ನವದೆಹಲಿ:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್​ಎಸ್​ಸಿ) ಖಾಯಂ ಸದಸ್ಯತ್ವಕ್ಕಾಗಿ ಬಹುಕಾಲದಿಂದ ಬೇಡಿಕೆ ಇಟ್ಟುಕೊಂಡು ಬಂದಿರುವ ಭಾರತದ ಪರ ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್​ ಬ್ಯಾಟ್​ ಬೀಸಿದ್ದಾರೆ.
ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲಾವ್ರೋವ್​, ಭಾರತ ಖಂಡಿತವಾಗಿ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿರಬೇಕೆಂಬುದನ್ನು ನಾವು ನಂಬಿದ್ದೇವೆ ಎಂದಿದ್ದಾರೆ.
ಆರ್ಥಿಕ ಶಕ್ತಿಯ ಹೊಸ ಕೇಂದ್ರ, ಹಣಕಾಸು ಸುಸ್ಥಿತಿ ಮತ್ತು ರಾಜಕೀಯ ಪ್ರಭಾವವೆಂಬ ವಸ್ತುನಿಷ್ಠ ಪ್ರಕ್ರಿಯೆಗಳು ಜಾಗತಿಕ ಅಭಿವೃದ್ಧಿ ಟ್ರೆಂಡ್​ನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅವುಗಳಲ್ಲಿ ಭಾರತವು ಒಂದಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಬೆಂಬಲ ನೀಡುವುದಾಗಿ ಲಾವ್ರೋವ್​ ಘೋಷಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + one =
Remember me
