ನವದೆಹಲಿ:ಜಾಗತಿಕವಾಗಿ ತೈಲ ಬೆಲೆ ಕುಸಿತದ ಸಂಪೂರ್ಣ ಲಾಭ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದುವರೆಗೂ 32 ದಶಲಕ್ಷ ಟನ್​ ತೈಲವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್​ ತಿಳಿಸಿದ್ದಾರೆ.ವಿಶ್ವದಲ್ಲಿ ಅತಿಹೆಚ್ಚು ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.
ಕೋವಿಡ್​ 19 ಲಾಕ್​ಡೌನ್​ನಂಥ ಸವಾಲುದಾಯಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಲಾಕ್​ಡೌನ್​ನಿಂದಾಗಿ ಜಾಗತಿಕವಾಗಿ ತೈಲಕ್ಕೆ ದಿಢೀರನೆ ಬೇಡಿಕೆ ಕಡಿಮೆಯಾಯಿತು. ಇದರಿಂದಾಗಿ ಬೆಲೆ ಕಡಿಮೆಯಾಯಿತು. ಇಂಧನ ಕ್ಷೇತ್ರದಲ್ಲಿ ಇದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಹಿಂದೆಂದೂ ಈ ರೀತಿಯ ಬೆಳವಣಿಗೆಯನ್ನು ಕಂಡಿರಲಿಲ್ಲ. ಇದರಿಂದಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿಯಿತು. ಅಮೆರಿಕದಲ್ಲಂತೂ ಬೆಲೆಗಳು ಮೈನಸ್​ ಮಟ್ಟಕ್ಕೆ ಕುಸಿಯಿತು ಎಂದು ಹೇಳಿದರು.
ಇದನ್ನೂ ಓದಿ:ಮಾನವ ಕರುಳಿನಲ್ಲೂ ವೃದ್ಧಿಸುವ ಕರೊನಾ 19 ವೈರಾಣು
ಈ ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲು ಮುಂದಾದ ಭಾರತ ತನ್ನ ಸಂಗ್ರಹಗಾರಗಳೆಲ್ಲವನ್ನೂ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿತು ಎಂದು ತಿಳಿಸಿದರು.
ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್​ನಿಂದ ಒಟ್ಟಾತೆ 5.33 ದಶಲಕ್ಷ ಟನ್​ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಯಿತು. ಬೇಡಿಕೆ ಮತ್ತು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ವಿಮೆ ರೂಪದಲ್ಲಿ ಈ ಪ್ರಮಾಣದ ತೈಲವನ್ನು ಮಂಗಳೂರಿನ ಪದೂರು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಭೂಗತ ಸಂಗ್ರಹಗಾರದಲ್ಲಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಇದಲ್ಲದೆ 7 ದಶಲಕ್ಷ ಟನ್​ ತೈಲ ಸಮುದ್ರದಲ್ಲಿರುವ ತೈಲ ಸಾಗಿಸುವ ನೌಕೆಗಳಲ್ಲಿ ಭರ್ತಿ ಮಾಡಲಾಗಿದೆ. ಅಂತೆಯೇ 25 ದಶಲಕ್ಷ ಟನ್​ ತೈಲವನ್ನು ದೇಶದೊಳಗಿನ ತೈಲಸಂಗ್ರಹಗಾರಗಳಲ್ಲಿ ಟ್ಯಾಂಕ್​ಗಳಲ್ಲಿ ಸಂಸ್ಕರಣಾ ಕೇಂದ್ರಗಳ ಪೈಪ್​ಲೈನ್​ಗಳಲ್ಲಿ ಮತ್ತು ಉತ್ಪನ್ನದ ಟ್ಯಾಂಕ್​ಗಳಲ್ಲಿ ಭರ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಜಗತ್ತಿನಾದ್ಯಂತ ಏರುಗತಿಯಲ್ಲಿದೆ ಚೀನಾ ವಿರೋಧಿ ಭಾವನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − six =
Remember me
