಟದ ಸಭೆಯ ವೇಳೆ, ಗುರುವಾರ ಭಾರತ ಹಾಗೂ ಚೀನಾ ವಿದೇಶಾಂಗ ಸಚಿವರ ನಡುವೆ ಮಾತುಕತೆ ಆಗಿದ್ದು, ಕೆಲವು ನಿರ್ಣಯಕ್ಕೆ ಬರಲಾಗಿದೆ. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಶಮನಗೊಳಿಸಿ, ಶಾಂತಿ-ಸೌಹಾರ್ದ ನೆಲೆಯಾಗುವಲ್ಲಿ ಇದು ನೆರವಾಗಬಹುದೆಂದು ನಿರೀಕ್ಷಿಸಬಹುದಾದರೂ, ಮಾತಿಗೆ ತಪ್ಪುವ ಜಾಯಮಾನದ ಚೀನಾ ಬಗ್ಗೆ ಭಾರತ ಎಚ್ಚರದ ಕಣ್ಣು ಇಟ್ಟಿರುವುದು ಅನಿವಾರ್ಯ.
ಎರಡೂ ಕಡೆಯ ಭಿನ್ನಾಭಿಪ್ರಾಯಗಳು ವಿವಾದವಾಗಲು ಆಸ್ಪದ ನೀಡಬಾರದು; ಸೇನಾ ಹಂತದ ಮಾತುಕತೆ ನಡೆಯಬೇಕು, ಉದ್ವಿಗ್ನತೆ ಕಡಿಮೆ ಮಾಡಲು ಗಡಿಯಿಂದ ಸೇನೆಗಳ ಸೂಕ್ತ ಅಂತರ ಕಾಯ್ದುಕೊಳ್ಳುವಿಕೆ; ಹಿಂದಿನ ಒಪ್ಪಂದಗಳ ಅನ್ವಯ ಗಡಿಯಲ್ಲಿ ಶಾಂತಿ-ಸ್ಥಿರತೆ ಕಾಪಾಡಲು ಉಭಯ ದೇಶಗಳು ಬದ್ಧವಾಗಿರಬೇಕು; ಗಡಿ ವಿಷಯಕ್ಕೆ ಸಂಬಂಧಿಸಿ ಸೂಕ್ತ ಸಂವಹನ, ಸಹಕಾರಕ್ಕೆ ವಿಶೇಷ ಪ್ರತಿನಿಧಿಗಳ ನಡುವೆ ಮಾತುಕತೆ, ಮತ್ತು ಪರಸ್ಪರ ವಿಶ್ವಾಸವರ್ಧನೆಗೆ ಯತ್ನ- ಈ ಐದು ಅಂಶಗಳ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವಣ ಮಾತುಕತೆಯಲ್ಲಿ ನಿರ್ಧರಿಸಲಾಗಿದೆ. ಗಡಿ ಪ್ರಕ್ಷುಬ್ಧತೆಯನ್ನು ತಗ್ಗಿಸಿ, ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವಲ್ಲಿ ಈ ಅಂಶಗಳು ಸಹಕರಿಸುತ್ತವೆ ಎಂಬುದೇನೋ ನಿಜ. ಆದರೆ ಮಾತುಕತೆಯಲ್ಲಿ ಒಪ್ಪಿಕೊಳ್ಳಲಾದ ಅಂಶಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವುದು ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಚೀನಾದ ಈ ಹಿಂದಿನ ನಡೆಗಳು ಸಮಾಧಾನಕರವಾಗಿಲ್ಲ ಎಂಬುದು ಸ್ಪಷ್ಟಗೋಚರ. ಲಡಾಖ್ ಗಡಿಯಲ್ಲಿ ಶಾಂತಿ ಕಾಪಾಡುವ ಬಗ್ಗೆ ಮತ್ತು ಪರಸ್ಪರರ ಮೇಲೆ ದಾಳಿಗಿಳಿಯದಂತೆ ಈ ಮುಂಚೆಯೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಪ್ರಕಾರ, ಅಲ್ಲಿ ಎರಡೂ ಕಡೆಯವರು ಬಂದೂಕುಗಳನ್ನು ಬಳಸುವಂತಿಲ್ಲ. ಆದರೆ ಚೀನಾ ಎಂಥ ಕುತಂತ್ರಿ ಎಂದರೆ, ಮಚ್ಚು, ಭರ್ಚಿ ಮತ್ತಿತರ ಆಯುಧಗಳ ಮುಖಾಂತರ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದರು. ಆಗ ಭಾರತದ 20 ಯೋಧರು ಹುತಾತ್ಮರಾಗಿದ್ದರು. ನಂತರದಲ್ಲಿಯೂ ಚೀನಾ ಕಡೆಯಿಂದ ಇಂಥ ಕೃತ್ಯ ನಡೆದಿದೆ. ಇದಕ್ಕೆಲ್ಲ ಭಾರತದ ಯೋಧರು ತಕ್ಕ ಪ್ರತ್ಯುತ್ತರವನ್ನೇ ನೀಡುತ್ತಿದ್ದಾರೆ. ಆದರೆ ಎರಡು ಬಲಿಷ್ಠ ದೇಶಗಳ ನಡುವೆ ಹೀಗೆ ಬಹುಕಾಲ ಉದ್ವಿಗ್ನ ಸ್ಥಿತಿ ಜಾರಿಯಲ್ಲಿರುವುದು ಒಳ್ಳೆಯದಲ್ಲ. ಅದರಲ್ಲೂ ಕರೊನಾ ಹಾವಳಿಯಿಂದ ಚೇತರಿಸಿಕೊಳ್ಳುವುದು ಮೊದಲ ಆದ್ಯತೆಯಾಗಿರುವ ಈ ಸಂದರ್ಭದಲ್ಲಿ ಸೇನಾ ಬಿಕ್ಕಟ್ಟು ಸಲ್ಲದು. ಆದರೆ ಈ ವಿಷಯದಲ್ಲಿ ಭಾರತಕ್ಕಿಂತ ಚೀನಾ ಹೆಚ್ಚು ಬದ್ಧತೆಯಿಂದ ವರ್ತಿಸಬೇಕಿದೆ. ಏಕೆಂದರೆ, ಭಾರತ ಮಾತಿಗೆ ತಪ್ಪಿದ ನಿದರ್ಶನವಿಲ್ಲ ಮತ್ತು ವಿಸ್ತರಣಾವಾದದ ಆಲೋಚನೆಯೂ ಭಾರತಕ್ಕಿಲ್ಲ. ಚೀನಾ ಈಗ ಹೆಚ್ಚು ಜಾಗರೂಕವಾಗಿ ವರ್ತಿಸದಿದ್ದರೆ, ಮೊದಲೇ ಕುಸಿದಿರುವ ಅದರ ಜಾಗತಿಕ ವರ್ಚಸ್ಸು ತಗ್ಗುವುದು ಖಚಿತ. ಅದೇ ಸಂದರ್ಭದಲ್ಲಿ ಭಾರತದ ಬಗ್ಗೆ ಜಾಗತಿಕ ದೇಶಗಳ ನಂಬಿಕೆ ಹೆಚ್ಚಿದೆ.
VIDEO: ನೌಕಾಪಡೆ ನಿವೃತ್ತ ಅಧಿಕಾರಿಯನ್ನು ಥಳಿಸಿದ ಶಿವಸೇನೆ ಗೂಂಡಾಗಳು; ಕಣ್ಣಿಗೆ ಗಂಭೀರ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
