ನವದೆಹಲಿ:ಕರೊನಾ ಸಾಂಕ್ರಾಮಿಕತೆ ಕಂಗೆಡಿಸಿದ್ದ 2020ರಲ್ಲಿ ಭಾರತದಲ್ಲಿ 12,526 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 34 ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಬಹಳಷ್ಟು ರಾಜ್ಯಗಳಲ್ಲಿ ಪ್ರತಿ ದಿನ ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಆತ್ಮಹತ್ಯೆ ಕುರಿತ ಇತ್ತೀಚಿನ ಅಂಕಿಸಂಖ್ಯೆಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಶೇಕಡ 21ಕ್ಕಿಂತ ಅಧಿಕ ಏರಿಕೆಯಾಗಿದೆ.
ಕರ್ನಾಟಕ ಸಹಿತ ಆರು ರಾಜ್ಯಗಳ ಪಾಲೇ ಸುಮಾರು ಶೇಕಡ 53 ಆಗಿದೆ, ಅಂದರೆ 6,598 ಎಳೆ ಜೀವಗಳು ಮಡಿದಿವೆ. ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ, ತಮಿಳುನಾಡು ಮತ್ತು ಜಾರ್ಖಂಡ್ ಹೆಚ್ಚು ಆತ್ಮಹತ್ಯೆ ದಾಖಲಾದ ಇತರ ಐದು ರಾಜ್ಯಗಳು. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5,928 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊಲ್ನುಪಿರವಿರ್ ಮಾತ್ರೆಗೆ ಶೀಘ್ರ ಸಮ್ಮತಿ:ಅಮೆರಿಕ ಮೂಲದ ಮೆರ್ಕ್ ಕಂಪನಿಯ ಲಸಿಕೆ ಬದಲಿಗೆ ಅಭಿವೃದ್ಧಿಪಡಿಸಿರುವ ಮೊಲ್ನುಪಿರವಿರ್ ಮಾತ್ರೆಗೆ ಒಂದೆರಡು ದಿನದಲ್ಲಿ ಭಾರತೀಯ ಔಷಧ ನಿಯಂತ್ರಕರು ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಆಸ್ಪತ್ರೆಗೆ ದಾಖಲಾಗುವ ಅಪಾಯದಲ್ಲಿರುವ ವಯಸ್ಕರಿಗಾಗಿ ಈ ಮಾತ್ರೆಯನ್ನು ತಯಾರಿಸಲಾಗಿದ್ದು, ಇದರ ದರ 2,000ದಿಂದ 4,000 ರೂ. ಇರಬಹುದು ಎನ್ನಲಾಗಿದೆ. ಮೊಲ್ನುಪಿರವಿರ್ ಮಾತ್ರೆಯನ್ನು ಭಾರತದಲ್ಲಿ ಉತ್ಪಾದಿಸಲು ಐದು ಕಂಪನಿಗಳ ಒತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಜರ್ಮನಿಯಲ್ಲಿ ದಾಖಲೆಯ ದೈನಿಕ ಕೇಸ್:ಜರ್ಮನಿಯಲ್ಲಿ ಗುರುವಾರ ಕರೊನಾ 50,196 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಸತತ ಐದನೇ ದಿನ ದಾಖಲೆಯ ದೈನಿಕ ಪ್ರಕರಣವಾಗಿದೆ.
13,091 ಹೊಸ ಕೇಸ್:ಭಾರತದಲ್ಲಿ ಗುರುವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಕೋವಿಡ್ ಸೋಂಕಿನ 13,091 ಹೊಸ ಪ್ರಕರಣಗಳು ದೃಢಪಟ್ಟಿವೆ. 340 ರೋಗಿಗಳು ಮೃತಪಟ್ಟಿದ್ದಾರೆ. ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 4,62,189ಕ್ಕೆ ತಲುಪಿದೆ. ಈ ಅವಧಿಯಲ್ಲಿ 13,878 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಕರೊನಾ-ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದವರಲ್ಲಿ 12 ಕೋಟಿಗೂ ಹೆಚ್ಚು ಜನರು ಎರಡನೇ ಡೋಸ್ ಪಡೆಯಲು ಬಾಕಿಯಿದೆ.
|ಮನಸುಖ್ ಮಾಂಡವೀಯಕೇಂದ್ರ ಆರೋಗ್ಯ ಸಚಿವ
ಒಂದೇ ಕುಟುಂಬದ ಐವರ ಆತ್ಮಹತ್ಯೆ; ಅನುಮಾನ ಯಾರ ಮೇಲೆ ಗೊತ್ತೇ?

ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
